Sunday, 15th December 2024

ಜನಸೇವಕ ಸಮಾವೇಶದ ಎರಡನೇ ದಿನ: ಪುಷ್ಪಾರ್ಚನೆ ಮುಖೇನ ಚಾಲನೆ

ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ಜನಸೇವಕ ಸಮಾವೇಶ ಎರಡನೇ ದಿನದ ಮೂರನೇ ಕಾರ್ಯಕ್ರಮದಲ್ಲಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮುಖೇನ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಚಿವರಾದ ಬಸವರಾಜ್ ಬೊಮ್ಮಾಯಿ, ಬಿ. ಶ್ರೀರಾಮುಲು, ಸಂಸದರಾದ ಶಿವಕುಮಾರ್ ಉದಾಸಿ, ಶಾಸಕರಾದ ತಿಪ್ಪಾರೆಡ್ಡಿ, ಎಂ ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ಮಹಿಳಾ ಮೋರ್ಚಾ ರಾಜ್ಯ ರ ಅಧ್ಯಕ್ಷರಾದ ಗೀತಾ ವಿವೇಕಾನಂದ, ಮುಖಂಡರಾದ ಲಿಂಗಮೂರ್ತಿ, ಸುರೇಶ್, ಕೆ. ಎಸ್ ನವೀನ್, ಸಿದ್ದೇಶ್ ಯಾದವ್, ಬದ್ರಿನಾಥ್, ನರೇಂದ್ರ ಮುಂತಾದವರು ಉಪಸ್ಥಿತರಿದ್ದರು.