Thursday, 12th December 2024

ವೈಭವದಿಂದ ಜರುಗಿದ ಕುಂಟೋಜಿ ಬಸವೇಶ್ವರ ಜಾತ್ರಾ ಮಹೋತ್ಸವ

ಮುದ್ದೇಬಿಹಾಳ: ಪ್ರತಿ ವರ್ಷ ವಿಜೃಂಭನೆಯಿ0ದ ಐದು ದಿನಗಳವರೆಗೆ ಜರುಗುವ ಮುದ್ದೇಬಿಹಾಳ ತಾಲೂಕಿನ ಸಮಸ್ತ ಜನತೆ ಭಕ್ತಿಯಿಂದ ಪೂಜಿಸುವ ಬಸವೇಶ್ವರ ಜಾತ್ರಾ ಮಹೋತ್ಸವವು ವೈಭವದಿಂದ ಜರುಗಿತು.

ಶ್ರಾವಣ ಮಾಸದಲ್ಲಿ ಒಂದು ತಿಂಗಳವರೆಗೆ ಎಲ್ಲರು ಭಕ್ತಿಯಿಂದ ಪೂಜೆ ನಡೆಸಿ ಪ್ರತಿ ಸೋಮ ವಾರ ಬಸವೇಶ್ವರ ದೇವಸ್ಥಾನಕ್ಕೆ ಬೆಟಿ ನೀಡುವ ಜನತೆ ಶ್ರಾವಣ ಮಾಸದ ಕೋನೆಯ ಸೋಮವಾರ ಪ್ರತಿ ವರ್ಷ ಐದು ದಿನಗಳವರೆಗೆ ಜಾತ್ರೆ ನಡೆಸುವದು ತಲ ತಲಾಂತರದಿ0ದ ನಡೆದು ಬಂದಿದೆ.

ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದ ಬಸವೇಶ್ವರ ಜಾತ್ರಾ ಮಹೋತ್ಸವ ದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪಾಲ್ಗೊಂಡು ಬಸವೇಶ್ವರರ ದರ್ಶನ ಪಡೆದರು. ಐದು ದಿನಗಳ ಜಾತ್ರೆಯಲ್ಲಿ ಮೋದಲ ದಿನ ಗ್ರಾಮದ ಪ್ರಮುಖ ಬಿದಿಗಳಲ್ಲಿ ಕಳಸ ಮೆರವಣಿಗೆ ಮಾಡಿದರು. ಕುಂಟೋಜಿ ಗ್ರಾಮದ ಕಾಟಿ ಮನೆತನದವರು ಕಳಸ ಹೋರು ವದು ಸಂಪ್ರದಾಯವಿದ್ದು ಅದರಂತೆ ಕಳಸ ಮೆರವಣಿಗೆ ನಡೆಸ ಲಾಯಿತು.

ರಾತ್ರಿ ಹನ್ನೋಂದು ಘಂಟೆಗೆ ಕಳಸ ಬಸವೇಶ್ವರರ ಶಿಖರದ ಮೇಲೆ ಜೋಡಿ ಕಳಸಗಳು ಕುಳಿತವು. ಕಳಸ ಕುಡುವವರೆಗು ಗ್ರಾಮದ ಮಹಿಳೆಯರು, ಯುವಕರು ಉಪವಾಸ ಆಚರಣೆ ಮಾಡು ತ್ತಾರೆ. ಕಳಸ ಕುಳಿತ ಬಳಿಕವೆ ಪ್ರಸಾದ ಸ್ವೀಕರಿಸುತ್ತಾರೆ.

ಜಾತ್ರೆಯ ಎರಡನೆ ದಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು ಮೆರವಣಿಗೆಯಲ್ಲಿ ಕೋಲಾಟ, ಶಾಲಾ ಮಕ್ಕಳಿಂದ ಲೆಜಿಂ ಕುಣಿತ ಸೇರಿದಂತೆ ವಿವಿಧ ಮನರಂಜನೆಗಳು ಜರುಗಿದವು.

ಮೂರನೆ ದಿನ ಕಬಡ್ಡಿ ಪಂದ್ಯಾವಳಿಗಳು ನಡೆದು ಎತ್ತಿನ ಗಾಡಿ ರೆಸ್ ನಡೆಯುತ್ತದೆ. ಸಾಯಂ ಕಾಲ ಇಂಚರ ಮೆಲೋಡಿಸ್ ತಂಡದವರಿ0ದ ರಸಮಂಜರಿ ಕಾರ್ಯಕ್ರಮ ನಡೆಯುವದು. ನಾಲ್ಕನೆ ದಿನ ಟ್ರಾö್ಯಕಟರ್ ರಿವರ್ಸ ಸ್ಪರ್ಧೆ,ತೆರಬಂಡಿ ಸ್ಪರ್ದೆ ಸೇರಿದಂತೆ ವಿವಿಧ ಕಾರ್ಯ ಕ್ರಮಗಳು ಜರುಗುವವು.

ಜಾತ್ರೆಯಲ್ಲಿ ತಾಲೂಕಿನ ಸರ್ವಜನಾಂಗದವರು ಪಾಲ್ಗೋಂಡಿದ್ದರು. ಕುಂಟೋಜಿ ಬಸವೇಶ್ವರನಿಗೆ ನಡೆದುಕೋಳ್ಳುವ ಭಕ್ತಾದಿ ಗಳು ಹೋರರಾಜ್ಯದಿಂದ ಕೂಡಾ ಆಗಮೀಸಿರುವದು ವಿಶೇಷವಾಗಿತ್ತು. ಪ್ರತಿವರ್ಷದಂತೆ ಈ ವರ್ಷವು ಕುಂಟೋಜಿ ಬಸವೇಶ್ವರ ಜಾತ್ರೆಯು ವಿಜೃಂಬನೆಯಿ0ದ ಜರುಗಿತು.