Friday, 22nd November 2024

30 ಸರ್ಕಾರಿ ಐಟಿಐ ಸರ್ಕಾರಿ ಕಾಲೇಜು ಮೇಲ್ದರ್ಜೆಗೆ

ಬೆಂಗಳೂರು : 30 ಸರ್ಕಾರಿ ಐಟಿಐ ಸರ್ಕಾರಿ ಕಾಲೇಜು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಮೊದಲ ಚೊಚ್ಚಲ ಬಜೆಟ್ ನಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಜನರೆಗೆ ತಾಲೂಕು ಮಟ್ಟದಲ್ಲಿ ಹೃದಯ ಚಿಕಿತ್ಸೆ ನೀಡಲಾಗುವುದು. ರಾಜ್ಯದಲ್ಲಿ 7 ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ,

ಕೃಷಿಗೆ 33,700 ಕೋಟಿ ರೂ. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 68,478 ಕೋಟಿ ರೂ. ಬೆಂಗಳೂರು ಅಭಿವೃದ್ಧಿಗೆ8,409 ಕೋಟಿ ರೂ. ಮೀಸಲಿಡ ಲಾಗಿದೆ. ರಾಜ್ಯದಲ್ಲಿ ರೈತ ಶಕ್ತಿ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಈ ಯೋಜನೆ ಮೂಲಕ ರೈತರಿಗೆ ಯಂತ್ರೋಪಕರಣ ಉಪಯೋಗಕ್ಕೆ ಸಹಾಯಧನ, 250 ರೂ. ಡೀಸೆಲ್ ಸಹಾಯಧನ ನೀಡಲಾಗುವುದು. 500 ಕೋಟಿ ರೂ. ಯೋಜನೆಗೆ ಒದಗಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದಲ್ಲಿ ವಿನೂತನ ಮಾದರಿಯ 7 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು, ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಹಾಗೂ ಬಾಗಲಕೋಟೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.