Tuesday, 10th December 2024

ಬಸವೇಶ್ವರರ ಜಯಂತಿ ಅದ್ದೂರಿಯಾಗಿ ಆಚರಿಸಿ : ಹುಲಿ ನಾಯಕ

ಬಸವೇಶ್ವರ ಜಯಂತಿ ಪೂರ್ವಭಾವಿ ಸಭೆ

ಸಿರವಾರ : ಮೇ 3 ರಂದು ನಡೆಯಲಿರುವ ವಿಶ್ವಗುರು ಬಸವಣ್ಣನವರ ಜಯಂತಿ ಯನ್ನು ಅದ್ದೂರಿಯಾಗಿ ಆಚರಿಸುವ ಬಗ್ಗೆ ತಾಲೂಕಾಡಳಿತದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ತಹಸೀಲ್ದಾರ್ ಕಾರ್ಯಾಲಯದಲ್ಲಿ ತಹಸೀಲ್ದಾರ ವಿಜಯೇಂದ್ರ ಹುಲಿ ನಾಯಕ ಅಧ್ಯಕ್ಷತೆ ಯಲ್ಲಿ ನಡೆದ ಪೂರ್ವಭಾವಿ ಸಭೆ ಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಶಿವಶರಣ ಸಾಹುಕಾರ ಅರಿಕೇರಿ ಮಾತನಾಡಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸಮಾನತೆಗಾಗಿ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ತಮ್ಮ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಮಹಾನ್ ಮಾನವತ ವಾದಿಯಾಗಿದ್ದಾರೆ. ಅನುಭವ ಮಂಟಪ ಸ್ಥಾಪಿಸುವ ಮೂಲಕ ಪ್ರಥಮ ಬಾರಿಗೆ ಸಂಸತ್ತಿನ ಪರಿಕಲ್ಪನೆಗೆ ನಾಂದಿಯಾಡಿದರು. ಅವರ ವಚನ ತತ್ವ- ಸಿದ್ಧಾಂತ ಗಳು ಸರ್ವರಿಗೂ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕಾಡಳಿತದಿಂದ ವಿಶ್ವಗುರು ಬಸವೇಶ್ವರರ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸುವಂತೆ ಸಭೆಯಲ್ಲಿ ತಿಳಿಸಿದರು.

ನಂತರ ತಹಸೀಲ್ದಾರ ವಿಜಯೇಂದ್ರ ಹುಲಿ ನಾಯಕ ಮಾತನಾಡಿ, ಬಸವ ಜಯಂತಿಯ ನ್ನು ಅದ್ಧೂರಿಯಾಗಿ ಆಚರಿಸು ಬಗ್ಗೆ ತಾಲೂ ಕಾಡಳಿತದಿಂದ ಸದಾ ಸಿದ್ದವಿದೆ ಆದರೆ ರಾಜ್ಯ ದಲ್ಲಿ 4 ನೇ ಅಲೆ ಕೋವಿಡ್ ಸೋಂಕು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಸಿಎಂ ಅವ ರು ಕೋವಿಡ್ ನಿಯಮಗಳನ್ನು ಜಾರಿಗೊಳಿ ಸುವ ಬಗ್ಗೆ ಆದೇಶ ನೀಡಿದ್ದಾರೆ ಎಂದರು. ಜಯಂತಿಯಲ್ಲಿ ವಿಶೇಷ ಉಪನ್ಯಾಸಕರನ್ನಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅವರನ್ನು ಸೂಚಿಸಲಾಯಿತು.

ಪಟ್ಟಣದ ಮೇ. 3 ರಂದು ಸಂಜೆ ಈಶ್ವರ ದೇವಸ್ಥಾನದಿಂದ ಬಸವ ವೃತ್ತ ದೇವದುರ್ಗ ಸರ್ಕಲ್ ವರೆಗೆ ಭಾವ ಚಿತ್ರ ಮೆರವಣಿಗೆ ನಂತರ ವೇದಿಕೆ ಕಾರ್ಯಕ್ರಮ ಸಾಯಂಕಾಲ ನಡೆಸಲಾಗುವುದು ಎಂದು ತೀರ್ಮಾನಿ ಸಲಾಯಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಜಗದೀಶ ಭಂಡಾರಿ, ಕೃಷಿ ಅಧಿಕಾರಿ ಪವಿಧಾ ಬೇಗಂ, ಜೇಸ್ಕಾಂ ಇಲಾಖೆ ಅಧಿಕಾರಿ ಎಇಇ ಬೆನ್ನಪ್ಪ ಕರಿಬೆಂಟನಾಳ, ಪೊಲೀಸ್ ಇಲಾಖೆ ಎಎಸ್ ಐ ರಾಮಜೀ ನಾಯಕ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ,ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ ಜಾಡಲದಿನ್ನಿ, ಎನ್ ಉದಯಕುಮಾರ ಸಾಹುಕಾರ,ಜಿ. ಲೋಕರೆಡ್ಡಿ, ತಾ.ಪಂ ಮಾಜಿ ಅಧ್ಯಕ್ಷ ದಾನನ ಗೌಡ ಸಿರವಾರ ಶಿವಶರಣಗೌಡ ಲಕ್ಕಂದಿನ್ನಿ, ಜೆ. ದೇವರಾಜ ಗೌಡ,ಶಿವಶರಣ ಸಾಹುಕಾರ ಅರಿಕೇರಿ,ಪ.ಪಂ ಸದಸ್ಯ ಕೃಷ್ಣ ನಾಯಕ, ಅಯ್ಯನಗೌಡ ಎರಡ್ಡಿ,ನಾಗಪ್ಪ,ನಿಂಬಯ್ಯಾ ಸ್ವಾಮಿ,ಕೆಂಪು ಬಸವ,ವಿರೇಶ ಗಣೇಕಲ್, ಶಿವರಾಮ ರೆಡ್ಡಿ,ಹನುಮೇಶ ಬಲ್ಲಟಗಿ, ಚಂದ್ರು ಹಡಪದ, ಸೇರಿದಂತೆ ವೀರಶೈವ ಸಮಾಜದ ಮುಖಂಡರು ಇತರರು ಇದ್ದರು.