Sunday, 15th December 2024

ಬಿ.ವೈ.ವಿಜಯೇಂದ್ರನಿಗೆ ಹಾನಗಲ್‌ ಉಸ್ತುವಾರಿ

ಬೆಂಗಳೂರು: ಇದೇ ತಿಂಗಳು ನಡೆಯಲಿರುವ ಎರಡು ಉಪಚುನಾವಣೆ ಸಂಬಂಧ ಉಸ್ತುವಾರಿ ಪಟ್ಟಿಯಲ್ಲಿ, ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೆಸರು ಬಿಟ್ಟು ಹೋದದ್ದಕ್ಕೆ, ಪಕ್ಷದ ಕಾರ್ಯಕರ್ತರು ಹಾಗೂ ಸಾಮಾಜಿಕ  ಜಾಲತಾಣಗಳ್ಲಲಿ ಭಾರೀ ಟೀಕೆ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಹಾನಗಲ್ ಉಪಚುನಾವಣೆ ಉಸ್ತುವಾರಿ ಪಟ್ಟಿ ಬದಲಾಗಿ, ಬಿ.ವೈ.ವಿಜಯೇಂದ್ರರಿಗೆ ಹಾನಗಲ್‌ ಉಪಚುನಾವಣೆ ಉಸ್ತುವಾರಿ ನೀಡಲಾಗಿದೆ.

ವಿಜಯೇಂದ್ರ ಹೆಸರು ಬಿಟ್ಟು ಹೋದದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರು.