Sunday, 12th May 2024

ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಮಾಜಿ ಸಚಿವ ಹೆಚ್.ಆಂಜನೇಯ

ಹರಪನಹಳ್ಳಿ: ಈ ದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಪ್ರಜಾಪ್ರಭುತ್ವ ಉಳಿವಿಗಾಗಿ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ
ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟನಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಈ ದೇಶಲಿ ಸಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ಬೇಕು ಎಂದ ಅವರು ಶೋಷಿತ ಸಮುದಾಯಗಳಿಗೆ ಸಮಾನತೆ ಕೊಟ್ಟಿದ್ದು ಇಂದಿರಾ ಗಾ0ಧಿ ಎಂದರು.

ಬಿಜೆಪಿ ತಮ್ಮ ಮಾತುಗಳನ್ನ ಕೇಳದವರ ವಿರುದ್ದ ಆಗಾಗ ಐಟಿ, ಸಿಬಿಐ. ಇಡಿಗಳನ್ನು ಬಳಸಿಕೊಂಡು ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಮತ್ತು ವಾಮ ಮಾರ್ಗದಲ್ಲಿ ಅಧಿಕಾರ ಮಾಡುತ್ತಾರೆ ಮತ್ತು ಅಧಿಕಾರ ಹಿಡಿಯುತ್ತಾರೆ ಎಂದು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟವರು ನಾವು, ಬಿಜೆಪಿ ಅವರು ಓದಿರುವ ಶಾಲಾ ಕಾಲೆಜು, ಆಸ್ಪತ್ರೆ ಕಟ್ಟಿದ್ದೇವೆ. ಪಾಕಿಸ್ತಾನ, ಚೈನಾ ದೇಶದವರ ವಿರುದ್ದ ಯುದ್ಧ ಮಾಡಿದವರು ನಾವು. ಐದು ಗ್ಯಾರಂಟಿ ಪದವನ್ನು ಬಿಜೆಪಿಯರು ಕದ್ದಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಅವರಿಗೆ ಜನ ಬಳಿ ಹೋಗಿ ಮತ ಕೇಳುವ ಹಕ್ಕಿಲ್ಲ. ಈ ಪಂಚ ನ್ಯಾಯ ನೀಡುತ್ತೇವೆ ಎಂದರು.

ಇAದು ಚುನಾವಣೆ ಮಾಡುವುದು ಅಷ್ಟು ಸುಲಭ ಇಲ್ಲ ಇನ್ನೂ ಚಿಕ್ಕ ವಯಸ್ಸು ಇದೆ ಜಾತಿ ನೋಡಿ ನಮಗೆ ಮತ ಹಾಕುತ್ತಾರೆ ಅನ್ನುವುದು ತಪ್ಪು ಕಲ್ಪನೆ. ಈಗಲೂ ಅವಕಾಶ ಇದೆ ಸಿ.ಎಂ.ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಬೆಂಬಲಿಸುವAತೆ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಅವರಿಗೆ ಪರೋಕ್ಷವಾಗಿ ಕಿವಿ ಮಾತು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ ಇಂದು ಶೋಷಿತ ಸಮುದಾಯದವರು ಜಾಗೃತರಾಗಬೇಕು ನಾವು ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಸಂವಿಧಾನವನ್ನು ಬದಲಾವಣೆ ಮಾಡುತ್ತಿದ್ದೇವೆ ಎಂದು ಹೇಳುತ್ತಿರುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಚುನಾವಣೆಲ್ಲಿ ಮತದಾನ ನಮಗೆ ಅಸ್ತç ಅದನ್ನು ನಾವು ಇಂದು ಪ್ರಯೋಗ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ ಅದು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಕೊಂಡು ಹೋಗುವ ಪಕ್ಷ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಎಂ.ಪಿ. ವೀಣಾ ಮಹಾಂತೇಶ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೋಡಿಹಳ್ಳಿ ಭೀಮಣ್ಣ, ಹೆಚ್,ಬಿ. ಪರಶುರಾಮಪ್ಪ, ಕುಭೇರ ಗೌಡ್ರು, ದುರುಗಪ್ಪ ಆಗ್ರಾಹರ ಅಶೋಕ, ಹಲಗೇರಿ ಮಂಜಪ್ಪ, ನರಸಿಂಹರಾಜ್, ಹುಲಿಕಟ್ಟೆ ಚಂದ್ರಪ್ಪ, ಓ.ರಾಮಪ್ಪ, ಹೆಚ್. ಕೋಟ್ರೇಶ್, ಮೋತಿನಾಯ್ಕ, ಎಂ.ಬಿ.ಅAಜಿನಪ್ಪ ಆರ್. ಶಶಿಕುಮಾರ್ ನಾಯ್ಕ, ಇಸ್ಮಾಯಿಲ್ ಎಲಿಗಾರ್, ಪ್ರತಾಪ್, ಹುಚ್ಚಪ್ಪ, ಬೆತೂರು ಮಂಜುನಾಥ್, ಯರಬಾಳು ಹನುಮಂತಪ್ಪ, ಸಿ.ಪರಶುರಾಮಪ್ಪ ಸೇರಿದಂತೆ ಇತರೆ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!