ಏ.6ರಂದು ವಿಧುರಾಶ್ವತ್ಥನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ
ಗೌರಿಬಿದನೂರು: ಪುರಾಣ ಪ್ರಸಿದ್ಧ ತಾಲೂಕಿನ ಉತ್ತರ ಪಿನಾಕಿನಿ ನದಿ ದಡದಲ್ಲಿಯ ವಿಧುರಾಶ್ವತ್ಥ ಕ್ಷೇತ್ರದ ಶ್ರೀ ವಿಧುರಾಶ್ವತ್ಥ ನಾರಾಯಣ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾ.31 ರಿಂದ ಏ.11ರವರೆಗೆ ನಡೆಯಲಿದ್ದು, ಏ.6ರಂದು ಬ್ರಹ್ಮರಥೋತ್ಸವ ನಡೆಯಲಿದೆ ಎಂದು ವಿಧುರಾ ಶ್ವತ್ಥ ನಾರಾಯಣಸ್ವಾಾಮಿ ದೇವಾಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಮರಿರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.31ರಂದು ಅಂಕುರಾರ್ಪಣಾ ಧ್ವಜಾರೋಹಣ, ಸಂಜೆ ಪುಷ್ಪ ಪೀಠೋತ್ಸವ, ಏ.1ಕ್ಕೆ ಸಿಂಹ ವಾಹನೋತ್ಸವ, 2ಕ್ಕೆ ಗಜಾ ವಾಹನೋತ್ಸವ, 3ಕ್ಕೆ ಹನುಮದ್ವಾಹನೋತ್ಸವ, 4ಕ್ಕೆ ಶೇಷವಾ ಹನೋತ್ಸವ, 5ಕ್ಕೆ ಎದುರುಗೊಳ್ಳೋತ್ಸವ, ಕಾಶಿ ಯಾತ್ರೋತ್ಸವ, ರಾತ್ರಿ ಕಲ್ಯಾಣೋತ್ಸವ, 6ರಂದು ಮಧ್ಯಾಹ್ನ 12.30ರಿಂದ 1 ಗಂಟೆಯೊಳಗೆ ಬ್ರಹ್ಮರಥೋತ್ಸವ ಜರುಗಲಿದೆ.
ನಂತರ ಬ್ರಾಹ್ಮಣ ಸಂತರ್ಪಣೆ, ಪಾನಕ ಪೂಜೆ, ಧೂಳೀ ಪಲ್ಲಕ್ಕಿ ಉತ್ಸವ ಜರುಗಲಿದೆ. 7ರಂದು ಉರಟಣೆ ಉತ್ಸವ, ರಾತ್ರಿ ಪಾರ್ವಟೋತ್ಸವ, 8ರಂದು ವಸಂತೋತ್ಸವ ಪಾನಕ ಪೂಜೆ, ದ್ವಾದಶರಾಧನೆ ಧ್ವಜಾರೋಹಣ, ಧವನೋತ್ಸವ, ಶಯನೋತ್ಸವ, 9ಕ್ಕೆೆ ಉಯ್ಯಾಲೋತ್ಸವ, ಪುಷ್ಪೋ ತ್ಸವ, 10ರಂದು ಗರುಡೋತ್ಸವ, 11ಕ್ಕೆೆ ಪ್ರಾಕಾರೋತ್ಸವ ನೆರವೇರಲಿದೆ ಎಂದು ದೇವಾಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಮರಿರಾಜು ಕೋರಿದ್ದಾರೆ.