-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ವಿನ್ಯಾಸದಲ್ಲಿ ವೈವಿಧ್ಯಮಯ ಹೂಪ್ ಇಯರಿಂಗ್‌ಗಳು (Jewel Fashion) ಈ ಋತುವಿನಲ್ಲಿ ಟ್ರೆಂಡಿಯಾಗಿವೆ. ಹೌದು, ನೋಡಲು ವೃತ್ತಾಕಾರವಾಗಿದ್ದ ಹೂಪ್ ಇಯರಿಂಗ್‌ಗಳು ಇದೀಗ ನಾನಾ ಶೈಲಿಯಲ್ಲಿ, ಮೆಟಿರೀಯಲ್‌ನಲ್ಲಿ ಬಿಡುಗಡೆಗೊಂಡಿವೆ. ಪ್ರೇಮಿಗಳ ಕಿವಿಗಳನ್ನು ಅಲಂಕರಿಸುತ್ತಿವೆ. ಬಿಗ್ ಸರ್ಕಲ್ ಹೂಪ್ ರಿಂಗ್, ಚಕ್ಕುಲಿಯಾಕಾರದ ಹೂಪ್ ರಿಂಗ್, ಒಂದರೊಳಗೆ ಮತ್ತೊಂದು ಸೇರಿಕೊಂಡಂತಿರುವ ಮರ್ಜ್ ಆಗಿರುವ ಹೂಪ್ ಇಯರಿಂಗ್, ಹಾಫ್ ಸರ್ಕಲ್ ಹೂಪ್ ಇಯರಿಂಗ್, ಹಾಫ್ ಹೂಪ್, ಟ್ವಿಸ್ಟೆಡ್, ಕ್ರಿಸ್ ಕ್ರಾಸ್, ಸ್ಟೋನ್‌ಸ್ಟಡೆಡ್, ಸಿಲ್ವರ್ ಕೋಟೆಡ್, ಪ್ಲಾಸ್ಟಿಕ್, ಫೈಬರ್, ಮೆಟಲ್ ಸ್ಟಡ್ಸ್ ಶೈಲಿಯವು ಹೆಚ್ಚು ಪ್ರಚಲಿತದಲ್ಲಿವೆ. ಅಲ್ಲದೇ, ಫಂಕಿ ಲುಕ್ ನೀಡುವ ಲೈಟ್‌ವೈಟ್ ಸಿಲಿಕಾನ್ ಹೂಪ್ ಇಯರಿಂಗ್ಸ್ ಕೂಡ ಬೇಡಿಕೆ ಪಡೆದುಕೊಂಡಿವೆ.
ಡಬಲ್ –ತ್ರಿಬಲ್ ಸ್ಟಡ್ಸ್ ವಿನ್ಯಾಸ
ಒಂದರ ಒಳಗೊಂದರಂತೆ ಇರುವ ಡಬ್ಬಲ್, ತ್ರಿಬಲ್ ಸ್ಟಡ್‌ನಂತೆ ಕಾಣುವ ಹೂಪ್ ನಾನಾ ಸೈಝ್‌ಗಳಲ್ಲಿ ಟ್ರೆಂಡಿಯಾಗಿವೆ. ಫ್ಯಾಷನ್ ಕ್ಷೇತ್ರದಲ್ಲಿರುವ ಮಾಡೆಲ್‌ಗಳು, ಪೇಜ್ 3 ಸೆಲೆಬ್ರೆಟಿಗಳ ಆಯ್ಕೆ ಇದಾಗಿವೆ. ಈ ಶೈಲಿಯ ಇಯರಿಂಗ್‌ಗಳು ಇಡೀ ಲುಕ್ ಅನ್ನು ಬದಲಿಸುತ್ತವೆ ಹಾಗೂ ನೋಡಲು ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುವ ಕಾರಣದಿಂದಾಗಿ ಧರಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಮಾಡೆಲ್ ರಿಚಾ ಹಾಗೂ ರೈನಾ.
ಬಣ್ಣ ಬಣ್ಣದ ಹೂಪ್ ರಿಂಗ್ಸ್
ನಾನಾ ಕಲರ್‌ನ ಹೂಪ್ ಕಿವಿಯ ರಿಂಗ್‌ಗಳು ಕಾಲೇಜು ಹುಡುಗಿಯರನ್ನು ಸೆಳೆದಿವೆ. ಇದಕ್ಕೆ ಕಾರಣ, ಧರಿಸುವ ಉಡುಪಿಗೆ ಮ್ಯಾಚ್ ಮಾಡಬಹುದು ಎಂಬುದು. ಮೆಟಲ್ ಹಾಗೂ ನಾನ್ ಮೆಟಲ್‌ನಲ್ಲಿಯೂ ಲಭ್ಯವಿರುವ ಇವು ಧರಿಸಿದಾಗ ನೋಡಲು ಯಂಗ್ ಲುಕ್ ನೀಡುತ್ತವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.
ಸೆಟ್ ಹೂಪ್ ಇಯರಿಂಗ್ಸ್
ಎಲ್ಲಾ ಡ್ರೆಸ್‌ಗಳಿಗೂ ಮ್ಯಾಚ್ ಆಗುವ ರೀತಿಯಲ್ಲಿ 7 ಕಲರ್ಸ್‌ನ ಹೂಪ್ ರಿಂಗ್‌ಗಳು ಕೂಡ ಇದೀಗ ದೊರೆಯುತ್ತಿವೆ. ಅಲ್ಲದೇ ಗೋಲ್ಡ್, ಪ್ಲಾಟಿನಂ ಅಥವಾ ಸಿಲ್ವರ್ ಶೇಡ್ ಇರುವಂತಹ ಶಿಮ್ಮರಿಂಗ್ ಡಿಸೈನ್‌ನಲ್ಲೂ ಸಹ ಇವು ಲಭ್ಯ ಎನ್ನುತ್ತಾರೆ ಮಾರಾಟಗಾರರು.
ಪ್ಯಾಟರ್ನ್ ಮತ್ತು ಡಿಸೈನ್
ಯಾವುದೇ ಫ್ಯಾಷನಬಲ್ ಹೂಪ್ ಇಯರಿಂಗ್ ಕೊಳ್ಳುವಾಗ ಅದರಲ್ಲಿ ಪ್ಯಾಟರ್ನ್ ಮತ್ತು ಡಿಸೈನ್ ಬಗ್ಗೆ ಗಮನ ನೀಡಿ. ಹೂಪ್‌ನೊಳಗೆ ಫ್ಲಾಗ್, ರೋಸ್, ಹಾರ್ಟ್, ಸ್ಟಾರ್, ಲೆಟರ್ಸ್ ಇತ್ಯಾದಿ ಇರುವಂತಹ ಸ್ಟೇಟ್‌ಮೆಂಟ್ ಹೂಪ್ ಡಿಸೈನ್‌ಗಳು ಲಭ್ಯ ಎನ್ನುತ್ತಾರೆ ಎಕ್ಸ್‌ಪರ್ಟ್‌ಗಳು.
ಈ ಸುದ್ದಿಯನ್ನೂ ಓದಿ | Shirt Fashion: ಟಾಮ್ ಬಾಯ್ ಇಮೇಜ್‌ನಿಂದ ಗ್ಲಾಮರಸ್ ಕೆಟಗರಿಗೆ ಸೇರಿದ ಶರ್ಟ್ ಫ್ಯಾಷನ್!
ಹೂಪ್ ರಿಂಗ್ ಪ್ರಿಯರಿಗಾಗಿ ಸಿಂಪಲ್ ಟಿಪ್ಸ್
ಮಾಡರ್ನ್ ಔಟ್‌ಫಿಟ್‌ಗಳಿಗೆ ಇವು ಬೆಸ್ಟ್ ಆಯ್ಕೆ.
ಕ್ಯಾಶುವಲ್ ವೀಕೆಂಡ್ ಪಾರ್ಟಿಗೆ ಫಂಕಿ ಲುಕ್ ನೀಡುತ್ತವೆ.
ಸಾಂಪ್ರದಾಯಿಕ ಡ್ರೆಸ್‌ಗಳಿಗೆ ಫಂಕಿ ಹೂಪ್ ಇಯರಿಂಗ್ ಸೂಕ್ತವಲ್ಲ.
ಸೀದಾ ಸದಾ ಪ್ರಿಂಟ್ಸ್‌ನ ಸೀರೆಗೆ ಇವನ್ನು ಧರಿಸಬಹುದು.
ಹೂಪ್ ಇಯರಿಂಗ್‌ಗಳು ಯಂಗ್ ಲುಕ್ ನೀಡುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)