ಭಾರತವು (Indian Railways) ವಿಶ್ವದಲ್ಲೇ ನಾಲ್ಕನೇ ಅತೀ ದೊಡ್ಡ ರೈಲು ಜಾಲವನ್ನು (railway network) ಹೊಂದಿದೆ. ಪ್ರತಿದಿನ 20 ಮಿಲಿಯನ್ ಜನರು ರೈಲು ಪ್ರಯಾಣ (train travel) ಮಾಡುತ್ತಾರೆ. ದೇಶದ ಹಳಿಗಳಾದ್ಯಂತ ಪ್ರತಿದಿನ 13,452ಕ್ಕೂ ಹೆಚ್ಚು ರೈಲುಗಳು (train) ಕಾರ್ಯನಿರ್ವಹಿಸುತ್ತವೆ. ಹೀಗಿರುವಾಗ ದೇಶಕ್ಕೆ ಅತೀ ಹೆಚ್ಚು ಆದಾಯ ತಂದುಕೊಂಡುವ ರೈಲು ಯಾವುದು ಗೊತ್ತೇ?
ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್ ಮೊದಲಾದ ರೈಲುಗಳು, ಮೇಲ್ ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ವಿಶಾಲವಾದ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ. ರೈಲಿನ ಸೀಟುಗಳಿಗೆ ಪ್ರತಿ ನಿತ್ಯ ಇರುವ ಬೇಡಿಕೆಯನ್ನು ಗಮನಿಸಿದರೆ ಯಾವ ರೈಲು ದೇಶಕ್ಕೆ ಹೆಚ್ಚು ಆದಾಯ ತಂದುಕೊಡಬಹುದು ಎನ್ನುವ ಪ್ರಶ್ನೆ ಕಾಡುವುದು ಸಹಜ.
ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಅಗ್ರಸ್ಥಾನ
ಭಾರತೀಯ ರೈಲ್ವೇಗೆ ಹೆಚ್ಚು ಲಾಭದಾಯಕವಾಗಿರುವ ರೈಲುಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅಥವಾ ಶತಾಬ್ದಿ ಎಕ್ಸ್‌ಪ್ರೆಸ್ ಮೊದಲ ಸ್ಥಾನದಲ್ಲಿ ಇಲ್ಲ. ರಾಜಧಾನಿ ರೈಲುಗಳಿಂದ ಉತ್ಪತ್ತಿಯಾಗುವ ಆದಾಯವು ಅಗ್ರಸ್ಥಾನದಲ್ಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಗಳಿಕೆಯ ವಿಷಯದಲ್ಲಿ ಅಗ್ರ ಸ್ಥಾನ ಪಡೆದಿದೆ.
ರೈಲು ಸಂಖ್ಯೆ 22692 ಹಜರತ್ ನಿಜಾಮುದ್ದೀನ್‌ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ (ಕೆಎಸ್‌ಆರ್) ಬೆಂಗಳೂರಿಗೆ ಪ್ರಯಾಣಿಸುವ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ದೇಶಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ರೈಲಾಗಿದೆ. 2022- 23 ರ ಆರ್ಥಿಕ ವರ್ಷದಲ್ಲಿ ಈ ರೈಲು 5,09,510 ಪ್ರಯಾಣಿಕರನ್ನು ಸಾಗಿಸಿತು ಮತ್ತು ರೈಲ್ವೇಗೆ ಅಂದಾಜು 1,76,06,66,339 ರೂ. ಆದಾಯವನ್ನು ತಂದುಕೊಟ್ಟಿತು.
ದ್ವಿತೀಯ ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್
ಭಾರತೀಯ ರೈಲ್ವೇಗೆ ಎರಡನೇ ಅತ್ಯಂತ ಹೆಚ್ಚು ಆದಾಯ ತಂದುಕೊಡುವ ರೈಲು ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್ ಆಗಿದೆ. ಇದು ಪಶ್ಚಿಮ ಬಂಗಾಳದ ಕೋಲ್ಕತ್ತಾವನ್ನು ರಾಷ್ಟ್ರ ರಾಜಧಾನಿ ನವದೆಹಲಿಗೆ ಸಂಪರ್ಕಿಸುತ್ತದೆ. ರೈಲು ಸಂಖ್ಯೆ 12314 ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್ 2022-23 ರ ಆರ್ಥಿಕ ವರ್ಷದಲ್ಲಿ 5,09,164 ಪ್ರಯಾಣಿಕರನ್ನು ಸಾಗಿಸಿದೆ. ಅಂದಾಜು 1,28,81,69,274 ರೂ. ಆದಾಯವನ್ನು ತಂದುಕೊಟ್ಟಿದೆ.
One Nation One Election: ಒಂದು ದೇಶ ಒಂದು ಚುನಾವಣೆ ಅಪ್ರಾಯೋಗಿಕ ನೀತಿ ಎಂದು ಖರ್ಗೆ ಟೀಕೆ; ಬಿಜೆಪಿ ತಿರುಗೇಟು
ತೃತೀಯ ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್
ಮೂರನೆಯದು ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್. ನವದೆಹಲಿ ಮತ್ತು ದಿಬ್ರುಗಢ್ ನಡುವೆ ಕಾರ್ಯನಿರ್ವಹಿಸುವ ಈ ರೈಲು ಕಳೆದ ವರ್ಷದಲ್ಲಿ 4,74,605 ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ. ಅಂದಾಜು 1,26,29,09,697 ರೂ. ಆದಾಯ ತಂದುಕೊಟ್ಟಿದೆ.