Thursday, 12th December 2024

ಶೈಲಜಾ ವಿರೂಪಾಕ್ಷಯ್ಯಾ ಹಿರೇಮಠ ದೈವಾಧೀನ

ಇಂಡಿ: ತಾಲೂಕಿನ ಶಿರಶ್ಯಾಡ ಗ್ರಾಮದ ಶಿರಶ್ಯಾಡ ಶ್ರೀಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯರು ಇವರ ತಾಯಿ ಶ್ರೀಮತಿ ಶೈಲಜಾ ವಿರೂಪಾಕ್ಷಯ್ಯಾ ಹಿರೇಮಠ ಇವರು ಹೃದಯಾಘಾತದಿಂದ ದೈವಾದೀನರಾಗಿದ್ದಾರೆ.

ಅಂತ್ಯಕ್ರೀಯ ೭-೧೦-೨೦೨೨ ರಂದು ಮಧ್ಯಾಹ್ನ ೨-೦೦ ಗಂಟೆಗೆ ಹರಗುರು ಚರಣ ಅನೇಕ ಸಾಧು. ಸಂತರು, ಶರಣರ ಮಾರ್ಗ ದರ್ಶನದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ಹಾಗೂ ಭಕ್ತಾದಿಗಳು ಪ್ರಕಟಣೆಗೆ ತಿಳಿಸಿದ್ದಾರೆ.

ಸಂತಾಪ: ಶಾಸಕ ಯಶವಂತರಾಯಗೌಡ ಪಾಟೀಲ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಚನ್ನುಗೌಡ ಪಾಟೀಲ ರೋಡಗಿ, ಬತ್ತುಸಾಹುಕಾರ ಹಾವಳಗಿ, ಎಂ.ಆರ್ ಪಾಟೀಲ, ಮಂಜುನಾಥ ಕಾಮಗೊಂಡ, ಶಿವಾನಂದ ರಾವೋರ ಸೇರಿದಂತೆ ಅನೇಕ ಗಣ್ಯರು, ಭಕ್ತಾದಿಗಳು ಸಂತಾಪ ಸೂಚಿಸಿದ್ದಾರೆ.