Friday, 1st December 2023

ಬಸವರಾಜ ಹೊರಟ್ಟಿ 8ನೇ ಬಾರಿಗೆ ಜಯಶಾಲಿ

ಬೆಳಗಾವಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು 4669 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು.

ಚಲಾವಣೆಯಾದ ಒಟ್ಟು 15583 ಮತಗಳಲ್ಲಿ 1223 ಮತಗಳು ತಿರಸ್ಕರಗೊಂಡಿದ್ದು, 14360 ಮತಗಳಲ್ಲಿ ಬಸವರಾಜ ಹೊರಟ್ಟಿ ಅವರು 9266 ಮತಗಳನ್ನು ಪಡೆದುಕೊಂಡು ತಮ್ಮ ಪ್ರತಿ ಸ್ಪರ್ಧಿ ಕಾಂಗ್ರೆಸ್ ನ ಬಸವರಾಜ ಗುರಿಕಾರ ವಿರುದ್ಧ 4669 ಮತಗಳ ಅಂತರ ದಿಂದ ಗೆಲವು ಸಾಧಿಸಿದ್ದಾರೆ.

ಹೊರಟ್ಟಿ ಅವರಿಗೆ 9266 ಮತಗಳು, ಕಾಂಗ್ರೆಸ್ ನ ಬಸವರಾಜ ಗುರಿಕಾರ ಅವರಿಗೆ 4597, ಜೆಡಿಎಸ್ ನ ಶ್ರೀಶೈಲ ಗಡದಿನ್ನಿ 273, ಪಕ್ಷೇತರ ಅಭ್ಯರ್ಥಿಗಳಾದ ಎಂ.ಪಿ.ಕರಿಬಸಪ್ಪಾ 60, ಕೃಷ್ಣವೇಣಿ 58, ಪ್ರೊ. ಕಲ್ಲಣ್ಣಾ ಗೌಡರ 27 ಹಾಗೂ ಗೋವಿಂದಗೌಡರ ವೇಂಕಣಗೌಡಾ ರಂಗಣಗೌಡಾ 79 ಮತಗಳನ್ನು ಪಡೆದುಕೊಂಡಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ 8 ನೇ ಸಲ ಪರಿಷತ್ತು ಸದಸ್ಯರಾಗಿ ಆಯ್ಕೆಯಾದ ಬಸವರಾಜ ಹೊರಟ್ಟಿ ಅವರಿಗೆ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಆಮ್ಲಾನ್ ಬಿಸ್ವಾಸ್ ಅವರು ಪ್ರಮಾಣ ಪತ್ರ ನೀಡಿದರು.

error: Content is protected !!