Thursday, 19th December 2024

HDFC Bank Scholarship: ಹೆಚ್​ಡಿಎಫ್​ಸಿ ಬ್ಯಾಂಕ್​ ಪರಿವರ್ತನ್‌ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ; ಇಲ್ಲಿದೆ ಡಿಟೇಲ್ಸ್‌

HDFC Bank

HDFC Bank Scholarship: ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿಯು ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವಾಗುವ ವಿದ್ಯಾರ್ಥಿವೇತನವನ್ನು ಪ್ರತಿವರ್ಷ ನೀಡುತ್ತಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ ಪರಿವರ್ತನ್‌ ಇಸಿಎಸ್‌ಎಸ್‌ ಯೋಜನೆಯಡಿಯಲ್ಲಿ(HDFC Bank Parivartan’s Educational Crisis Support (ECSS)ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ(Students) ಈ ಆರ್ಥಿಕ ಸಹಾಯ(scholarship) ನೀಡಲಾಗುತ್ತದೆ.

ಈ ಯೋಜನೆಯಡಿ 1-12 ತರಗತಿಯ ವಿದ್ಯಾರ್ಥಿಗಳು, ಡಿಪ್ಲೊಮಾ, ಐಟಿಐ ಮುಂತಾದ ತಾಂತ್ರಿಕ ಶಿಕ್ಷಣ ಪಡೆಯುವವರು, ಪದವಿ ಮತ್ತು ಸ್ನಾತಕೋತ್ತರ ಪದವೀಧರರು ಸೇರಿದಂತೆ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ ಪ್ರಯೋಜನ ಪಡೆದುಕೊಳ್ಳಬಹುದು. ಹಾಗಾದ್ರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆಗಳೇನು? ನಿಯಮಗಳೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಶಾಲಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಈ ಅರ್ಹತೆಗಳಿರಬೇಕು

1-12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸರಕಾರಿ, ಖಾಸಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹಿಂದಿನ ವರ್ಷ ಕನಿಷ್ಠ ಶೇಕಡ 55 ಅಂಕ ಪಡೆದಿರಬೇಕು.

ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು.

ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಡಿಪ್ಲೊಮಾ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸುವುದಾದರೆ, 12 ತರಗತಿಯ ಬಳಿಕ ಡಿಪ್ಲೊಮಾಕ್ಕೆ ಸೇರಿರುವವರಿಗೆ ಮಾತ್ರ ಅವಕಾಶವಿದೆ.

ವಿದ್ಯಾರ್ಥಿ ವೇತನದ ಮೊತ್ತ: 1-6ನೇ ತರಗತಿಯವರಿಗೆ 15,000 ರೂಪಾಯಿ, 7-12, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ 18,000 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಪದವಿ ವಿದ್ಯಾರ್ಥಿಗಳಿಗೆ ಅರ್ಹತೆಗಳು

ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ ಮುಂತಾದ ಪದವಿ ಕೋರ್ಸ್‌ಗಳು, ಬಿಟೆಕ್‌, ಎಂಬಿಬಿಎಸ್‌, ಎಲ್‌ಎಲ್‌ಬಿ, ಬಿಆರ್ಕ್‌, ನರ್ಸಿಂಗ್‌ ಮುಂತಾದ ವೃತ್ತಿಪರ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಹಿಂದಿನ ಕೋರ್ಸ್‌ನಲ್ಲಿ ಕನಿಷ್ಠ 55 ಅಂಕ ಪಡೆದಿರಬೇಕು.

ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು. ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಿದ್ಯಾರ್ಥಿ ವೇತನದ ಮೊತ್ತ: ಸಾಮಾನ್ಯ ಪದವಿ ಕೋರ್ಸ್‌- 30 ಸಾವಿರ ರೂಪಾಯಿ, ವೃತ್ತಿಪರ ಪದವಿ ಕೋರ್ಸ್‌ 50,000 ರೂ.

ಸ್ನಾತಕೋತ್ತರ ಪದವೀಧರರಿಗೆ ಅರ್ಹತೆಗಳು

ಎಂಕಾಂ, ಎಂಎ ಮುಂತಾದ ಜನರಲ್‌ ಕೋರ್ಸ್‌, ಎಂಟೆಕ್‌, ಎಂಬಿಎ ಮುಂತಾದ ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ ಕಲಿಯುವವರು ಅರ್ಜಿ ಸಲ್ಲಿಸಬಹುದು.

ಈ ಹಿಂದಿನ ಕೋರ್ಸ್‌ನಲ್ಲಿ ಕನಿಷ್ಠ 55 ಅಂಕ ಪಡೆದಿರಬೇಕು.

ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಮೀರಿರಬಾರದು. ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆ, ಬಿಕ್ಕಟ್ಟು ಅನುಭವಿಸಿ ಶಿಕ್ಷಣ ಮುಂದುವರೆಸಲು ಕಷ್ಟವಾದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಿದ್ಯಾರ್ಥಿ ವೇತನ ಮೊತ್ತ: ಜನರಲ್‌ ಸ್ನಾತಕೋತ್ತರ ಪದವಿ: 35 ಸಾವಿರ ರೂಪಾಯಿ, ವೃತ್ತಿಪರ ಸ್ನಾತಕೋತ್ತರ ಕೋರ್ಸ್‌: 75 ಸಾವಿರ ರೂಪಾಯಿ

ಅರ್ಜಿ ಸಲ್ಲಿಕೆ ಹೇಗೆ..?

ಈ ವಿದ್ಯಾರ್ಥಿ ವೇತನಗಳಿಗೆ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸುವ ಮೊದಲು ಇಲ್ಲಿ ನೀಡಲಾದ ಲಿಂಕ್‌ನಲ್ಲಿ ತಿಳಿಸಿರುವ ದಾಖಲೆಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಎಚ್‌ಡಿಎಫ್‌ಸಿ ಪರಿವರ್ತನ್‌ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಲಿಂಕ್‌: hdfcbankecss.com

ಈ ಸುದ್ದಿಯನ್ನು ಓದಿ: Ujjwala Yojana: ಗುಡ್ ನ್ಯೂಸ್; ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಪಡೆಯಲು ಮತ್ತೊಮ್ಮೆ ಅವಕಾಶ