Friday, 1st December 2023

ಜಮೀನುಗಳಿಗೆ ನೀರು ಒದಗಿಸಿ, ಬದುಕಿಗೆ ಹೊಸ ಸ್ಪರ್ಶ ನೀಡಲಾಗುವುದು

ಇಂಡಿ: ೭೫ ವರ್ಷಗಳ ಸುಧೀರ್ಘ ಅವಧಿಯಲ್ಲಿ ರಾಜ್ಯ ಕಂಡಿರಿಯದ ಭೀಕರ ಬರ ಸಂಭ ವಿಸಿದ್ದು, ಈ ಭಾಗ ಕುಡಿಯಲು ನೀರು ಇಲ್ಲದೆ ಜನ,ಜಾನುವಾರಗಳು ಸಂಕಷ್ಟ ಬದುಕು ಸಾಗಿಸುತ್ತಿರುವುದು ನಮ್ಮ ದುರ್ದೈವ, ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಮಾಡುವ ಮೂಲಕ ಈ ಭಾಗದ ರೈತರ ಜಮೀನುಗಳಿಗೆ ನೀರು ಒದಗಿಸಿ ಅವರಬದುಕಿಗೆ ಹೊಸ ಸ್ಪರ್ಷ ನೀಡಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಹೋರ್ತಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಹೋರ್ತಿ ೪೮ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು ನಿಸರ್ಗ ಪ್ರತಿ ಹಂತದಲ್ಲಿ ಈ ಭಾಗದ ರೈತರ ಬದುಕಿಗೆ ಬರೆ ನೀಡುತ್ತಿದೆ. ನೀರು ಯಾವುದೇ ರೂಪದಲ್ಲಿ ತರಲು ಸಾಧ್ಯ ನಿಸರ್ಗ ಒಳ್ಳೇಯದನ್ನು ಮಾಡಿದರೆ ಮಾತ್ರ ಸಾಧ್ಯ. ಭಗವಂತ ಜಾನುವಾರಗಳ ಮೇಲಾ ದರೂ ಕರುಣೆ ತೋರಬೇಕು. ೨೦೧೩ರಲ್ಲಿ ಕುಡಿಯುವ ನೀರಿನ ಸಂಕಷ್ಟ ಹೇಳತೀರದು ಸುಮಾರು ೫೬ ಹಳ್ಳಿಗಳಿಗೆ ಟ್ಯಾಂಕರ ಮೂಲಕ ನೀರು ಒದಗಿಸ ಲಾಗಿದೆ ಅಂತಹ ಸಂಕಷ್ಟ ಇಂದು ಇರಲಿಕ್ಕಿಲ್ಲ ಅಲ್ಪಪ್ರಮಾಣದಲ್ಲಿ ಸರಿದೂಗಿಸಲಾಗಿದೆ.

ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಯೋಜನೆ ಕಳೆದ ಸರಕಾರದಲ್ಲಿ ಮುಖ್ಯ ಮಂತ್ರಿಗಳು ಹಾಗೂ ನೀರಾವರಿ ಸಚಿವರು ಈ ಭಾಗದಲ್ಲಿ ಬಂದು ಹಸಿರು ನಿಶಾನೆ ತೋರಿಸಿದ್ದಾರೆ. ಪರಮ ಪೂಜ್ಯ ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಮಹಾಸ್ವಾನಿಗಳ ಕೃಪಾರ್ಶೀವಾದ ಅವರ ದಿವ್ಯವಾಣಿಯಿಂದ ಈ ಭಾಗದ ರೈತರ ಬದುಕು ಹಸನಾಗಿಸಲು ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಜಾಕ್‌ವೇಲ್ಲ ,ಪೈಪಲೈನ್ ಮೂಲಕ ನೀರು ಕೃಷ್ಣಾ ನದಿಯಿಂದ ನೀರು ಸಾವಳಸಂಗ ಅತೀ ಎತ್ತರ ಪ್ರದೇಶ ಗುಡ್ಡದ ಮೇಲೆ ನೀರು ಹಾರಿಸಿ ೭೫ ಸಾವಿರ ಎಕರೆ ಪ್ರದೇಶ ನೀರು ಒದಗಿಸಿ ರೈತರ ಬಳು ಬಂಗಾರ ಮಾಡಲಾಗುವುದು ಎಂದು ಶಾಸಕ ಪಾಟೀಲ ಹೇಳಿದರು.

ಎಲ್ಲರನ್ನು ಒಗ್ಗೂಡಿಸಿ ಕರೇದುಕೊಂಡು ಹೋಗುವ ಕೆಲಸ ಸಹಕಾರಿ ಸಂಘಗಳು ಮಾಡುತ್ತಿವೆ. ಪ್ರತಿಯೊಂದಕ್ಕೂ ಹಣ ಬೇಕು ಹಣತಗೇದುಕೊಂಡವರು ಮರಳಿ ಕೊಡುವ ಹಂಬಲ ಇರಬೇಕು ತಗೆದುಕೊಂಡವರು ಕುಟ್ಟಾಗ ಇಂತಹ ಸಂಸ್ಥೆಗಳು ಬೆಳೆಯು ತ್ತವೆ. ಸಹಕಾರಿ ಸಂಘಗಳು ಸಹಕಾರಿ ಗುಣಗಳು ಇದ್ದಾಗ ಅಭಿವೃದ್ದಿ ಹೊಂದುತ್ತವೆ, ಸಹಕಾರಿ ಗುಣ ಇರುವೆ. ಪ್ರಾಣಿ ಪಕ್ಷಿಗಳಲ್ಲಿ ಕಂಡು ಬರುತ್ತವೆ. ಕಾಗೆ ಒಂದು ಕುಟುಕು ಅನ್ನ ಕಂಡರೆ ಕರೇಯುವುದೇ ತನ್ನ ಕುಲವನ್ನು ಎನ್ನುವಂತೆ ಮನುಷ್ಯನನಲ್ಲಿ ಕೂಡಾ ಹಂಚಿಕೊAಡು ತಿನ್ನುವ ಬುದ್ದಿ ಬರಬೇಕು. ಸಹಕಾರಂ ಗೆಲ್ಗೇ ಬಾಲ್ಗೇ ಈ ಸಹಕಾರಿ ಸಂಘ ಇನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಗುರು ಚಕ್ರವರ್ತಿ ಚಮಕೇರಿ, ಅರಭಾವಿ,ಕತ್ನಳ್ಳಿ ಮಠದ ಶಿವಯ್ಯಾ ಹಿರೇಮಠ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿ ಅರ್ಶೀವಚನ ನೀಡಿದರು.

ಮಾಜಿ ಜಿ.ಪಂ ಸದಸ್ಯ ಮಹಾದೇವ ಗಡ್ಡದ, ಆರ್,ಎಂ ಬಣಕಾರ, ಎಸ್.ಎನ್ ದೇಸಾಯಿ, ಶ್ರೀಮಂತ ಇಂಡಿ, ಸುರೇಶ ದೇಸಾಯಿ, ಮಲ್ಲಪ್ಪ ಬೋಸಗಿ, ಗುರಪ್ಪ ನಿಲಂಗಿ, ಮಹಾದೇವ ಬಿರಾದಾರ, ಮೋಹನಗೌಡ ಬಿರಾದಾರ, ಮಹಾದೇವ ಭತಗುಣಕಿ, ವಿಠ್ಠಲ ನಾಯಕೋಡಿ, ಸಿದ್ದರಾಮ ಖವಾಸಪೂರ, ರಾಜಕುಮಾರ ತಳಕೇರಿ, ನಿಲ್ಲಮ್ಮಾ ಡೋಣಗಿ, ಕಸ್ತೂರಿಬಾಯಿ ಹಿರೇಮಠ, ಶ್ರೀಕಾಂತ ಕಪಾಸೆ ವೇದಿಕೆಯಲ್ಲಿದ್ದರು.

ಜಯಶ್ರೀ ಬೋಸಗಿ, ಸಾವಿತ್ರಿ ಮೋರೆ, ಯಲ್ಲಪ್ಪ ಪೂಜಾರಿ, ಶಾಂತು ರಿಸಲ್ದಾರ, ಸುನೀಲಗೌಡ ಬಿರಾದಾರ, ಎ.ಬಿ ಪೂಜಾರಿ, ಮುಖ್ಯ ಶಿಕ್ಷಕ ಬಿ.ಬಿ ಗಡ್ಡದ, ಎಸ್.ಎಸ್ ಬೋರಗಿ ಜಿ.ಆರ್ ಭೋಸಗಿ ಇದ್ದರು.

Leave a Reply

Your email address will not be published. Required fields are marked *

error: Content is protected !!