-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅವಾರ್ಡ್ ಸಮಾರಂಭವೊಂದರಲ್ಲಿ ಉದ್ಯಮಿ ಇಶಾ ಅಂಬಾನಿ (Isha Ambani Costly Dress) ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೇ, ಫ್ಯಾಷನ್ ಪ್ರಿಯರ ಗಮನಸೆಳೆದರು. ಅರರೆ ಇದರಲ್ಲೇನು ವಿಶೇಷ? ಎಂದು ಯೋಚಿಸುತ್ತಿದ್ದೀರಾ! ವಿಶೇಷವಿದೆ. ಎಂದಿನಂತೆ ಅವರು ಧರಿಸಿದ್ದ, ಔಟ್‌ಫಿಟ್ ಬೆಲೆ ಕೇಳಿದರೆ ನೀವೂ ಕ್ಷಣ ಕಾಲ ದಂಗಾಗುತ್ತೀರಾ! ಹೌದು, ಅಂಬಾನಿ ಕುಟುಂಬದ ಕುಡಿ ಎಂದ ಮೇಲೆ ಕೇಳಬೇಕೆ! ಅವರು ಧರಿಸುವ ಔಟ್‌ಫಿಟ್ ಲಕ್ಷಗಟ್ಟಲೆ ರೂ. ಬೆಲೆ ಬಾಳುವುದು ಗ್ಯಾರಂಟಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈ ಕುರಿತಂತೆ ಫ್ಯಾಷನ್ ವಿಶ್ಲೇಷಕರಾದ ರಾಣಾ ಒಂದಿಷ್ಟು ವಿವರ ನೀಡಿದ್ದಾರೆ.
ದುಬಾರಿ ಗ್ಲಾಮರಸ್ ಲುಕ್
ಅಂದಹಾಗೆ, ನಿಶಾ ಅಂಬಾನಿ ಧರಿಸಿದ್ದು, ಇಂಟರ್‌ನ್ಯಾಷನಲ್ ಹೈ ಫ್ಯಾಷನ್ ಬ್ರಾಂಡ್ ಶಾಪೊರಾಲಿಯ ಲಿಮಿಟೆಡ್ ಎಡಿಷನ್‌ನ ಔಟ್‌ಫಿಟ್ಸ್. ಬಿಜುಕ್ಸ್ ಜಿಲೆ, ಅಂದರೇ, ವಿಶೇಷವಾದ ಜ್ಯುವೆಲ್ ಬಟನ್ ಸ್ಲಿವ್‌ಲೆಸ್ ವೀ ನೆಕ್ ಟಾಪ್. ಇದರ ಬೆಲೆ ಸರಿ ಸುಮಾರು 5 ಲಕ್ಷ ರೂ.ಗಳು. ಇನ್ನು, ಇದರೊಂದಿಗೆ ಧರಿಸಿದ ಜ್ಯುವೆಲ್ ಪಿಯರ್ಸೆಡ್ ಸ್ಟೇಟ್‌ಮೆಂಟ್ ಸ್ಕರ್ಟ್ ಬೆಲೆ 4,11,000 ರೂ.ಗಳದ್ದು ಎನ್ನಲಾಗಿದೆ.
ಹಾಲಿವುಡ್ ಸೆಲೆಬ್ರೆಟಿ ಲುಕ್
ನಿಶಾ ಅಂಬಾನಿ ತಮ್ಮ ಉದ್ಯಮಕ್ಕೆ ಸಂಬಂಧಿಸಿದ ಆವಾರ್ಡ್ ಸಮಾರಂಭದಲ್ಲಿ ಕಂಪ್ಲೀಟ್ ಎಲ್ಲರಿಗಿಂತ ಅಂದವಾಗಿ ಹಾಗೂ ವಿಭಿನ್ನವಾಗಿ ಅದರಲ್ಲೂ ಗ್ಲಾಮರಸ್ ಆಗಿ ಹಾಲಿವುಡ್ ಸೆಲೆಬ್ರೆಟಿಯಂತೆ ಕಾಣಿಸಲು ಈ ಔಟ್‌ಫಿಟ್ ಚೂಸ್ ಮಾಡಿದ್ದಾರೆ. ಇದನ್ನು, ಖ್ಯಾತ ಸ್ಟೈಲಿಸ್ಟ್ ಅನೈತಾ ಶ್ರಾಫ್, ಸ್ಟೈಲಿಂಗ್ ಮಾಡಿದ್ದಾರೆ. ಈ ಹಿಂದೆ ಮನೆ ಮದುವೆಯಲ್ಲಿ ಕಂಪ್ಲೀಟ್ ಎಥ್ನಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ, ಇಶಾ ಅವರಿಗೆ ಈ ಬಾರಿ ಡಿಫರೆಂಟ್ ಇಮೇಜ್ ಮೇಕೋವರ್ ಮಾಡಿ ಯಶಸ್ವಿಯೂ ಆಗಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇನ್ನು ಇಶಾ ಅಂಬಾನಿ ಕೂಡ ಫ್ಯಾಷನ್ ಫ್ರೀಕ್! ಅವರ ಈ ಹೊಸ ಇಮೇಜ್ ಮೇಕೋವರ್, ಅವರ ಪ್ರೊಫೆಷನಲ್ ಲುಕ್‌ಗೆ ಪರ್ಫೆಕ್ಟ್ ಮ್ಯಾಚ್ ಆಗಿದೆ. ಅಲ್ಲದೇ, ಇದೀಗ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರನ್ನೂ ಕೂಡ ಸೆಳೆದಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಅಬುಜಾನಿ.
ಈ ಸುದ್ದಿಯನ್ನೂ ಓದಿ | Stars Festive Season Fashion: ಫೆಸ್ಟಿವ್ ಸೀಸನ್ ಟ್ರೆಂಡ್ ಲಿಸ್ಟ್‌ಗೆ ಸೇರಿದ ಬಾಲಿವುಡ್ ತಾರೆಯರ ಕರ್ವಾಚೌತ್ ಡ್ರೆಸ್!
ಸದ್ಯದಲ್ಲೆ ಮಾರುಕಟ್ಟೆಗೆ ಇಶಾ ಔಟ್‌ಫಿಟ್ ಕಾಪಿಗಳು
ಕಳೆದ ಬಾರಿ ಮದುವೆ ಮುಗಿಯುವುದರೊಳಗೆ ಅಂದು ಅಂಬಾನಿ ಫ್ಯಾಮಿಲಿಯವರು ಧರಿಸಿದ್ದ, ಔಟ್‌ಫಿಟ್‌ಗಳ ಕೈಗೆಟಕುವ ಬೆಲೆಯಲ್ಲಿ, ಸೇಮ್ ಟು ಸೇಮ್ ರಿಪ್ಲಿಕಾ ಆಗಿ ಮಾರುಕಟ್ಟೆಗೆ ಕಾಲಿಟ್ಟಿದ್ದವು. ಇದೀಗ ಇಶಾ ಧರಿಸಿರುವ ಔಟ್‌ಫಿಟ್ ಕೂಡ ಲಗ್ಗೆ ಇಡುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟಾಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)