Thursday, 12th December 2024

ಶತಮಾನ ಪೂರೈಸಿದ ಸ್ವಾತಂತ್ರ‍್ಯ ಹೋರಾಟಗಾರ ಹೆಚ್.ಎಂ.ವೀರಭದ್ರಯ್ಯ ಇನ್ನಿಲ್ಲ

ಹರಪನಹಳ್ಳಿ: ಶತಮಾನ ಪೂರೈಹಿಸಿ ವಕೀಲ ವೃತ್ತಿಯ ವಾದ ನಿಲ್ಲಿಸಿದ ಸ್ವಾತಂತ್ರö್ಯ ಹೋರಾಟಗಾರ ಹೆಚ್.ಎಂ. ವೀರಭದ್ರಯ್ಯ ಇವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಮೃತರಿಗೆ ನಾಲ್ವರು ಪುತ್ರರು, ಮೂರು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದು, ಹರಪನಹಳ್ಳಿ ಪಟ್ಟಣದ ತಮ್ಮ ನಿವಾಸದ ಮುಂಭಾಗದ ಸಾರ್ವಜನಿಕ ದರ್ಶನದ ನಂತರ ಮೃತರ ಹುಟ್ಟೂರಾದ ಕುಡ್ಲಿಗಿ ತಾಲೂಕು ಚೆರನೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ: ತೆಗ್ಗಿನ ಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಜಿಗಳು, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ. ಪಿ. ಲತಾ ಮಲ್ಲಿಕಾರ್ಜುನ್, ಜಿಲ್ಲಾ ಟಾಸ್ಕ್ ಪೊರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್, ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ನ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್, ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಎಂ.ವಿ.ಅ೦ ಜಿನಪ್ಪ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೆ.ಎಂ. ಬಸವರಾಜಯ್ಯ, ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ. ಹುಚ್ಚೆಂಗೆಪ್ಪ, ಬಾಗಳಿ ಹೊಸರಪ್ಪ, ಕಸಾಪ ಮಾಜಿ ಅಧ್ಯಕ್ಷ ರಾಮಪ್ರಸಾದ್ ಗಾಂಧಿ, ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಹಿರಿಯ ವಕೀಲರಾದ ಬಿ. ಕೃಷ್ಣಮೂರ್ತಿ, ಗಂಗಾಧರ್ ಗುರುಮಠ್, ಟಿ. ವೆಂಕಟೇಶ್, ಕೆ. ಚಂದ್ರಗೌಡ್ರು, ಎಸ್. ರುದ್ರಮನಿ, ಪಿ. ಜಗದೀಶ್ ಗೌಡ, ಆರ್. ರಾಮನಗೌಡ, ಬಿ. ರಾಮನಗೌಡ, ಮತ್ತಿಹಳ್ಳಿ ಅಜ್ಜಪ್ಪ, ವಿ.ಜಿ.ಪ್ರಕಾಶ್‌ಗೌಡ ಕೆ.ಎಸ್. ಮಂಜ್ಯಾನಾಯ್ಕ, ಎಂ.ಮೃತAಜಯ್ಯ, ಟಿ.ಎಂ. ರಮೇಶ್, ಬಿ.ಎಸ್. ಬಸವನಗೌಡ, ಸಣ್ಣ ನಿಂಗನಗೌಡ, ಮತ್ತು ಎಲ್ಲಾ ಹಿರಿಯ ಮತ್ತು ಕಿರಿಯ ನ್ಯಾಯಾವಾದಿಗಳು , ಚುನಾಯಿತ ಪ್ರತಿನಿಧಿಗಳು ಅಂತಿಮ ದರ್ಶನಕ್ಕೆ ಭಾಗವಹಿಸಿದರು.