Wednesday, 9th October 2024

HSRP Deadline: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸಲು ಡೆಡ್‌ಲೈನ್‌ ಮತ್ತೆ ವಿಸ್ತರಣೆ, ವಿವರ ಇಲ್ಲಿದೆ

hsrp deadline

ಬೆಂಗಳೂರು: ವಾಹನಗಳಿಗೆ ಎಚ್‌ಎಸ್‌ಆರ್‌ಪಿ (High Security Number Plate) ನಂಬರ್‌ ಪ್ಲೇಟ್‌ ಅಳವಡಿಸುವ ಡೆಡ್‌ಲೈನ್‌ ಅನ್ನು ಮುಂದಿನ 2 ತಿಂಗಳವರೆಗೆ ವಿಸ್ತರಿಸಲು ಹೈಕೋರ್ಟ್ (High Court) ಅನುಮತಿ ನೀಡಿದೆ. ಹೀಗಾಗಿ, ನಿಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ನವೆಂಬರ್‌ 20ರ ವರೆಗೂ ಟೈಮ್‌ ಇದೆ.

2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡುವಂತೆ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ 2023ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈಗಾಗಲೇ ಇಲ್ಲಿವರೆಗೂ ನಾಲ್ಕು ಬಾರಿ ಗಡುವು ನೀಡಿದೆ. ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡದ ವಾಹನ ಸವಾರರಿಗೆ ಸೆ.16ರಿಂದ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿತ್ತು.

ಆದರೆ ಈ ಕುರಿತ ವಿಚಾರಣೆ ಹೈಕೋರ್ಟ್‌ನಲ್ಲಿ ಇದ್ದುದರಿಂದ ಸೆ.18ರ ವರೆಗೂ ಡೆಡ್‌ಲೈನ್‌ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮತ್ತೆ ಗಡುವನ್ನು ವಿಸ್ತರಣೆ ಮಾಡಿ ಹೈಕೋರ್ಟ್‌ ಆದೇಶ ನೀಡಿದೆ.

HSRP ನಂಬರ್‌ ಪ್ಲೇಟ್‌ ಪಡೆಯವ ವಿಧಾನ

  • https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು.
  • ನಂತರ Book HSRP ಕ್ಲಿಕ್ ಮಾಡಿ.
  • ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ.
  • ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ.
  • ನಿಮ್ಮ ಹತ್ತಿರದ ಅಥವಾ ನಿಮ್ಮ ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ.
  • ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ.
  • ಮೊಬೈಲ್ ನಂಬರ್‌ಗೆ ಒಟಿಪಿಯನ್ನು ನಮೂದಿಸಿ
  • HSRP ನಂಬರ್ ಪ್ಲೇಟ್ ಅಳವಡಿಕೆಗೆ ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಬೇಕಾಗುತ್ತದೆ.

2019ರ ಏಪ್ರಿಲ್ 1ರ ಹಿಂದೆ ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೂ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಮಾಡಿಸಿಕೊಳ್ಳಲು ಆದೇಶಿಸಲಾಗಿದೆ. ಈ ವಿಚಾರ ಕೋರ್ಟ್‌ನಲ್ಲಿದ್ದುದ್ದರಿಂದ ದಂಡಾಸ್ತ್ರದ ದಿನಾಂಕವಾನ್ನು ಸೆಪ್ಟೆಂಬರ್‌ 18ಕ್ಕೆ ಮುಂದೂಡಲಾಗಿತ್ತು. ಇದೀಗ ಕರ್ನಾಟಕ ಹೈಕೋರ್ಟ್‌ ಎಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆಗೆ ನವೆಂಬರ್‌ 20ರವರೆಗೂ ಸಮಯ ನೀಡಿದೆ. ಇದರಿಂದ ವಿವಿಧ ಕಾರಣಗಳಿಂದ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸದ ವಾಹನ ಸವಾರರಿಗೆ ಇದ್ದ ಆತಂಕ ದೂರವಾಗಿದೆ.

ಕೇಂದ್ರ ಸಾರಿಗೆ ಇಲಾಖೆಯಿಂದ ದೇಶಾದ್ಯಂತ ಎಲ್ಲಾ ಮೋಟಾರು ವಾಹನಗಳಿಗೆ ಒಂದೇ ರೀತಿಯ ನಂಬರ್ ಪ್ಲೇಟ್ ಅಳವಡಿಸುವ ಉದ್ದೇಶದಿಂದ ಎಚ್‌ಎಸ್‌ಆರ್‌ಪಿ ನೋಂದಣಿಗೆ ಆದೇಶ ಹೊರಡಿಸಲಾಗಿತ್ತು. ಆಯಾ ರಾಜ್ಯದ ಸಾರಿಗೆ ಇಲಾಖೆಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದ್ದು, ಬಳಿಕ ದಂಡ ವಿಧಿಸಲು ಸೂಚನೆ ನೀಡಿತ್ತು.

ಈ ಹಿನ್ನೆಲೆ ರಾಜ್ಯ ಸರ್ಕಾರ ಈಗಾಗಲೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದಕ್ಕೆ 4 ಬಾರಿ ಗಡುವು ನೀಡಿದ್ದು, ಗಡುವು ವಿಸ್ತರಣೆ ಅವಧಿಯು ಸೆಪ್ಟೆಂಬರ್‌ 15ಕ್ಕೆ ಮುಕ್ತಾಯ ಆಗಿತ್ತು. ಇದೀಗ ಮತ್ತೆ ನವೆಂಬರ್‌ 20ರ ವರೆಗೂ ಗಡುವು ನೀಡಲಾಗಿದೆ.

ರಾಜ್ಯದಲ್ಲಿ ಒಟ್ಟು 2 ಕೋಟಿಗೂ ಅಧಿಕ ವಾಹನಗಳಿವೆ. ಆದರೆ, ಇಲ್ಲಿಯವರೆಗೆ ಕೇವಲ 51,00,000 ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ನೊಂದಣಿಯಾಗಿದ್ದು, ಉಳಿದ 1.49 ಕೋಟಿ ವಾಹನಗಳು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ. ಅಳವಡಿಸದ ವಾಹನ ಮಾಲಿಕರಿಗೆ ಮೊದಲ ಬಾರಿಗೆ 500 ರೂಪಾಯಿ ದಂಡ, ಎರಡನೇ ಬಾರಿಗೆ 1000 ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿತ್ತು.

ಇದನ್ನೂ ಓದಿ: HSRP Deadline: ಎಚ್‌ಎಸ್‌ಆರ್‌ಪಿ ಪ್ಲೇಟ್‌ ಗಡುವು ಮುಕ್ತಾಯ, 3 ದಿನ ವಾಹನ ಚಾಲಕರು ಸೇಫ್‌