Saturday, 14th December 2024

Harshika Poonacha: ನವರಾತ್ರಿ 2ನೇ ದಿನ ಹೆಣ್ಣು ಮಗುವಿಗೆ ಜನನ ನೀಡಿದ ಹರ್ಷಿಕಾ ಪೂಣಚ್ಚ

harshika poonacha

ಬೆಂಗಳೂರು: ಸ್ಯಾಂಡಲ್‌ವುಡ್‌ (Sandalwood actress) ನಟಿ ಹರ್ಷಿಕಾ ಪೂಣಚ್ಚ (Harshika Poonacha) ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಭುವನ್‌ ಪೊನ್ನಣ್ಣ (Bhuvan Ponnanna) ಸೋಶಿಯಲ್‌ ಮೀಡಿಯಾದಲ್ಲಿ (Social media) ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಹರ್ಷಿಕಾ ಹಾಗೂ ಭುವನ್‌ ಪೊನ್ನಣ್ಣ ಜೋಡಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದೆ. ಮಗಳ ಆಗಮನದಿಂದ ಸಂತಸಗೊಂಡಿರುವ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಈ ಬಗ್ಗೆ ಸೆಲೆಬ್ರೇಷನ್‌ಗೆ ತಯಾರು ಮಾಡಿಕೊಂಡಿದ್ದಾರೆ.

ಭುವನ್‌ ಇನ್‌ಸ್ಟಗ್ರಾಂನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ. “ಎಲ್ಲರಿಗೂ ಹಾಯ್‌, ನಮ್ಮ ‘ಚೈಕಾರ್ತಿ ಮೂಡಿ’ ಜನ್ಮ ತಾಳಿರುವುದನ್ನು ತಿಳಿಸಲು ಬಹಳ ಖುಷಿಯಾಗುತ್ತಿದೆ. ಹರ್ಷಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಸಂಪೂರ್ಣವಾಗಿ ಹರ್ಷಿ ರೀತಿಯಲ್ಲಿಯೇ ಕಾಣುತ್ತಿದ್ದಾಳೆ. ಇನ್ನು ಹರ್ಷಿ ಪ್ರಕಾರ, ಮಗಳು ನನ್ನ ಕಾಪಿ ಎಂದು ಹೇಳುತ್ತಿದ್ದಾಳೆ. ಮುಂದೆ ನೋಡೋಣ..! ಇಲ್ಲಿಯವರೆಗಿನ ಪ್ರಯಾಣದಲ್ಲಿ ಎಲ್ಲರ ಹಾರೈಕೆ ಹಾಗೂ ಪ್ರೀತಿಗೂ ತುಂಬಾ ಥ್ಯಾಂಕ್ಸ್‌. ಎಲ್ಲರಿಗೂ ಪ್ರೀತಿಯಿಂದ..’ ಎಂದು ಭುವನ್‌ ಪೊನ್ನಣ್ಣ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ಪೊನ್ನಣ್ಣ ಮದುವೆಯಾಗಿದ್ದರು.

ಇದನ್ನೂ ಓದಿ: Harshika Poonacha: ತಾಯಿಯಾಗುವ ಸಂಭ್ರಮದಲ್ಲಿರುವ ಹರ್ಷಿಕಾಗೆ ಅದ್ಧೂರಿ ಬೇಬಿ ಶವರ್ ಆಯೋಜಿಸಿದ ಗಣೇಶ್ ದಂಪತಿ