Friday, 22nd November 2024

High Waist Pant Fashion: ರೆಟ್ರೊ ಲುಕ್ ನೀಡುವ High Waist Pant ಹಂಗಾಮಾ!

High Waist Pant Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಹಾಲಿವುಡ್ ಸೆಲೆಬ್ರೆಟಿಗಳ ರೆಟ್ರೊ ಸ್ಟೈಲ್‌ನಲ್ಲಿದ್ದ ಹೈ ವೇಸ್ಟ್ ಪ್ಯಾಂಟ್ ಫ್ಯಾಷನ್ (High Waist Pant Fashion), ಇದೀಗ ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲಾ ವರ್ಗದ ಮಾನಿನಿಯರನ್ನು ಆಕರ್ಷಿಸತೊಡಗಿದೆ. ಹೌದು, ಹೊಕ್ಕಳ ಮೇಲೆ ಸ್ಟಿಫ್ ಆಗಿ ನಿಂತಿರುವ ಪ್ಯಾಂಟ್, ಅದಕ್ಕೊಂದು ಕ್ರಾಪ್ ಶರ್ಟ್ ಅಥವಾ ಟೀ ಶರ್ಟ್. ಫುಲ್ ಸ್ಲೀವ್ ಆದರೂ ಸರಿಯೇ, ಸ್ಲೀವ್ಲೆಸ್ ಆದರೂ ಸರಿಯೇ! ಗ್ಲಾಮರಸ್ ಕಟೌಟ್ ಟಾಪ್‌ಗೂ ಓಕೆ, ಹೀಗೆ ಇಂದಿನ ಹೈ ವೇಸ್ಟೆಡ್ ಪ್ಯಾಂಟ್‌ಗಳು ತಮ್ಮ ಜಾದೂ ಮೂಡಿಸತೊಡಗಿವೆ. ಪರಿಣಾಮ, ಇಂದು ಬಗೆಬಗೆಯ ಹೈ ವೆಸ್ಟ್ ಪ್ಯಾಂಟ್ ಧರಿಸುವ ಸ್ಟೈಲ್ ಮತ್ತೊಮ್ಮೆ ಪಾಪುಲರ್ ಆಗಿದೆ ಎನ್ನುತ್ತಾರೆ ಇಮೇಜ್ ಕನ್ಸಲ್ಟೆಂಟ್ ರಾಜ್.

ಚಿತ್ರಗಳು: ಪಿಕ್ಸೆಲ್

ಟ್ರೆಂಡಿಯಾಗಿರುವ ಹೈ ವೇಸ್ಟ್ ಪ್ಯಾಂಟ್ಸ್

ಸಾದಾ, ಮಾನೋಕ್ರೋಮ್ ಶೇಡ್, ಡಬ್ಬಲ್-ತ್ರಿಬಲ್ ಪ್ರಿಂಟ್ಸ್‌ನವು, ಜೀನ್ಸ್, ಕಾಟನ್, ಲೆನಿನ್ ಹೀಗೆ ನಾನಾ ಬಗೆಯ ಫ್ಯಾಬ್ರಿಕ್‌ನವು ಇಂದು ಟ್ರೆಂಡಿಯಾಗಿವೆ. ಇನ್ನು ವಿಂಟರ್ ಸೀಸನ್‌ನಲ್ಲಂತೂ ಈ ಪ್ಯಾಂಟ್‌ಗಳು ಹೊಸ ಬಗೆಯ ಟಾಪ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ. ಅವರ ಪ್ರಕಾರ, ಹೈ ವೇಸ್ಟ್ ಪ್ಯಾಂಟ್‌ಗಳನ್ನು ಧರಿಸಿದಾಗ ತಕ್ಷಣಕ್ಕೆ ನೋಡಲು ಹಳೆಯ ಸಿನಿಮಾಗಳ ಕಾಸ್ಟ್ಯೂಮ್‌ಗಳಂತೆ ಕಾಣುತ್ತವೆ. ಆದರೆ, ಇವನ್ನು ಸ್ಟೈಲಿಂಗ್ ಮಾಡುವ ಆಧಾರದ ಮೇಲೆ ಡಿಫರೆಂಟ್ ಲುಕ್ ನೀಡುತ್ತವೆ ಎನ್ನುತ್ತಾರೆ.

ಯಾರಿಗೆ ಯಾವುದು?

ಕುಳ್ಳಗಿರುವವರಿಗೆ ಹಾಗೂ ತೀರಾ ಪ್ಲಂಪಿಯಾಗಿರುವವರಿಗೆ ಈ ಪ್ಯಾಂಟ್ ಸೂಟ್ ಆಗದು. ಇನ್ನು ಟಾರ್ಟರ್ ಶೈಲಿಯ ಹೈ ವೇಸ್ಟ್ ಪ್ಯಾಂಟ್ ಟ್ರೆಂಡ್‌ನಲ್ಲಿಲ್ಲ ಎಂಬುದು ನೆನಪಿರಲಿ! ಹೆವ್ವಿ ಪರ್ಸನಾಲಿಟಿ ಹೊಂದಿರುವವರಿಗೆ ಈ ಪ್ಯಾಂಟ್ ಬೇಡ! ಧರಿಸಿದಾಗ ಮತ್ತಷ್ಟು ದಪ್ಪನಾಗಿ ಕಾಣುತ್ತಾರೆ. ಹೊಟ್ಟೆಯ ಮಧ್ಯ ಭಾಗ ಉಬ್ಬಿದಂತೆ ಕಾಣುತ್ತದೆ, ಅಗಲವಾಗಿ ಕಾಣಿಸುತ್ತದೆ ಎನ್ನುತ್ತಾರೆ.

ಅಂದಹಾಗೆ, ಈ ಪ್ಯಾಂಟ್ ಹೊಟ್ಟೆಯ ಭಾಗವನ್ನು ಎಕ್ಸ್‌ಪೋಸ್ ಮಾಡದಿದ್ದರೂ, ರಿಯಲ್ ಪರ್ಸನಾಲಿಟಿಯನ್ನು ಎದ್ದು ಕಾಣುವಂತೆ ಬಿಂಬಿಸುತ್ತದೆ. ಹಾಗಾಗಿ ಸ್ಲಿಮ್ ಆಗಿರುವವರಿಗೆ ಇದು ಹೇಳಿ ಮಾಡಿಸಿದ ಔಟ್‌ಫಿಟ್. ಫ್ಲಾಟ್ ಟಮ್ಮಿ ಇರುವವರಿಗಂತೂ ಬೆಸ್ಟ್ ಅಪ್ಷನ್ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.

ಸಂದರ್ಭಕ್ಕೆ ತಕ್ಕಂತಿರಲಿ ಹೈ ವೇಸ್ಟ್ ಪ್ಯಾಂಟ್ ಸೆಲೆಕ್ಷನ್

ಮಲ್ಟಿ ಶೇಡ್ಸ್‌ನ ಪೇಟಿಂಗ್‌ನಂತೆ ಭಾಸವಾಗುವ ಫ್ಯಾಬ್ರಿಕ್‌ನ ಹೈ ವೇಸ್ಟ್ ಪ್ಯಾಂಟ್‌ಗಳು ಲಂಚ್-ಬ್ರಂಚ್ ಪಾರ್ಟಿಗೆ ಚೆನ್ನಾಗಿ ಕಾಣಿಸುತ್ತವೆ. ಟೊರ್ನ್ ತ್ರೀ ಫೋರ್ತ್ ಪ್ಯಾಂಟ್ ಬೀಚ್‌ಸೈಡ್ ಪಾರ್ಟಿ ಹಾಗೂ ಔಟಿಂಗ್‌ಗೆ ಹೇಳಿಮಾಡಿಸಿದಂತಿರುತ್ತವೆ. ಹಾಲಿ ಡೇ ಫ್ಯಾಷನ್‌ಗೂ ಇವು ಮ್ಯಾಚ್ ಆಗುತ್ತವೆ ಎಂಬುದು ಫ್ಯಾಷನಿಸ್ಟಾ ರಚನಾ ಅಭಿಪ್ರಾಯ.

ಈ ಸುದ್ದಿಯನ್ನೂ ಓದಿ | Matching Kamarband Fashion: ವೆಡ್ಡಿಂಗ್ ವೇರ್‌ಗಳಿಗೆ ಜತೆಯಾದ ಮ್ಯಾಚಿಂಗ್ ಕಮರ್‌ಬಾಂದ್!

ಹೈ ವೇಸ್ಟ್ ಪ್ಯಾಂಟ್ ಮ್ಯಾಚ್ ಮಾಡುವುದು ಹೀಗೆ

  • ಹೈ ವೇಸ್ಟ್ ಪ್ಯಾಂಟ್ಗ್‌ಗಳಿಗೆ ಶೀರ್ ಕ್ರಾಪ್ ಶರ್ಟ್ ಸಖತ್ತಾಗಿ ಕಾಣುತ್ತವೆ.
  • ಲಾಂಗ್ ಸ್ಲೀವ್ ಕ್ರಾಪ್ ಟಾಪ್ ಟ್ರೆಂಡಿಯಾಗಿ ಬಿಂಬಿಸುತ್ತವೆ.
  • ಬಿಗ್ ಬೆಲ್ಟ್ ಆಕರ್ಷಕವಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)