ನವದೆಹಲಿ: ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ(Ex Chief Minister) ಮತ್ತು ಕೇಂದ್ರ ಸಚಿವ(Union Minister) ಹೆಚ್ ಡಿ ಕುಮಾರಸ್ವಾಮಿ(HD Kumaraswamy) ಅವರು ತಮ್ಮ 65ನೇ ಜನ್ಮದಿನದ(Birthday) ಸಂಭ್ರಮದಲ್ಲಿದ್ದು,ಇಂದು ತಮ್ಮ ಹುಟ್ಟುಹಬ್ಬದ ಆಚರಣೆ ಹಿನ್ನೆಲೆ ವಿಶೇಷ ಮಕ್ಕಳಿಗೆ(Specially Abled) ಸ್ವೆಟರ್ ಮತ್ತು ಸಿಹಿ ಹಂಚಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
Thank you, Hon’ble Prime Minister Shri @narendramodi avare, for your warm birthday wishes. Your kind words, vision, and guidance inspire me to work with greater dedication for the progress of our nation. I deeply appreciate your leadership, which continues to strengthen our… https://t.co/ol0jdJ24W0
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 16, 2024
ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಹೆಚ್‌ಡಿಕೆ ತಮ್ಮ ದೆಹಲಿಯ ನಿವಾಸದಲ್ಲಿಯೇ ಉಳಿದಿದ್ದು,ಇಂದು ಮುಂಜಾನೆ ಅಲ್ಲಿನ ಹೌಸ್ ಕಾಸ್ ಶಿವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕುಟುಂಬಸ್ಥರ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ದೇವಸ್ಥಾನದಿಂದ ನೇರ ದೆಹಲಿಯಲ್ಲಿರುವ ಆರ್.ಕೆ.ಪುರಂ ಸೆಕ್ಟರ್ 5ರಲ್ಲಿರುವ ರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ಶಾಲೆಗೆ ತಲುಪಿದ ಅವರು, ಹುಟ್ಟುಹಬ್ಬದ ಆಚರಣೆ ಹಿನ್ನೆಲೆ ಅಲ್ಲಿನ ಮಕ್ಕಳಿಗೆ ಸ್ವೆಟರ್ ಮತ್ತು ಸಿಹಿ ಹಂಚಿ ಮಕ್ಕಳೊಂದಿಗೆ ಖುಷಿಯಿಂದ ಮಾತನಾಡಿ ಸಂಭ್ರಮಪಟ್ಟಿದ್ದಾರೆ.
ಅದ್ಧೂರಿ ಹುಟ್ಟುಹಬ್ಬ ಆಚರಣೆ ಬೇಡ; ಹೆಚ್ಡಿಕೆ
ವಿಜೃಂಭಣೆಯಿಂದ ನನ್ನ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೊನ್ನೆ ತಿಳಿಸಿದ್ದರು. ಈ ಸಂಬಂಧ ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅವರು, “ಡಿಸೆಂಬರ್ 16ರಂದು ನನ್ನ ಜನ್ಮದಿನ ಪ್ರತೀ ವರ್ಷ ಪಕ್ಷದ ಕಾರ್ಯಕರ್ತರು ಬಹಳ ಅರ್ಥಪೂರ್ಣವಾಗಿ ನನ್ನ ಹುಟ್ಟುಹಬ್ಬ ಆಚರಿಸುತ್ತಾ ನನ್ನ ಬದುಕಿಗೆ ಸಾರ್ಥಕತೆ ತಂದು ಕೊಟ್ಟಿದ್ದೀರಿ. ರಾಜಕೀಯವಾಗಿ ನನ್ನ ಯಶಸ್ಸಿಗೆ ಮೂಲ ಆಧಾರಸ್ತಂಭವೇ ತಾವುಗಳು. ಆ ಕೃತಜ್ಞತಾ ಭಾವದಿಂದ ನಿಮಲ್ಲಿ ನನ್ನದೊಂದು ವಿನಮ್ರ ಕಳಕಳಿಯ ಮನವಿ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ನಾನು ನವದೆಹಲಿಯಲ್ಲಿಯೇ ಉಳಿಯಬೇಕಾಗಿದೆ. ಅಲ್ಲದೆ, ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪವೂ ಸಾಗಿದೆ. ಇಂಥಹ ಸನ್ನಿವೇಶದಲ್ಲಿ ವಿಜೃಂಭಣೆಯ ಹುಟ್ಟುಹಬ್ಬ ಬೇಡ. ತಾವುಗಳು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಅಷ್ಟು ಸಾಕು ನನಗೆ. ಸಾಧ್ಯವಾದರೆ ಸಮಾಜಕ್ಕೆ, ದುರ್ಬಲ ಜನರಿಗೆ ಏನಾದರೂ ಸಹಾಯ ಮಾಡಿ. ಜನಸೇವೆ ಜಾತ್ಯತೀತ ಜನತಾದಳ ಪಕ್ಷದ ಮೂಲತತ್ತ್ವ. ಅದೇ ನನಗೆ ತಾವು ನನಗೆ ಕೊಡುವ ಉಡುಗೊರೆ” ಎಂದು ಕಾರ್ಯಕರ್ತರಲ್ಲಿ ಕುಮಾರಸ್ವಾಮಿ ಅವರು ಮನವಿ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: Rapper Chandan Shetty: ನಿವೇದಿತಾ ಗೌಡ ರೀಲ್ಸ್ ಹುಚ್ಚಿಗೆ ಡಿವೋರ್ಸ್ ಕೊಟ್ರಾ ಚಂದನ್ ಶೆಟ್ಟಿ? ಅಭಿಮಾನಿಗಳ ಕಾಮೆಂಟ್ಸ್ ಫುಲ್ ವೈರಲ್!