ಇಂಡಿ: ರಾಷ್ಟ್ರಕ್ಕಿಂತಲೂ ಮಿಗಿಲಾದ ಸ್ಥಾನ ನಮ್ಮ ದೇಶದ ಬೇರೆ ಯಾವ ಧ್ವಜಗಳಿಗೆ ಇಲ್ಲ. ಪ್ರತಿ ಭಾರತೀಯರ ಸ್ವಾಭಿಮಾನದ ಸಂಕೇತ ಎಂದು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಎಚ್.ವಿ ರಜಪೂತ ಹೇಳಿದರು.
ತಾಲೂಕಿನ ಸಂಗೋಗಿ ಗ್ರಾಮ ಪಂಚಾಯತದಲ್ಲಿ ನಡೆದ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ ಜಾಥಾ ಆಯೋಜನೆಯಲ್ಲಿ ಮಾತನಾಡಿದ ಅವರು ಪ್ರತಿಯೋಬ್ಬ ರಿಗೂ ತನ್ನ ದೇಶ ,ಭಾಷೆ, ನೆಲ,ಜಲ ಮೇಲೆ ಗೌರವ ಅಭಿಮಾನ ಇರಬೇಕು. ಭಾರತದ ಧ್ವಜ ಅತ್ಯೆಂತ ಪವಿತ್ರವಾಗಿದೆ. ಕೆಸರಿ,ಬಿಳಿ,ಹಸಿರು ತನ್ನದೆಯಾದ ಸ್ಥಾನ ಹೊಂದಿವೆ. ತ್ರಿವರ್ಣ ಧ್ವಜವು ಭಾರತದ ಐಕ್ಯತೆ, ಸಮಗ್ರತೆ ಮತ್ತು ಭಾತೃತ್ವ ಭಾವನೆಗಳ ಸಮ್ಮೀಳಿತವಾಗಿದೆ. ೭೫ ನೇ ಸ್ವಾತಂತ್ರ್ಯೋತ್ಸವ ಭಾರತೀಯರಾದ ನಾವುಗಳ ಪ್ರತಿಮನೆ ಮನೆಗಳ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಅದ್ದೂರಿ ಹಬ್ಬವನ್ನಾಗಿ ಆಚರಿಸೋಣ ಎಂದರು.
ಗ್ರಾ.ಪಂ ಅಧ್ಯಕ್ಷ ಭಾಗೇಶ್ರೀ ಭಂಡಾರಿ, ಎಂ.ಜಿ.ಎನ್.ಆರ್.ಜಿ ಸಂಯೋಜಕ ಓಂಕಾರ, ಸದಸ್ಯರಾದ ಚಂದ್ರಶೇಖರ ಕುಂಬಾರ, ಬಾಳಾಸಾಹೇಬ ಪಾಟೀಲ, ಅರ್ಜುನ ಆಲಮೇಲ, ಅಶೋಕಗೌಡ ಬಿರಾದಾರ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.