Thursday, 12th December 2024

ಸ್ಮಶಾನ ಜಾಗ ಖರೀದಿಸಲು ೨.೫೦ ಲಕ್ಷ ರೂ ಧನಸಹಾಯ

ಕೊಲ್ಹಾರ: ತಾಲ್ಲೂಕಿನ ಹಣಮಾಪುರ ಗ್ರಾಮದ ಮುಸ್ಲಿಂ ಸ್ಮಶಾನ ಜಾಗ ಖರೀದಿಸಲು ಶಾಸಕ ಶಿವಾನಂದ ಪಾಟೀಲ್ ಗ್ರಾಮದ ಮುಸ್ಲಿಂ ಸಮಾಜಕ್ಕೆ ವೈಯಕ್ತಿಕವಾಗಿ ೨.೫೦ ಲಕ್ಷ ರೂ ಧನಸಹಾಯ ಮಾಡಿದ್ದಾರೆ.

ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಶಾಸಕರ ಪರವಾಗಿ ಗ್ರಾಮದ ಮುಸ್ಲಿಂ ಮುಖಂಡರಿಗೆ ಸಹಾಯಧನ ವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಕಾಂಗ್ರೆಸ್ ಮುಖಂಡ ಹನೀಪ ಮಕಾನದಾರ, ಪ.ಪಂ ಸದಸ್ಯ ದಸ್ತಗೀರ ಕಲಾದಗಿ, ರಿಯಾಜ ಕಂಕರಪೀರ, ಅಬ್ದುಲ್ ಪಕಾಲಿ, ಇಕ್ಬಾಲ್ ನದಾಫ, ಮೊಹಸೀನ್ ಕಾಖಂಡಕಿ, ಕಾಶೀಮ ವಾಲಿಕಾರ ಹಾಗೂ ಹಣಮಾಪುರ ಗ್ರಾಮದ ಮುಖಂಡ ರಾದ ಮುತ್ತು ಸಾಹುಕಾರ್ ಹಳ್ಳೂರ, ದಸ್ತಗೀರಸಾಬ ಬಿದರಿ, ಗೈಬುಸಾಬ ದಡೇದ, ಡೊಂಗ್ರಿ ಕಂಬೋಗಿ, ರಾಜು ದಡೇದ, ಮುರ್ತುಜ ಕಂಬೋಗಿ, ಮೈಬುಬ ನರಿಯವರ, ಸಂಗಪ್ಪ ಮಾದರ ಇತರರು ಇದ್ದರು.