Thursday, 19th September 2024

R Ashok: ವಿಶ್ವ ಮಟ್ಟದಲ್ಲಿ ಭಾರತ ಶ್ರೇಷ್ಠ ದೇಶವಾಗಿ ಹೊರಹೊಮ್ಮಿದೆ: ಆರ್. ಅಶೋಕ್

R Ashok

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ತಿಳಿಸಿದರು. ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶ ಕಂಡ ಅಪರೂಪದ ನಾಯಕ, 3ನೇ ಬಾರಿ ಈ ದೇಶದ ಪ್ರಧಾನಿಯಾಗಿ ಸಮರ್ಥವಾಗಿ ಈ ದೇಶವನ್ನು ಯಾವುದೇ ಒಂದು ಭ್ರಷ್ಟಾಚಾರದ ಆಪಾದನೆ ಇಲ್ಲದೆ ಮುನ್ನಡೆಸಿ, ವಿಶ್ವನಾಯಕರಾಗಿರುವ ನರೇಂದ್ರ ಮೋದಿಜೀ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ಸೇವಾ ಪಾಕ್ಷಿಕದ ಮೂಲಕ ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಈ ಸುದ್ದಿಯನ್ನೂ ಓದಿ | Amit Shah: ಶೀಘ್ರದಲ್ಲೇ ಜನಗಣತಿ ಆರಂಭ; ಅಮಿತ್‌ ಶಾ

ಮೋದಿಯವರು ದೇಶದ ನಾಯಕತ್ವ ವಹಿಸಿಕೊಂಡ ಬಳಿಕ ವಿಶ್ವ ಮಟ್ಟದಲ್ಲಿ ಭಾರತವು ಶ್ರೇಷ್ಠ ದೇಶವಾಗಿ ಹೊರಹೊಮ್ಮಿದೆ. ಆರ್ಥಿಕತೆಯು ಬಲಿಷ್ಠಗೊಂಡಿದೆ. ರಷ್ಯಾ- ಉಕ್ರೇನ್ ಯುದ್ಧದ ಸಮಸ್ಯೆಯನ್ನು ನಮ್ಮ ದೇಶದ ಪ್ರಧಾನಮಂತ್ರಿಯವರು ಮಾತನಾಡಿ ಬಗೆಹರಿಸಬಹುದೆಂಬ ಮಟ್ಟಕ್ಕೆ ನರೇಂದ್ರ ಮೋದಿಯವರು ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು. ಮೋದಿಯವರ ನೇತೃತ್ವದಲ್ಲಿ ದೇಶದ ಸಾಧನೆಗಳನ್ನು ಅವರು ವಿವರಿಸಿದರು.

ರೈಲ್ವೆಯಲ್ಲಿ ಕ್ರಾಂತಿಕಾರಿ ಬದಲಾವಣೆ

ಮೋದಿಯವರು ರೈಲ್ವೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ವಿಶ್ವದರ್ಜೆಯ ವಂದೇ ಭಾರತ್ ರೈಲು ಯೋಜನೆ ಅನುಷ್ಠಾನದ ಮೂಲಕ ರಾಜ್ಯ -ರಾಜ್ಯಗಳನ್ನು ಸೇರಿಸುವ ಮೂಲಕ ಇಡೀ ಭಾರತವನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಬಂದರುಗಳು ವಿಶ್ವದರ್ಜೆಗೆ ಏರಿಕೆ ಕಾಣುತ್ತಿವೆ. ಗಡ್ಕರಿಯವರು ಸಚಿವರಾದ ಬಳಿಕ ದೇಶದ ರಸ್ತೆಗಳು ಜಾಗತಿಕ ಮಟ್ಟಕ್ಕೇರಿವೆ ಎಂದು ತಿಳಿಸಿದ ಅವರು, ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇ ಇದಕ್ಕೆ ಉದಾಹರಣೆ ಎಂದರು.

ಎಲ್ಲ ರಾಜ್ಯಗಳಲ್ಲೂ ರಸ್ತೆಗಳ ಆಧುನೀಕರಣ ನಡೆದಿದೆ. ಕಾಂಗ್ರೆಸ್ ಇದ್ದಾಗ ಒಂದು ಕಿಮೀ ಆದರೆ, ಅದರ 10 ಪಟ್ಟು ರಸ್ತೆಗಳ ಕಾಮಗಾರಿ ನಡೆಯುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ನೆರವಾಗಿದೆ. ಕೇಂದ್ರ ಸರ್ಕಾರವು 7 ಲಕ್ಷ ವರೆಗಿನ ಆದಾಯ ಉಳ್ಳವರಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ. ಮಹಿಳಾ ಸಬಲೀಕರಣ, ಯುವ ಸಬಲೀಕರಣಗಳಿಗೆ ಮೋದಿಯವರು ಹೊಸ ರೂಪ ಕೊಟ್ಟಿದ್ದಾರೆ ಎಂದು ವಿವರಿಸಿದರು.

ಈ ಸುದ್ದಿಯನ್ನೂ ಓದಿ | KEA Exam: ಪಿಎಸ್‌ಐ, ವಿಎಒ, ಕೆ-ಸೆಟ್‌ ಸೇರಿ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಈ ವೇಳೆ ಪಕ್ಷದ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ರಾಜ್ಯ ವಕ್ತಾರ ಎಸ್. ಪ್ರಕಾಶ್ ಹಾಜರಿದ್ದರು.