Sunday, 15th December 2024

ಸಿಎಂ ಬಿಎಸ್’ವೈ ನಿವಾಸದಲ್ಲಿ ಮೊಮ್ಮಗಳ ವಿವಾಹ ಸಂಭ್ರಮ, ಇಂದು ಆರತಕ್ಷತೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಮದುವೆ ಸಂಭ್ರಮ. ಸಿಎಂ ಮೊಮ್ಮಗಳು (ಪುತ್ರಿ ಅರುಣಾದೇವಿ ಅವರ ಪುತ್ರಿ) ಮಾಧುರ್ಯ ಅವರ ವಿವಾಹ ಇದೇ ಫೆ.25 ರಂದು ಜರುಗಲಿದ್ದು, ಫೆ.24 ರಂದು ಸಂಜೆ ಆರತಕ್ಷತೆ ನಡೆಯಲಿದೆ.

ಅರುಣಾದೇವಿ ಪುತ್ರಿ ಮಾಧುರ್ಯ ಅವರ ವಿವಾಹವು ನಿಖಿಲ್ ಅವರ ಜತೆ ನೆರವೇರಲಿದೆ. ಈ ಸಂಭ್ರಮದಲ್ಲಿರುವ ಯಡಿಯೂ ರಪ್ಪ ಕುಟುಂಬದೊಂದಿಗೆ ಸಮಯ ಕಳೆಯಲಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಮಕ್ಕಳಿಗೆ ಮದುವೆ ಮಾಡಿಸಿ ಸಂಭ್ರಮಿಸಿದ್ದರು. ರಾಜಕೀಯ ಗಣ್ಯರು ವಧು ವರರನ್ನು ಆಶೀರ್ವದಿಸಿದ್ದರು. ಇನ್ನು ಡಿ.ಕೆ.ಶಿವಕುಮಾರ್ ಪುತ್ರಿ ವಿವಾಹ ಇದೇ ತಿಂಗಳ 14 ರಂದು ನೆರವೇರಿತ್ತು. ಕೆಫೆ ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ ಮಗ ಅಮಾರ್ಥ್ಯ ಜತೆ ಪುತ್ರಿ ಐಶ್ವರ್ಯಾ ಹಸೆಮಣೆ ಏರಿದ್ದರು.

ಮದುವೆಗೆ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ದಂಪತಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸುಧಾಕರ್, ಡಾ.ಜಿ.ಪರಮೇಶ್ವರ್, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.