Saturday, 14th December 2024

ಹಿಂದುತ್ವ, ಹಿಜಾಬ್‌ಗಾಗೇ ಹತ್ಯೆ

ಎರಡು ವರ್ಷಗಳಿಂದ ನಿಗಾ, ಸಂಚು ರೂಪಿಸಿ ಕೊಲೆ

ಆರು ಬಾರಿ ದಾಳಿಯಲ್ಲಿ ವಿಫಲ, 7ನೇ ಬಾರಿ ಯಶಸ್ವಿ

ಪೊಲೀಸ್ ತನಿಖೆಯಿಂದ ದೃಢ

ವೈಯಕ್ತಿಕ ದ್ವೇಷವೇ ಪ್ರಮುಖ ಕಾರಣ

ಕೊಲೆಯ ಸಾಧ್ಯತೆಯ ಅಳುಕನ್ನು ಸ್ನೇಹಿತರೆದುರಿಗೆ ತಿಳಿಸಿದ್ದ ಹರ್ಷ

ಶಿವಮೊಗ್ಗ: ಹಿಂದುತ್ವದ ಪ್ರತಿಪಾದನೆ, ಹಿಜಾಬ್ ವಿವಾದದಲ್ಲಿ, ವೈಯಕ್ತಿಕ ದ್ವೇಷಗಳೇ ಶಿವಮೊಗ್ಗದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷನ
ಕೊಲೆಗೆ ಪ್ರಮುಖ ಕಾರಣಗಳು ಎಂದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.

ನಿರಂತರ 2 ವರ್ಷಗಳಿಂದ ನಿರಂತರವಾಗಿ ಹರ್ಷನ ಕೊಲೆಗೈಯ್ಯಲು, ಆತನ ಮನೆ ಮೇಲೆ ನಿಗಾ ಇಟ್ಟು ಸಂಚು ರೂಪಿಸಿದ ಪ್ರಮುಖ ಆರೋಪಿಗಳು, ಸುಮಾರು 6 ಕೊಲೆಗೈಯಲ್ಲು ಯತ್ನಿಸಿ ವಿಫಲರಾಗಿದ್ದಾರೆ. ಆದರೆ ೭ನೇ ದಾಳಿಯಲ್ಲಿ ಯಶಸ್ವಿಯಾದರು ಎಂಬ ಅಂಶ ವಿಚಾರಣೆಯ ವೇಳೆ ಬಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಗಳಾದ ಖಾಸೀಫ್, ರಿಯಾಜ್ ಹಾಗೂ ನದೀಮ್ ಅವರೊಂದಿಗೆ ಹಿಂದುತ್ವದ ಕಾರಣದಿಂದಲೇ ವೈಯಕ್ತಿಕ ನೆಲೆಯಲ್ಲಿ ಜಗಳವಾಡಿದ್ದ ಹರ್ಷನ ಮೇಲೆ ಸೇಡಿನಿಂದ ಕೊಲೆ ಮಾಡಲು ಸಂಚು ರೂಪಿಸಿದ್ದರು. 2016ರಿಂದ ಆರೋಪಿಗಳಿಗೂ ಹಾಗೂ ಹರ್ಷ ಮತ್ತು ಅವನ ಸ್ನೇಹಿತರಿಗೆ ಹಲವು ಬಾರಿ ಜಗಳವಾಗಿದೆ. ಹಿಂದೂ ಸಂಘಟನೆಯಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಹರ್ಷ ಗಲಾಟೆಯಾದಾಗಲೆಲ್ಲಾ ಇವರನ್ನೇ ಗುರಿ ಮಾಡಿ, ಆರೋಪಿ ಗಳಿಗೆ ಕಿರಿಕಿರಿಯನ್ನುಂಟು ಮಾಡಿತ್ತು. ಹಾಗಯೇ 2ನೇ ಆರೋಪಿ ನದೀಮ್ ಜತೆಗೆ ಹರ್ಷನ ಸ್ನೇಹಿತನೊಬ್ಬ ಜಗಳ ಮಾಡಿಕೊಂಡಾಗ ಸ್ನೇಹಿತನ ಪರ ಜಗಳವಾಡಲು ಹರ್ಷ ಮುಂದಾಗಿದ್ದ. ಆಗ ಆರೋಪಿ ಗಳು ಒಂದಾಗಿ ಹರ್ಷನೊಂದಿಗೆ ಗಲಾಟೆ ಮಾಡಿ, ಅವನನ್ನು ಕೊಲ್ಲುವುದಾಗಿ ಅಂದೇ ಬೆದರಿಕೆ
ಹಾಕಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

2017ರಲ್ಲಿ ನಡೆದ ಗಲಾಟೆಯಲ್ಲೂ ಅರೋಪಿಗಳು ಹಾಗೂ ಹರ್ಷ ಮುಖಾಮುಖಿಯಾಗಿ ಜಗಳ ಮಾಡಿಕೊಂಡಿದ್ದರು. ಇದು ಆರೋಪಿಗಳನ್ನು ಕೆರಳಿ ಸಿತ್ತು. ಅವರು ಹರ್ಷನ ಮೇಲೆ ಹಲ್ಲೆ ನಡೆಸಲೇಬೇಕು ಎಂದು ಅಂದೇ ತೀರ್ಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಹರ್ಷನ ಚಲನವಲನ ಮೇಲೆ ಇವರೆಲ್ಲರೂ ಕಣ್ಣಿಟ್ಟಿದ್ದರು. ಆದರೆ, ಎಲ್ಲವೂ ಸರಿಯಾಗದೇ ಹೋಗಿದ್ದರಿಂದ ಹರ್ಷನನ್ನು ಮುಟ್ಟಲು ಸಾಧ್ಯವಾಗಲಿಲ್ಲ.

ಜೈಲಿನಲ್ಲಿಯೂ ಜಗಳ: ಹರ್ಷ ಪ್ರಕರಣವೊಂದರ ಸಂಬಂಧ ಜೈಲಿಗೆ ಹೋಗಿದ್ದಾಗ, ಅಲ್ಲಿಯೇ ಇದ್ದ ಖಾಸಿಫ್ ಹಾಗೂ ಇತರರು ಹರ್ಷನ ಮೇಲೆ ಗಲಾಟೆ ಮಾಡಿದ್ದರು.

ಎರಡೂ ಕಡೆಯವರು ಜೈಲಿನಲ್ಲಿಯೇ ಹೊಡೆದಾಡಿಕೊಂಡಿದ್ದರು. ಹೊರಗೆ ಬಂದರೆ ನೋಡಿಕೊಳ್ಳುತ್ತೇವೆ ಎಂದು ಎರಡು ಕಡೆಯವರು ಅಬ್ಬರಿಸಿದ್ದರು. ಅಂದಿನಿಂದ ಹರ್ಷನಿಗೆ ಒಂದಿಷ್ಟು ಸಣ್ಣ ಅಳುಕು ಕಾಡುತ್ತಲೇ ಇತ್ತು. ಆ ಮಾತನ್ನು ತನ್ನ ಸ್ನೇಹಿತರ ಎದುರಿಗೆ ಹೇಳಿಕೊಂಡಿದ್ದ. ಹೀಗಾಗಿ ಆತನ ಜತೆಗೆ ಯಾವಾಗಲೂ ಸ್ನೇಹಿತರಿರುವಂತೆ ನೋಡಿಕೊಂಡಿದ್ದ. ಇದರಿಂದ ಆರೋಪಿಗಳಿಗೆ ಹರ್ಷನನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಇದರ ನಡುವೆ ಪ್ರಕ ರಣಕ್ಕೆ ಸಂಬಂಧಪಟ್ಟಂತೆ ಹರ್ಷ ನ್ಯಾಯಾಲಯದ ಆವರಣದಲ್ಲೂ ಖಾಸೀಫ್, ರಿಯಾಜ್ ಹಾಗೂ ನದೀಮ್ ನಡುವೆ ಗಲಾಟೆ ಯಾಗಿತ್ತು. ಒಬ್ಬರ ನೊಬ್ಬರು ಪರಸ್ಪರ ಹೊಡೆದಾಡುವ ಮಟ್ಟಕ್ಕೆ ಗಲಾಟೆ ಮಾಡಿಕೊಂಡಿದ್ದರು. ಇದು ಆರೋಪಿಗಳನ್ನು ಕೆರಳಿಸಿತ್ತು. ಹೀಗಾಗಿ ಮುಂದೊಂದು ದಿನ ಈತನನ್ನು ಉಳಿಸಲೇಬಾರದು ಎಂಬ ತೀರ್ಮಾನಕ್ಕೆ ಆರೋಪಿಗಳು ಬಂದಿದ್ದರು.

ಮನೆಯ ಸುತ್ತಲೇ ಇದ್ದರು ಆರೋಪಿಗಳು: ಕಳೆದ ಆರು ತಿಂಗಳ ಹಿಂದೆ ನಡೆದ ಗಲಾಟೆಯಲ್ಲಿ ಹರ್ಷ ಆರೋಪಿಗಳಿಗೆ ಚೆನ್ನಾಗಿ ದಬಾಯಿಸಿದ್ದ. ಈ
ಹಿನ್ನೆಲೆಯಲ್ಲಿ ಅಂದಿನಿಂದಲೇ ಆತನ ಮನೆಯನ್ನು ಕಾವಲು ಕಾಯತೊಡಗಿದ ಆರೋಪಿಗಳು, ಆತ ಒಂಟಿಯಾಗಿ ಸಿಕ್ಕರೆ ಬಿಡುವುದಿಲ್ಲ ಎಂಬಂತೆ ಸಮ
ಯಕ್ಕೆ ಕಾಯ ತೊಡಗಿದ್ದರು. ಕಳೆದ ಒಂದು ವಾರದ ಹಿಂದೆ ಖಾಸಿಫ್ ತನ್ನ ಹುಡುಗನೊಬ್ಬನ್ನು ಹರ್ಷನ ಮನೆಯ ಸುತ್ತ ಓಡಾಡುವಂತೆ ಸೂಚನೆ ನೀಡಿದ್ದ.

ಬೆಳಗ್ಗೆಯಿಂದ ಸಂಜೆಯ ತನಕ ಹರ್ಷ ಎಲ್ಲಿಗೆ ಹೋಗುತ್ತಾನೆ. ಯಾರನ್ನು ಭೇಟಿ ಮಾಡುತ್ತಾನೆ ಎಂಬುದನ್ನು ಪಟ್ಟಿ ಮಾಡಿದ ಆರೋಪಿಗಳು ಆತನ
ಮೇಲೆ ಹಲ್ಲೆ ನಡೆಸಲು ಸರಿಯಾದ ಸಮಯಕ್ಕೆ ಕಾಯ ತೊಡಗಿದ್ದರು. ಆದರೆ, ಹರ್ಷನ ಸ್ನೇಹಿತರು ಸದಾ ಅತನ ಜೊತೆಗೆ ಇರುತ್ತಿದ್ದರಿಂದ ಆರೋಪಿಗಳ
ಯೋಜನೆಯಲ್ಲವೂ ತಲೆಕೆಳಗಾಗಿತ್ತು.

ಗಾಂಜಾ ಹೊಡೆದು ಯೋಜನೆ ರೂಪಿಸಿದರು: ವರ್ಷದಿಂದಲೂ ಹರ್ಷನ ಚಲವಲನ ಹಿಂಬಾಲಿಸುತ್ತಿದ್ದ ಖಾಸಿಫ್ನ ಹುಡುಗ ಫೆ.13ರಂದು
ಆರೋಪಿಗಳ ಬಳಗಕ್ಕೆ ಹರ್ಷನ ಕುರಿತು ಖಚಿತ ಮಾಹಿತಿ ರವಾನಿಸಿದ್ದ. ಹರ್ಷ ಮನೆಯನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಸಂಜೆಯ ವೇಳೆಗೆ ಆತ
ಹೊರಬರುವ ಎಲ್ಲ ಸಾಧ್ಯತೆಗಳಿವೆ ಎಂಬ ಸೂಚನೆ ಆರೋಪಿಗಳಿಗೆ ಸಿಕ್ಕಿಬಿಟ್ಟಿತ್ತು. ಸಂಜೆ 4 ಗಂಟೆಯ ವೇಳೆಗೆ ಒಂದೆಡೆ ಸೇರಿದ ಎಲ್ಲ ಆರೋಪಿಗಳು
ಹರ್ಷನ ಮೇಲೆ ಹಲ್ಲೆ ಮಾಡುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ಮಾಡಿ ಯೋಜನೆ ರೂಪಿಸಿದರು.

ಒಂದು ವೇಳೆ ಹರ್ಷ ಈ ದಾಳಿಯಲ್ಲಿ ತಪ್ಪಿಸಿಕೊಂಡರೆ, ಅಲ್ಲಿಂದ ಪರಾರಿಯಾಗುವ ಮಾರ್ಗವನ್ನು ಸಿದ್ಧ ಮಾಡಿಕೊಂಡಿದ್ದರು. ಅದರಂತೆ ಭಾನುವಾರ ಹರ್ಷ ಮನೆ ಬಿಟ್ಟ ತಕ್ಷಣ ಮನೆಯ ಬಳಿ ಇದ್ದ ಖಾಸೀಫ್ ಹುಡುಗ ಈ ಪ್ರಕರಣದ ೮ ಆರೋಪಿ ತನ್ನ ಸಹಚರರಿಗೆ ಮಾಹಿತಿ ನೀಡಿದ. ಅದರಂತೆ ಎಲ್ಲರೂ
ಗಾಂಜಾ ಸೇವಿಸಿ ಆತನನ್ನು ಹಿಂಬಾಲಿಸುವಂತೆ ೮ನೇ ಆರೋಪಿಗೆ ಸೂಚನೆ ನೀಡಿದರು. ಅದರಂತೆ ಹರ್ಷನನ್ನು ಯಾರಿಗೂ ತಿಳಿಯದಂತೆ ಹಿಂಬಾಲಿಸಿದ
ಆರೋಪಿ, ಉಳಿದವರಿಗೆ ಮಾಹಿತಿ ನೀಡುತ್ತಲೇ ಹೋದ. ಭಾರತೀ ಕಾಲೋನಿಯ ಬಳಿ ಹರ್ಷ ಒಬ್ಬನೇ ಇರುವುದನ್ನು ತಿಳಿಸುತ್ತಿದ್ದಂತೆ ಕಾರಿನಲ್ಲಿ
ಬಂದ ಆರೋಪಿಗಳು ಏಕಾಏಕಿ ಬ್ಯಾಟ್ ಹಾಗೂ ಲಾಂಗ್‌ನಿಂದ ದಾಳಿ ಮಾಡಿದರು.

ಅಷ್ಟು ಮಂದಿ ಒಮ್ಮೆಲೇ ನುಗ್ಗಿದ್ದರಿಂದ ಎಚ್ಚೆತ್ತುಕೊಂಡ ಹರ್ಷ ಅಲ್ಲಿಂದ ತಪ್ಪಿಸಿಕೊಳ್ಳಲು ಸ್ವಲ್ಪ ದೂರ ಓಡುವಷ್ಟರಲ್ಲಿ ಆತನನ್ನು ಸುತ್ತುವರೆದ ಆರೋಪಿಗಳು ಮನಬಂದಂತೆ ಲಾಂಗ್ ಬೀಸಿ ಹಲ್ಲೆ ನಡೆಸಿ, ಅಲ್ಲಿಂದ ಆಟೋದಲ್ಲಿ ಪರಾರಿಯಾದರು. ರಾತ್ರಿ ಎಲ್ಲರೂ ಇರುವಾಗಲೇ ಈ ಘಟನೆ ನಡೆದಿ ದ್ದರಿಂದ ಅಲ್ಲಿದ್ದವರು ಒಂದು ಕ್ಷಣ ಏನು ನಡೆಯುತ್ತಿದೆ ಎಂಬುದನ್ನು ನೋಡುವಷ್ಟರಲ್ಲಿ ಹರ್ಷ ಗಾಯಗೊಂಡು ಕೆಳಕ್ಕೆ ಬಿದ್ದಿದ್ದ.

ಎಲ್ಲರೂ ಒಮ್ಮೆಗೆ ರೈಲಿನಲ್ಲಿ ಪರಾರಿ: ಹರ್ಷನನ್ನು ಕೊಲೆ ಮಾಡಿದ ಅನಂತರದಲ್ಲಿ ನದೀಮ್‌ನನ್ನು ಹೊರತು ಪಡಿಸಿ ಎಲ್ಲರೂ ಪರಾರಿಯಾಗಲು
ಮೊದಲೇ ಯೋಜನೆ ರೂಪಿಸಿದ್ದರು. ಯೋಜನೆಯಂತೆಯೇ ೧೦ಕ್ಕೆ ಹರ್ಷನ ಮೇಲೆ ದಾಳಿ ಮಾಡಿದರು. ಅನಂತರದಲ್ಲಿ ಅಲ್ಲಿಂದ ನೇರವಾಗಿ ಕಾರಿನಲ್ಲಿ ಶಿವಮೊಗ್ಗ-ಬೆಂಗಳೂರು ರೈಲಿಗೆ ಹತ್ತಿ ದರು. ಅನಂತರದಲ್ಲಿ ಭದ್ರವಾತಿಯಲ್ಲಿ ಎಲ್ಲರೂ ಬೇರೆ ಬೇರೆ ಕಡೆಗೆ ಹೋಗಲು ನಿರ್ಧರಿಸಿದರು.

ಭದ್ರಾವತಿಯಲ್ಲಿ ಒಬ್ಬ ಆರೋಪಿ ಉಳಿದರೆ, ಇನ್ನಿಬ್ಬರು ಬೆಂಗಳೂರಿಗೆ, ಮತ್ತೊಬ್ಬ ಎನ್.ಆರ್.ಪುರಕ್ಕೆ ಪರಾರಿಯಾಗಿದ್ದ. ಅಲ್ಲದೆ, ಇಬ್ಬರು ಆರೋಪಿ ಗಳೂ ಹಾಸನದಲ್ಲಿ ಅಡಗಿಕೊಂಡಿದ್ದರು. ಹರ್ಷನ ಕೊಲೆಯ ಅನಂತರದಲ್ಲಿ ಅದರ ಸುತ್ತಮುತ್ತ ಚಾಲನೆಯಲ್ಲಿದ್ದ ಮೊಬೈಲ್ ಸಂಖ್ಯೆಗಳನ್ನು
ತಕ್ಷಣವೇ ಪತ್ತೆ ಮಾಡಲು ಮುಂದಾದ ಪೊಲೀಸರಿಗೆ ನದೀಮ್ ಅಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ
ಆರಂಭಿಸಿದಾಗ ಇದರಲ್ಲಿ ಪಾಲ್ಗೊಂಡವರ ಬಗ್ಗೆ ಸಕಲ ಮಾಹಿತಿಯನ್ನು ನೀಡಿದ್ದ. ಅದರ ಆಧಾರದ ಮೇಲೆ ಅಭಯ ಪ್ರಕಾಶ್ ಹಾಗೂ ಗುರುರಾಜ್
ನೇತೃತ್ವದ ತಂಡ ಆರೋಪಿಗಳನ್ನು ಹಲವೆಡೆಯಿಂದ ಹೆಡೆಮುರಿ ಕಟ್ಟಿ ಶಿವಮೊಗ್ಗ ತಂದು ವಿಚಾರಣೆ ನಡೆಸಿ ಎಲ್ಲ ವಿವರಗಳನ್ನು ಬಾಯಿ ಬಿಡಿಸಿದ್ದಾರೆ.