Monday, 18th November 2024

Jai Kisan Movie: ರೈತ ಬದುಕಿನ ಚಿತ್ರಣದ ʼಜೈ ಕಿಸಾನ್ʼ ಚಿತ್ರ ನ.7ರಂದು ತೆರೆಗೆ

Jai Kisan Movie

ಬೆಂಗಳೂರು: ಮಹಾರಾಷ್ಟ್ರ ಮೂಲದ ರವಿ ನಾಗಪುರೆ ಅವರು ತಾವೇ ಕಥೆ ಬರೆದು ನಿರ್ಮಿಸಿರುವ ಚಿತ್ರ “ಜೈ ಕಿಸಾನ್” (Jai Kisan Movie). ರೈತನ ಬದುಕಿನ ಕುರಿತಾದ ಈ ಚಿತ್ರ ಈಗಾಗಲೇ ಮರಾಠಿಯಲ್ಲಿ ಬಿಡುಗಡೆಯಾಗಿದ್ದು, ಕನ್ನಡದಲ್ಲಿ ನವೆಂಬರ್ 7ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ. ವಿಜಾಪುರ ಮೂಲದ ಮುಂಬೈ ನಿವಾಸಿ ನಾಗಾರಾಜ್ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ರವಿ ನಾಗಪುರೆ ಅವರು ರೈತನ‌ ಬಗ್ಗೆ ಬರೆದಿರುವ ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ಮರಾಠಿಯಲ್ಲಿ ಕಳೆದ ಆಗಸ್ಟ್‌ನಲ್ಲೇ ಈ ಚಿತ್ರ ಬಿಡುಗಡೆಯಾಗಿದೆ. ಉತ್ತಮ ಕಂಟೆಂಟ್‌ವುಳ್ಳ ಈ ಚಿತ್ರವನ್ನು ಕನ್ನಡದಲ್ಲೂ ಬಿಡುಗಡೆ ಮಾಡಬೇಕೆನಿಸಿತು. ಕನ್ನಡದಲ್ಲಿ ಈ ಚಿತ್ರ ನವೆಂಬರ್ 7 ರಂದು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.

ನಾನು ಒಬ್ಬ ರೈತನ ಮಗ.‌ ರೈತನ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ರೈತ ಹಾಗೂ ಆತನ ಕುಟುಂಬ ಯಾರಿಗೂ ಕಡಿಮೆ ಇಲ್ಲದಂತೆ ಬೆಳೆಯಬೇಕು.‌ ರೈತ ಎಂದರೆ ಹೆಣ್ಣು ಕೊಡುವುದಿಲ್ಲ ಎಂಬ ಮಾತಿದೆ. ಹಾಗಾಗಬಾರದು. ತಾವೇ ಹುಡುಕಿಕೊಂಡು ಬಂದು ರೈತನಿಗೆ ಹೆಣ್ಣು ಕೊಡಬೇಕು. ಓದಿರುವವರು ಕೃಷಿ ಮಾಡಲು ಹಿಂಜರಿಯಬಾರದು. ಆಧುನಿಕ ಕೃಷಿಯ ಮೂಲಕ ಸಾಕಷ್ಟು ಸಂಪಾದನೆ ಮಾಡುಬಹುದು. ನನ್ನ ಉದ್ಧೇಶವೂ ಅದೇ ಇದೆ. ಅದನ್ನೇ‌ ಚಿತ್ರದ ಕಥೆಯಲ್ಲೂ ಹೇಳಿದ್ದೇನೆ.‌‌ ನಮ್ಮ‌ ಚಿತ್ರದ ನಾಯಕ ಕೂಡ ವಿದ್ಯಾವಂತ.‌ ಅಪ್ಪನಿಗೆ ಮಗ ಕೃಷಿ ಕೆಲಸ ಮಾಡುವುದು ಇಷ್ಟವಿರುವುದಿಲ್ಲ. ಆದರೆ ಸನ್ನಿವೇಶ ಆತನನ್ನು ರೈತನನ್ನಾಗಿ ಮಾಡುತ್ತದೆ. ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿರುವುದು ಸಂತೋಷವಾಗಿದೆ ಎಂದು ಕಥೆಗಾರ ಹಾಗೂ ನಿರ್ಮಾಪಕ ರವಿ ನಾಗಪುರೆ ತಿಳಿಸಿದರು.

ರವಿ ನಾಗಪುರೆ ಅವರು ಬರೆದಿರುವ ಕಥೆ ತುಂಬಾ ಚೆನ್ನಾಗಿದೆ. ‌ನಾನು ನಿರ್ದೇಶನ ಮಾಡಿದ್ದೇನೆ. ಜನುಮೇಜಯ್ ತೆಲಂಗ್ ಹಾಗೂ ತನ್ವಿ ಸಾವಂತ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ ಎಂದರು ನಿರ್ದೇಶಕ ವಿಕಾಸ್ ವಿಲಾಸ್ ಮಿಸಾಲ್.

ಈ ಸುದ್ದಿಯನ್ನೂ ಓದಿ | World Food Day 2024: ಇಂದು ವಿಶ್ವ ಆಹಾರ ದಿನ; ಸುಸ್ಥಿರ ಪದ್ಧತಿಗಳಿಂದ ಮಾತ್ರವೇ ನಮಗೆ ಉಳಿವು!

ವಿದ್ಯಾವಂತನಾದ ನಾನು ಅಣ್ಣನ ಆಸೆಯನ್ನು ಪೂರ್ಣ ಮಾಡಲು‌ ರೈತಾನಾಗುತ್ತೇನೆ. ಅಧುನಿಕ ಕೃಷಿಯ ಮೂಲಕ‌ ಬೇರೆಯವರಿಗೂ‌‌ ಆದರ್ಶವಾಗುವ ಪಾತ್ರ ‌ನನ್ನದು ಎನ್ನುತ್ತಾರೆ ನಾಯಕ‌ ಜನುಮೇಜಯ್. ಚಿತ್ರದಲ್ಲಿ‌ ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ತನ್ವಿ ಸಾವಂತ್ ‌ಹೇಳಿದರು.