Sunday, 15th December 2024

ಪಾವಗಡದಲ್ಲಿ ಗೋಡಂಬಿ ಎಂದೇ ಹೆಸರುವಾಸಿಯಾದ ಶೇಂಗಾ ಬಂಪರ್ ಬೆಳೆ ಬೆಳೆದ ರೈತ ಕುಲಾಯಪ್ಪ

ವರದಿ: ಇಮ್ರಾನ್ ಉಲ್ಲಾ

ಪಾವಗಡ ಎಂದರೆ ಸಾಕು ಬರ ಎಂಬ ಹೆಸರಿಗೆ ಹೆಸರುವಾಸಿಯಾದ ತಾಲ್ಲೂಕು.

ಈ ಭಾಗದ ಶೇಂಗಾ ಎಂದರೆ ಸಾಕು ಒಂದು ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ರಾಶಿ ರಾಶಿ ಶೇಂಗಾ ಕಾಣಬಹುದಾಗಿತ್ತು. ಇಲ್ಲಿನ ಶೇಂಗಾಕ್ಕೆ ಬಾರಿ ಬೇಡಿಕೆ ಇತ್ತು. ಹೊರ ರಾಜ್ಯಗಳಾದ ಮಹಾರಾಷ್ಟ್ರ. ಬಾಂಬೆ ಪೂನಾ ರಾಜ್ಯದ ಹಲವು ಕಡೆಗಳಲ್ಲಿ ಪಾವಗಡದ ಶೇಂಗಾ ಹೆಸರು ವಾಸಿಯಾದುದ್ದು, ಈ ಭಾಗದ ರೈತರಿಗೆ ಶಾಶ್ವತವಾದ ನೀರಿನ ಮೂಲ ಇಲ್ಲದೆ ಇರುವುದರಿಂದ ಯಾವೂದೇ ಬೆಳೆ ಬೆಳೆಯಲು ರೈತ ಹಿಂದೇಟು ಹಾಕುವಂತಹ ಪರಿಸ್ಥಿತಿ ಇಲ್ಲಿನ ರೈತರದು.

ಅದರಲ್ಲೂ ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಅಲ್ಪಸ್ವಲ್ಪ ನೀರು ಬಳಸಿ ಕೇಲವಂದು ಬೆಳೆ ಬೆಳೆಯಲು ರೈತ ಮುಂದಾಗುತ್ತಿದ್ದಾರೆ. ಅದರಲ್ಲೂ ಉತ್ತಮ ಶೇಂಗಾ ಬೆಳೆಯುವ ಮೂಲಕ ಮಾದರಿಯಾದ ರೈತ ಕುಲಾಯಪ್ಪ, ಶಾಶ್ವತವಾದ ನೀರಿನ ಮೂಲ ಇಲ್ಲದ ಕಾರಣ ಈ ಭಾಗದ ರೈತರು 12 ಸಾವಿರ ಎಕರೆ ಜಮೀನು ಸೋಲಾರ್ ಘಟಕಕ್ಕೆ ಗುತ್ತಿಗೆ ರೂಪದಲ್ಲಿ ನೀಡಿದ್ದಾರೆ.

ಇಂತಹ ಸಮಸ್ಯೆಗಳ ಮದ್ಯ ಕುಲಾಯಪ್ಪ ಎಂಬ ರೈತ ಇತ್ತೀಚಿಗೆ ಕಣಿವೆನಹಳ್ಳಿ ಗ್ರಾಮದ ಹತ್ತಿರ ಮೂರು ಎಕ್ಕರೆ ಜಾಮೀನು ಖರೀದಿಸಿ ಅದರಲ್ಲಿ ಕೊಳವೆ ಬೋರ್ ಕೋರೆಯಿಸಿ ಆ ನೀರು ಬಳಸಿ ಕಡಲೇ ಬಿತ್ತನೆ ಮಾಡಿರುತ್ತಾರೆ. ರೈತ ಕುಲಾಯಪ್ಪ ಎಂದೆಂದೂ ಊಹಿಸಲಾಗದ ರೀತಿಯಲ್ಲಿ ಶೇಂಗಾ (ಕಡಲೆಕಾಯಿ) ಫಸಲು ಬಂದಿದ್ದು ಕೇವಲ 35 ಸಾವಿರ ಹಣದಿಂದ ಮೂರು ಎಕ್ಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಈ ಪ್ರದೇಶದ ರೈತರು ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಶೇಂಗಾ ಬಿತ್ತನೆ ಮಾಡುವುದು ಈ ಭಾಗದ ರೈತರು ಕೈ ಬಿಟ್ಟಿದ್ದರು.

ಈ ಹಿಂದೆ ಮೂಲ ಬೆಳೆ ಈ ಭಾಗದಲ್ಲಿ ಎಂದರೆ ಶೇಂಗಾ. ಅದರೆ ಕುಲಾಯಪ್ಪ ಮಾತ್ರ ಹಿಂದೆಲ್ಲ ಶೇಂಗಾದಿಂದಲೇ ಜೀವನ ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು ನಾವು ಕಾಣಬಹುದಾಗಿದೆ. ಕುಟುಂಬದ ನಿರ್ವಹಣೆ, ಮಕ್ಕಳ ಪೋಷಣೆ, ಹತ್ತು ಹಲವು ಕೇಲಸಗಳು ಶೇಂಗಾ ಬೆಳೆದೆ ಜೀವನ ಸಾಗಿಸುತ್ತಿದ್ದು ಈ ಭಾಗದ ಇತಿಹಾಸ ವಾಗಿದೆ.

ರೈತ ಕುಲಾಯಪ್ಪ ಯಾವುದಕ್ಕೆ ಅಂಜದೆ ಶೇಂಗಾ ಬೀಜ ಬಿತ್ತನೆಗೆ ಮುಂದಾಗಿ ದ್ದಾರೆ. ಯಾರು ಉಹಿಸದ ರೀತಿಯಲ್ಲಿ ಬಂಪರ್ ಕಡ್ಲೆ ಬೆಳೆ ಬಂದಿರುವುದು ಕಾಣಬಹುದಾಗಿದೆ. ಒಂದು ಗಿಡಕ್ಕೆ ಸರಿಸಮ ಸುಮಾರು ನೂರೈವತ್ತು ರಿಂದ ಇನ್ನೂರು ಕಡಲೆ ಕಾಯಿ ಬೆಳೆದಿವೆ.

ಈ ಭಾಗದ ಗೋಡಂಬಿ ಎಂದೇ ಕರೆಯಲ್ಪಡುವ ಶೇಂಗಾ ಉತ್ತಮ ರೀತಿಯಲ್ಲಿ ಬೆಳೆದು ಈ ಭಾಗದ ಮಾದರಿ ರೈತ ಎಂಬುದು ಸಾಧಿಸಿದ್ದಾರೆ. ಇವರು ಬೆಳೆದ ಶೇಂಗಾ ಮಾದರಿಯನ್ನು ತಾಲ್ಲೂಕಿನ ಬೇರೊಬ್ಬ ರೈತರು ಇಂತಹ ಕಡ್ಲೆ ಬೆಳೆ ಯಲು ಮುಂದಾಗ ಬಹುದು ಎಂಬುದು ಸ್ಥಳಿಯ ರೈತ ವಳ್ಳುರು ಹನುಮಂತ ರೆಡ್ಡಿ ತಿಳಿಸಿದ್ದಾರೆ.