Thursday, 12th December 2024

ದೇಶ ಹಾಗು ರಾಜ್ಯದ ಉನ್ನತ ಹುದ್ದೆಯಲ್ಲಿ ಕನ್ನಡಿಗರನ್ನು ಹೆಚ್ಚಿಸುವುದೇ ಇನ್ಸೈಟ್ಸ್‌ ಗುರಿ: ವಿನಯ್‌ಕುಮಾರ್‌ ಜಿ.ಬಿ

ಐಸಿರಿ ಕನ್ನಡ ರಾಜ್ಯೋತ್ಸವ

ದೇಶದ ಹೆಸರಾಂತ ಉನ್ನತ ಪರೀಕ್ಷಾ ತರಬೇತಿ ಸಂಸ್ಥೆ ಇನ್ಸೈಟ್ಸ್‌ ಐಎಎಸ್‌ ಕೇಂದ್ರದಿಂದ ಅದ್ದೂರಿ ಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸ ಲಾಯಿತು. ನಗರದ ವಿವಿಧ ತರಬೇತಿ ಕೇಂದ್ರಗಳಿಂದ ಬಂದಿದ್ದ ವಿದ್ಯಾರ್ಥಿಗಳು 500 ಮೀಟರ್‌ ಉದ್ದದ  ಕನ್ನಡದ ಬಾವುಟವನ್ನು ಗೌರವದಿಂದ ಪ್ರದರ್ಶಿಸಿ ಕನ್ನಡಾಂಬೆಯ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ಸಾಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಐಎಎಸ್‌ ತರಬೇತಿ ಕೇಂದ್ರದ ವಿಧ್ಯಾರ್ಥಿಗಳು ಹುಲಿಕುಣಿತ, ಚಿತ್ರಗೀತೆ ,ಜಾನಪದ ಗೀತೆ, ಭಾವಗೀತೆ ಯನ್ನು ಹಾಡುವ  ಮೂಲಕ ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು. ಮುಖ್ಯ ಅತಿಥಿಯಾಗಿ ಭಾಗ ವಹಿಸಿದ್ದ ಸ್ಥಳಿಯ ಶಾಸಕರಾದ ಎಂ ಕೃಷ್ಣಪ್ಪ ಅವರು ಯುಪಿಎಸ್ಸಿ ತರಬೇತಿ ಪಡೆಯಲು ದೇಶದ ವಿವಿಧ ನಗರಗಳಿಗೆ ತೆರಳುತ್ತಿದ್ದ ವಿಧ್ಯಾರ್ಥಿಗಳು ಈಗ ಉನ್ನತ ದರ್ಜೆಯಲ್ಲಿ ನಗರದಲ್ಲೇ ತರಬೇತಿ ಪಡೆಯುವಂತೆ ಇನ್ಸೈಟ್ಸ್‌ ಮಾಡಿದೆ ಎಂದು ತಿಳಿಸಿದರು ಇಲ್ಲಿಂದ ತರಬೇತಿ ಪಡೆಯುವವರು ಕನ್ನಡಾಭಿ ಮಾನವನ್ನು ದೇಶದಲ್ಲೇಲ್ಲಾ ಹಂಚಬೇಕು ಎಂದು ತಿಳಿಸಿದರು.

ಇನ್ನು ಇನ್ಸೈಟ್ಸ್‌ ತರಬೇತಿ ಸಂಸ್ಥೆ ಸಂಸ್ಥಾಪಕರಾದ ವಿನಯ್‌ ಕುಮಾರ್‌ ಜಿ ಬಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ದೇಶ ಹಾಗು ರಾಜ್ಯ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕನ್ನಡಿಗರ ಸಂಖ್ಯೆ ಅತೀ ವಿರಳವಾಗಿದೆ ಕಾರಣ ನಮ್ಮಲ್ಲಿ ತರಬೇತಿ ಪಡೆಯುವವರ ಸಂಖ್ಯೆ ಹಾಗು ಅವಕಾಶ ಕಡಿಮೆಯಾಗಿತ್ತು . ಇದೇ ಕಾರಣದಿಂದ ಹಾಗು ಉನ್ನತ ಹುದ್ದೆಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಬೇಕು ಎಂಬ ಮಹದಾಸೆಯಿಂದ ಈ ಸಂಸ್ಥೆಯನ್ನು ಹುಟ್ಟುಹಾಕ ಲಾಯಿತು . ಇದರಿಂದ ಈಗಾಗಲೇ ಸಾವಿರಾರು ಮಂದಿ ದೇಶ,ವಿದೇಶ ಹಾಗು ರಾಜ್ಯ ಸರ್ಕಾರಗಳ ವಿವಿಧ ಹುದ್ದೆಗಳಲ್ಲಿ ಕೆಲಸಮಾಡುವಂತಾಗಿದೆ . ಇನ್ನು ಈ ಸಂಖ್ಯೆ ಹೆಚ್ಚಾಗಲಿ ಎನ್ನುವುದೇ ಈ ಸಂಸ್ಥೆಯ ಹಾಗು ನನ್ನ ಯೋಜನೆ ಎಂದು ತಿಳಿಸಿದರು.