Sunday, 15th December 2024

ವಿಜೃಂಭಣೆಯಿಂದ ಜರುಗಿದ ’ಹಳ್ಳಿಹೊಸೂರು’ ಭೀರಲಿಂಗೇಶ್ವರ ಜಾತ್ರೆ

ಸಿರವಾರ: ಮುಂದಿನ ಮಳೆ, ಬೆಳೆ ಬಗ್ಗೆ ಕಾರ್ಣಿಕ ಹೇಳುವ ಮೂಲಕ ಐತಿಹಾಸಿಕ ಪ್ರಾಮುಖ್ಯತೆ ಪಡೆದ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹಳ್ಳಿಹೊಸೂರು ಗ್ರಾಮದ ಘನ ಗುರು ಭೀರಲಿಂಗೇಶ್ವರ ಜಾತ್ರೆ ಗುರುವಾರ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದ ಅರ್ಚಕರಾದ ಭೀರಪ್ಪ ಪೂಜಾರಿ ಬೆಳಗ್ಗೆ ”ಮುಂಗಾರಿಗೆ ತುರ್ತು ಹುಡಿ ಕಟ್ಯಾನು ಹಿಂಗಾರಿಗೆ ಮುತ್ತು ಹೊಳೆದಿತು
ಪಕ್ಷಿ ಕಲ ಕಲ ಮಾಡಿತು” ಎಂದು ಕಾರ್ಣಿಕ ನುಡಿದರು.