Sunday, 15th December 2024

ಬಡವರಿಗೆ ವಸತಿ ಜೊತೆ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರೆ ಒಳಿತು : ಗಂಗಾಧರ ನಾಯಕ

ಕೆ ಶಿವನಗೌಡ ಅಭಿಮಾನಿಗಳಿಂದ ಅನ್ನದಾಸೋಹ ಕಾರ್ಯಕ್ರಮ ಶ್ಲಾಘನೀಯ
ಮಾನವಿ : ತಾಲೂಕ ಹಾಗೂ ಸಿರವಾರ ತಾಲೂಕಿನ ಪ್ರತಿ ಗ್ರಾಮಗಳಿಗೆ ಈ ಕರೋನ ಸಂದರ್ಭದಲ್ಲಿ ಅನ್ನದಾಸೋಹ ಕೇಂದ್ರ ನಿರ್ಮಾಣ ಮಾಡಿ ಜನರ ಸೇವೆ ಮಾಡುವುದು ಶ್ಲಾಘನೀಯ ಅದರಂತೆ ಕೆ ಶಿವನಗೌಡ ನಾಯಕರು ನಮ್ಮ ಜಿಲ್ಲೆಯ ಬಡವರಿಗೆ ವಸತಿ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಜಿಲ್ಲೆಯನ್ನು ಅಭಿವೃದ್ಧಿಯತ್ತ ಸಾಗಲಿಸಲು ಪ್ರಯತ್ನ ಮಾಡಬೇಕು ಎಂದು ಮಾಜಿ ಶಾಸಕ ಗಂಗಾಧರ ನಾಯಕ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾಜಿ ಶಾಸಕ ಗಂಗಾಧರ ನಾಯಕ ಮಾತಾನಾಡಿ, ಅನ್ನದಾಸೋಹ ಮಾಡುವುದು ಪುಣ್ಯ ಕಾರ್ಯ ಶಿವನಗೌಡ ನಾಯಕರಿಗೂ ಇನ್ನೂ ಹೆಚ್ಚಿನ ಶಕ್ತಯುತರಾಗಿ ಬೆಳೆಯುವಂತೆ ಎಲ್ಲ ಆಶಿರ್ವಾದ ಇರಲಿ ಅದರಂತೆ ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದುಡಿಯುವ ಕೆಲದಸ ಜೊತೆ ಬಡವರಿಗೆ ವಸತಿ ನಿಲಯ ನಿರ್ಣಾಯ ಮಾಡಬೇಕು ಅದರಂತೆ ಬಡವರಿಗೆ ಭೂ ದಾನವನ್ನು ಮಾಡುವಂತೆ ಪರಮಾತ್ಮನಲ್ಲಿ ಬೇಡುವೆನು ಎಂದು ಹೇಳಿದರು.
ಪಟ್ಟಣದ ಶಿವಲಿಂಗ ದೇವಸ್ಥಾನದ ಹಿಂಭಾಗದಲ್ಲಿ ನಡೆದ ದೇವದುರ್ಗ ಶಾಸಕ ಕೆ ಶಿವನಗೌಡ ನಾಯಕ ಇವರ ಅನ್ನದಾಸೋಹ ಕೇಂದ್ರ ಉದ್ಘಾಟನೆ ಕಾರ್ಯಕ್ರಮವನ್ನು ಮುಂಡರಗಿ ಶಿವಣ್ಣ ತಾತಾನವರು ದೀಪಾ ಬೆಳಸಗಿಸುವುದರ ಮೂಲಕ ಉದ್ಘಾಟನೆ ಮಾಡಿದರು ನಂತರ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಹಾರ ಸಾಗಣೆ ವಾಹನಗಳನ್ನು ಸಂಸದ ಅಮರೇಶ ನಾಯಕ ಇವರು ಉದ್ಘಾಟನೆ ಮಾಡಿ ಮಾತಾನಾಡಿ ದೇಶದಲ್ಲಿ ಕರೋನ ಸಂಕಷ್ಟದ ಸಂದರ್ಭದಲ್ಲಿ ಕೆ.ಶಿವನಗೌಡ ನಾಯಕ ಇವರ ಸೇವೆ ಶ್ಲಾಘನೀಯ ಇದು ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದರು.
ತಾಲೂಕಿನ ಮತ್ತು ಸಿರವಾರ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೆ ದೇವದುರ್ಗ ಶಾಸಕ ಕೆ ಶಿವನಗೌಡ ನಾಯಕ ಅವರ ಅಭಿಮಾನಿ ಬಳಗದಿಂದ ಇಂದು ಪಟ್ಟಣದ ಶಿವಲಿಂಗ ದೇವಸ್ಥಾನದ ಹಿಂಭಾಗದಲ್ಲಿ ಅನ್ನ ದಾಸೋಹ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು ಪ್ರತಿ ದಿನ 60 ಆಹಾರ ಪೊಟ್ಟಣ ಅಥಾವ 35 ಸಾವಿರ ಕೆಜಿ ಆಹಾರವನ್ನು ಸಿದ್ದ ಮಾಡಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಿಗೆ ಹಂಚಿಕೆ ಮಾಡಿ ಬಡವರ ಹೊಟ್ಟೆಯನ್ನು ತುಂಬಿಸುವ ಕೆಲಸ ಮಾಡಲಾಗುತ್ತದೆ ಎಂದು ಕೆ ಶಿವನಗೌಡ ಅಭಿಮಾನಿ ಬಳಗದ ತಾಲೂಕ ಅಧ್ಯಕ್ಷ ವಿರೇಶ ನಾಯಕ ಬೆಟದೂರು ತಿಳಿಸಿದರು‌.
ನಂತರ ಚಿಕಲಪರ್ವಿ ಅನ್ನದಾನ ಸ್ವಾಮಿ ಮಾತಾನಾಡಿ ಮಹಾಮಾರಿಯಿಂದ ಎಲ್ಲರಿಗೂ ತೊಂದರೆಯಾಗಿದೆ. ಈ ಕರೋನ ವಿಶ್ವಕ್ಕೆ ಮುಳುವಾಗಿದೆ. ಕಳೆದ ಎಲ್ಲ ರೋಗಗಳು ನೈಸರ್ಗಿಕ ರೋಗಗಳಾಗಿದ್ದವು ಆದರೆ ಈ ಕರೋನ ಮಾನವ ನಿರ್ಮಿತವಾಗಿದೆ ದಯವಿಟ್ಟು ಕರೋನ ರೋಗಿಗಳನನ್ನು ಕೀಳಾಗಿ ಕಾಣಬೇಡಿ ಆತ್ಮ ಸ್ಥೈರ್ಯನೀಡಿ ಎಂದರು. ಇಂತಹ ಕಾಲದಲ್ಲಿ ದೇವದುರ್ಗ ಶಾಸಕ ಶಿವನಗೌಡ ನಾಯಕ ಇವರ ಸೇವಾ ಕಾರ್ಯ ಶ್ಲಾಘನೀಯವಾಗಿದೆ  ಎಲ್ಲರೂ ದಯವಿಟ್ಟು ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿರಿ ಎಂದರು..ಹಾಗೂ ಸೋಮನಾಥ ಶಿವಾಚಾರ್ಯ ನವಲಕಲ್ ಸ್ವಾಮಿಗಳು ಮಾತಾನಾಡಿ ದಾನ ಮಾಡಿದರೇ ಮನಸ್ಸಿಗೆ ಮುಟ್ಟುತ್ತದೆ ಆದರೆ ದಾಸೋಹ ಮಾಡಿದರೇ ಅದು ಕೈಲಾಸಕ್ಕೆ ಮುಟ್ಟುತ್ತದೆ ಎಂದರು.
ನಂತರ ಕೋನಾಪುರ ಪೇಟೆ ಕ್ಯಾಥೊಲಿಕ್ ಚರ್ಚ್ ಫಾದರ್ ಜ್ಞಾನ ಪ್ರಕಾಶಂ ಮಾತಾನಾಡಿ ಎಲ್ಲರೂ ಸಮಾನರು ಎನ್ನುವುದು ನಾವು ಅರಿಯಬೇಕಾಗಿದೆ ಈ ಕರೋನ ಸಂದರ್ಭದಲ್ಲಿ ಅನ್ನ ದಾಸೋಹ ಮಾಡಿದ್ದು ಪುಣ್ಯ ಕಾರ್ಯ ದೇವರು ಶಿವನಗೌಡ ಅವನ್ನು ಆಶಿರ್ವಾದಿಸಲಿ ಎಂದರು. ನಂತರ ಅನೇಕ ಗಣ್ಯರು ಮಾತಾನಾಡಿ ಅನ್ನದಾಸೋಹ ಕಾರ್ಯಕ್ರಮ ಅತ್ಯುತ್ತಮವಾಗಿದೆ ಎಂದರು‌.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಸೋಮನಾಥ ಶಿವಾಚಾರ್ಯ ನವಲಕಲಗ‌, ಶಂಭುಲಿಂಗಸ್ವಾಮಿ, ಮಹಾಂತಲಿಂಗ ಸ್ವಾನಿ, ಅನ್ನದಾನಿ ಸ್ವಾಮಿ, ಬಸಯ್ಯತಾತಾ, ಅಯ್ಯಪ್ಪ ತಾತಾ. ರೇವನ್ ಸ್ವಾಮಿ, ಮೌಲಾನಾ ಮುಸ್ತಿ ಹಸನ್ ಖಾದ್ರಿ‌ ಗುರುಗಳು, ಬೀರಪ್ಪ ಸ್ವಾಮಿ ಹಳ್ಳಿಹೊಸೂರು, ಜ್ಞಾನ ಪ್ರಕಾಶಂ, ಮುಂಡರಗಿ ಶಿವಣ್ಣತಾತಾ, ಸುವರ್ಣ ಗಿರಿ ಶ‌ಂಕ್ರಯ್ಯ ಸ್ವಾಮಿ, ಗುರುಬಸಯ್ಯ ತಾತಾ, ರಾಮದಾಸ ಸ್ವಾಮಿ, ಸಂಸದ ರಾಜಾ ಅಮರೇಶ ನಾಯಕ ಮಾಜಿ ಶಾಸಕರಾದ ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ, ತಿಪ್ಪರಾಜ ಹವಾಲ್ದಾರ್, ರಮಾನಂದ ಯಾದವ್, ತಿಮ್ಮಯ್ಯ ಶೆಟ್ಟಿ, ಎಂ.ಈರಣ್ಣ, ಶಾಂತಪ್ಪ ಕಪಗಲ್‌, ತ್ರಿವಿಕ್ರಮ, ಅನೀಲಕುಮಾರ ಕೋನಾಪುರಪೇಟೆ, ಅರುಣ್ ಚಂದ್, ಉಮೇಶ ಸಜ್ಜನ್‌, ದೊಡ್ಡಣ್ಣ, ಸತೀಶ್,  ಮುದ್ದುರಂಗರಾವ್, ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ವೀರನಗೌಡ ಪೋತ್ನಾಳ, ತಿಮ್ಮರಡ್ಡಿ ಬೋಗವತಿ, ಚಂದ್ರಕಾಲದರ ಸ್ವಾಮಿ, ಕೆ ಬಸವಂತಪ್ಪ, ಶಿವಶರಣ ಪಾಟೀಲ, ಗಫೂರ್ ಸಾಬ್ ಕವಿತಾಳ, ಉಮಾಕಾಂತ ಸಾಹುಕಾರ, ವಿರೇಶ ನಾಯಕ ಬೆಟದೂರು, ರಮೇಶ ಚಿಂಚರಿಕಿ ಸೇರಿದಂತೆ ಅನೇಕರು ಅಧಿಕಾರಿಗಳಾದ ತಾಲೂಕ ದಂಡಾಧಿಕಾರಿ ಸಂತೋಷ ರಾಣಿ, ಸಿಪಿಐ ಮಹಾದೇವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Attachments area