Thursday, 19th September 2024

ಮಾನವೀಯತೆ ಮೆರೆದ ಸಂಜೀವನ್ ಯಕಾಪೂರ್

ಚಿಂಚೋಳಿ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ 6 ಗಡಿ ಏರಿಯಾ ದಲ್ಲಿ ಬಿಸಿಲಿನ ತಾಪಮಾನದಿಂದ ಕುದುರೆ ಜೇನು ನೊಣಗಳು ಸಾರ್ವಜನಿಕರಿಗೆ ಕಚ್ಚಿ ಸುಮಾರು 4 ರಿಂದ 6 ಜನರು ಅಸ್ವಸ್ಥರಾಗಿದ್ದಾರೆ.

ವಿಷಯ ಅರಿತ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಸಂಜೀವನ್ ಆರ್ ಯಾಕಾಪೂರ ಅವರು, ಆಸ್ಪತ್ರೆಗೆ ತೆರಳಿ ಗಾಯಗೊಂಡಿ ರುವ ಜನರ ಯೋಗ ಕ್ಷೇಮ ವಿಚಾರಿಸಿ, ಸಂಭಂದಪಟ್ಟ ವೈದ್ಯರೊಂದಿಗೆ ಚರ್ಚಿಸಿ, ಉನ್ನತ ಮಟ್ಟದ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸಂತೋಷ ಪಾಟೀಲ್ ಮಾತನಾಡಿ, 6 ಜನರಿಗೆ ಕಡಿದಿದ್ದು, ಒಬ್ಬರಿಗೆ ಬಿಪಿ ಕಡಿಮೆ ಆಗಿದ್ದ ರಿಂದ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ, ಇಬ್ಬರನ್ನು ಚಿಕೆತ್ಸೆ ನೀಡಿ,  ಮನೆಗೆ ಕಳುಹಿಸಲಾಗಿದೆ ಎಂದು ವಿಶ್ವವಾಣಿಗೆ ಮಾಹಿತಿ ತಿಳಿಸಿದರು. ಡಾ. ಅನೀಲ್ ಇದ್ದರು.

ಈ ಸಂಧರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ರಘುನಾಥ ದೇಸಾಯಿ,ಬಸವರಾಜ ಕಂಟ್ಲಿ ಕಲ್ಲೂರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯ್ಯದ ನಿಯಾಜ್ ಅಲಿ, ಪ ಜಾ /ಪ ಪಂ ಅಧ್ಯಕ್ಷರಾದ ಶರಣಪ್ಪ ಮಾಳಗಿ, ಯುವ ಅಧ್ಯಕ್ಷರಾದ ರಮೇಶ ಜೋನ್ನಲ್, ವೀರಯ್ಯ ಗೌಡ್ಸ್ ಕಲ್ಲೂರ್, ನೀಲಕಂಠ ಹುಡಗಿ ಐನೋಳ್ಳಿ, ನೀಲಕಂಠ ಕೆ. ಕೆ. ಚಂದಾಪೂರ, ರಾಧಾಕೃಷ್ಣ ಹೊಸಮನಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ರಾಹುಲ ಸಂಜೀವನ್ ಯಾಕಾ ಪೂರ, ಸುರೇಂದ್ರ ಶಿವರೆಡ್ಡಿಪಲ್ಲಿ, ನರಸಿಂಗ್ ಕುಂಚಾವರಾಂ, ಹುಲಗಪ್ಪ ಪಿಟ್ಲಾ, ಮಲ್ಲಿಕಾರ್ಜುನ್ ಪೂಜಾರಿ ಅಣ್ವಾರ,ಹಣಮಂತ ರೆಡ್ಡಿ ದೋಟಿಕೋಳ್, ಯಲ್ಲಪ್ಪ ವಡೆಯರ,ಜಗನ ಹೆಚ್.ಡಿ. ಪ್ರಮೋದ್ ಲೋಡ್ದನೊರ್, ವಿಜಯ, ಸುಶೀಲ್ ಐನೋಳ್ಳಿ, ಅಯ್ಯುಬ್ ಹೋಟೆಲ್ ಚಿಂಚೋಳಿ, ಶೆಕ್ ಅಮೀರ್ ಚಿಂಚೋಳಿ, ಅನಿಲ್ ಪರೀಟ್, ಎಸ್ ಕೆ ಮುಕ್ತಾರ,ಹಣಮಂತ ಗಡ್ಡಿಮನಿ,ಅರುಣ ಅಣವಾರ,ಶ್ರೀಕಾಂತ ರುಸ್ತಂ ಪೂರ್, ರಾಜು ದೊಟಿಕೊಳ್, ನಿಶಾಂತ ಗಾರಂಪಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.