ಇಂಡಿ: ಇಂದು ಬಿಜೆಪಿ ಇಂಡಿ ಮಂಡಲ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರ ೫ ಗ್ಯಾರಂಟಿಗಳು ಚುನಾವಣಾ ಪ್ರಣಾಳಿಕೆಯನ್ನು ಹೋರಡಿಸಿ ಜನರಿಗೆ ಮೋಸ ಮಾಡಿದೆ ಎಂದು ಗ್ಯಾರಂಟಿ ಯೋಜನೆಗಳು ಪೂರ್ಣಗೋಳಿಸು ವಂತೆ ಒತ್ತಾಯಿಸಿ ತಹಶೀಲ್ದಾರ ಇವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಣಮಂತರಾಯಗೌಡ ಪಾಟೀಲ ಮಾತನಾಡಿ ಚುನಾವಣಾ ಮುನ್ನ ನೀಡಿದ ಗ್ಯಾರಂಟಿಗಳ ಜಾರಿ ವಿಳಭ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಜನರಿಗೆ ಮೋಸ ಮಾಡಿದೆ. ಇವರ ಗ್ಯಾರಂಟಿ ಗಳಿ0ದ ಸರಕಾರಿ ಅಧಿಕಾರಿಗಳಿಗೆ ಸಾರ್ವಜನಿಕರು ಏಟು ತಿನ್ನುತ್ತಿದ್ದಾರೆ. ಇಂದು ಪ್ರತಿಮನೆಗಳಲ್ಲಿ ಅತ್ತೆ ,ಸೋಸೆ ಯಿಂದಿಯರ ಮಧ್ಯ ಜಗಳ ಪ್ರಾರಂಭ ಮಾಡಿಸಿದ್ದಾರೆ. ಸರಕಾರ ಯಾವುದೇ ಷರತ್ತುಗಳಿಲ್ಲದೆ ಗ್ಯಾರಂಟಿ ಯೋಜನೆ ಗಳು ಸರಳ ರೀತಿಯಲ್ಲಿ ಇಡೇರಿಸಬೇಕು ಇಲ್ಲವಾದಲ್ಲಿ ಬಿಜೆಪಿ ಪಕ್ಷದಿಂದ ರಾಜ್ಯವ್ಯಾಪಿ ಹೋರಾಟ ಮಾಡಲಾಗು ವುದು ಎಂದು ಎಚ್ಚರಿಕೆ ನೀಡಿದರು.
ಕಾಸುಗೌಡ ಬಿರಾದಾರ ಮಾತನಾಡಿ ೭೦ ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ವಿರುದ್ಧ ಸಾಧನೆ ಶೂನ್ಯ ಕೇವಲ ದಲಿತ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ ಮತಪಡೆದು ಇಂದು ಸಾಕಷ್ಟು ಕುಟುಂಬಗಳ ಅತ್ತೆ, ಸೋಸೆ ಯಂದಿರಗಳ ಮಧ್ಯ ವಿಷ ಬೀಜ ಬಿತ್ತುತ್ತಿದೆ. ಚುನಾವಣೆಗೂ ಮುನ್ನ ನನಗೂ ಫ್ರೀ ನಿನಗೂ ಫ್ರೀ ಎಂದಿದ ಕಾಂಗ್ರೆಸ್ ನಾಯಕರು ಸದ್ಯ ಮಾರ್ಗಸೂಚಿ ಮಾನದಂಡ ಹೇರುತ್ತಿರುವುದು ಕಾಂಗ್ರೆಸ್ ನಾಯಕರಿಗೆ ನಾಚೀಗೆಯಾಗಬೇಕು.
ಅಧಿಕಾರಕ್ಕೆ ಬಂದ ೨೪ ಗಂಟೆಯೋಳಗೆ ಎಂದು ಹೇಳಿರುವ ನೀವು ೨೦ ದಿನಗಳಾದರೂ ಜಾರಿಗೊಳಿಸಿಲ್ಲ ಇದು ಲೋಕಸಭಾ ಚುನಾವಣಾ ಗಿಮಿಕ್ಕಿ ಕಾಂಗ್ರೆಸ್ ಲೋಕಸಭಾ ಚುನಾವಣಾ ನಂತರ ಎಲ್ಲ ಯೋಜನೆಗಳು ಕುಂಟಿತಗೊAಡು ಕಾಂಗ್ರೆಸ್ ನಾಯಕರುಗಳು ಮಧ್ಯಂತರ ಮುಖ್ಯ ಮಂತ್ರಿಗಳ ಅಧಿಕಾರದ ಗುದ್ದಾಟದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಜನರಿಗೆಸುಳ್ಳು ಹೇಳಿದ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಜನರಿಂದಲೆ ತಕ್ಕ ಉತ್ತರ ನೀಡಲ್ಲಿದ್ದಾರೆ ಎಂದರು.
ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣಿ, ರಾಜಕುಮಾರ ಸಗಾಯಿ ಮಾತನಾಡಿದರು.
ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ಶೀಲವಂತ ಉಮರಾಣಿ, ರವಿ ವಗ್ಗೆ, ರಮೇಶ ಧರೇನವರ್, ಚನ್ನುಗೌಡ ಪಾಟೀಲ, ರಾಜಕುಮಾರ ಸಗಾಯಿ, ಅನೀಲಗೌಡ ಬಿರಾದಾರ,ಶಾಂತು ಕಂಬಾರ.ಭಿಮರಾಯಗೌಡ ಬಿರಾದಾರ, ಮಹಾದೇವ ಗುಡ್ಡಡಗಿ, ಜಟ್ಟು ಮರಡಿ, ಅದೃಶ್ಯಪ್ಪ ವಾಲಿ, ಬಾಳು ಮುಳಜಿ, ರಾಜಶೇಖರ ಯರಗಲ್, ಸಂಗನಗೌಡ ಪಾಟೀಲ ಉದಯ ಮಠ, ಗಜಾಸೂರ ಪುಟಾಣಿ, ಸಿದ್ದಲಿಂಗ ಹಂಜಗಿ ಸೇರಿದಂತೆ ಅನೇಕರಿದ್ದರು.