ಕಸಾಪ 108 ನೇ ಸಂಸ್ಥಾಪನಾ ದಿನಾಚರಣೆ
ಸಿರವಾರ : ಪಟ್ಟಣದ ಸಜ್ಜಲಶ್ರೀ ಶರಣಾಶ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ 108 ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ತನ್ನಿಮಿತ್ತವಾಗಿ ‘ಕನ್ನಡ ಮನಸುಗಳ ಮೇಲೆ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ’ ಎಂಬ ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಬೇರೆ ರಾಜ್ಯಗಳಲ್ಲಿ ಇದ್ದಷ್ಟು ಭಾಷಾಭಿಮಾನವನ್ನು ನಾವು ನೋಡಿ ಕಲಿಯ ಬೇಕಾಗಿದೆ. ಕರ್ನಾಟಕದಲ್ಲಿ ಬೇರೆ ಭಾಷಿಗರು ಸಿಕ್ಕರೆ ನಾವು ಅವರ ಮಾತೃಭಾಷೆಯಲ್ಲಿ ಮಾತ ನಾಡುತ್ತೇವೆ ಇದು ನಮ್ಮ ದುರಂತ. ಭಾಷಾಭಿಮಾನದ ಜೊತೆಗೆ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ನಾಟಕಗಳಿಂದಲೂ ಕನ್ನಡ ಉಳಿದಿದೆ ಎಂದು ಉಪನ್ಯಾಸಕರಾದ ಡಾ.ಶಿವಯ್ಯ ಹಿರೇಮಠ ಹೇಳಿದರು.
ಈ ವೇಳೆ ಕನ್ನಡ ಸಾಹಿತ್ಯದ ಪಸರಿಸುವಿಕೆಗೆ ಶ್ರಮಿಸಿದ ಮಹನೀಯರನ್ನು ಸನ್ಮಾನಿಸ ಲಾಯಿತು. ನವಲಕಲ್ ಬೃಹನ್ಮಠದ ಶ್ರೀ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಳ್ಳೂರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ ಏರಡ್ಡಿ, ಸಂಜೀವಿನಿ ಟ್ರಸ್ಟ್ ನ ಜ್ಞಾನಮಿತ್ರ, ಪತ್ರಕರ್ತ ಪಿ.ಕೃಷ್ಣ, ಶಂಕ್ರಯ್ಯ ಸ್ವಾಮಿ ಕವಿತಾಳ, ಶ್ರೀಮತಿ ಚಂದ್ರ ಮತಿ, ಅಮರೇಶ ದಿನ್ನಿ, ಶಿವಯ್ಯ ಸ್ವಾಮಿ, ವೆಂಕಟರೆಡ್ಡಿ ಬಲ್ಕಲ್, ಗಣೇಕಲ್ ವೀರೇಶ್, ಎಂ.ಗುಂಡಪ್ಪ, ಟಿ.ಬಸವರಾಜ, ಚಂದ್ರಶೇಖರ ಬಲ್ಲಟಗಿ, ಎಂ.ರುದ್ರಗೌಡ, ಶಿವಶರಣ ಗೌಡ ಲಕ್ಕಂದಿನ್ನಿ, ಪ್ರಕಾಶ ಪಾಟೀಲ್, ಗಲಗಿನ ಸೂಗೂರೇಶ್, ಸದಾಶಿವಪ್ಪ ಗೌಡ ಆಲ್ಕೋಡ, ಚುಕ್ಕಿ ಉಮಾಪತಿ, ನೀಲಗಲ್ ಚಂದ್ರಶೇಖರ, ಪತ್ತಾರ ನಾಗಪ್ಪ, ಸೇರಿದಂತೆ ಇತರರಿದ್ದರು.