-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ಆಕಾರ, ಊಹೆಗೂ ಮೀರಿದ ಭಿನ್ನ-ವಿಭಿನ್ನ ಡಿಸೈನ್ಸ್ ಹೊಂದಿರುವಂತಹ ಅಸೆಮ್ಮಿಟ್ರಿಕಲ್ ಜ್ಯುವೆಲರಿ ಫ್ಯಾಷನ್ (Jewel Fashion) ಇತ್ತೀಚೆಗೆ ಪಾಪುಲರ್ ಆಗಿದೆ. ಇದಕ್ಕೆ ಪ್ರಮುಖ ಕಾರಣ, ಇವುಗಳ ಯೂನಿಕ್ ಡಿಸೈನ್ಸ್ ! ಒಂದಕ್ಕಿಂತ ಒಂದು ಭಿನ್ನ. ಚಿತ್ರ-ವಿಚಿತ್ರ ವಿನ್ಯಾಸ ಇವು ಹೊಂದಿರುತ್ತವೆ. ಉದಾಹರಣೆಗೆ, ನೆಕ್ಲೇಸ್‌ಗೆ ಲೆಯರ್ ಲುಕ್ ಇದ್ದರೂ, ಯೂನಿಫಾರ್ಮಿಟಿ ಇರುವುದಿಲ್ಲ! ಒಂದೆಡೆ ಉದ್ದುದ್ದ ಕಂಡರೆ, ಮತ್ತೊಂದೆಡೆ ಗಿಡ್ಡನಾಗಿ ವಿನ್ಯಾಸಗೊಂಡಿರುತ್ತವೆ. ನಾನಾ ಮೆಟಲ್‌ನಲ್ಲಿ ವಿನ್ಯಾಸಗೊಂಡಿರುತ್ತವೆ. ಇನ್ನು, ಕಡ, ಬ್ಯಾಂಗಲ್, ಬ್ರೇಸ್‌ಲೇಟ್, ಇಯರಿಂಗ್ಸ್ ಎಲ್ಲವೂ ಡಿಫರೆಂಟ್ ಡಿಸೈನ್ಸ್ (Different Designs) ಹೊಂದಿರುತ್ತವೆ. ಕೆಲವು ಕಂಟೆಪರರಿ ವಿನ್ಯಾಸ ಹೊಂದಿದ್ದರೆ, ಇನ್ನು, ಕೆಲವು ಫಂಕಿ ವಿನ್ಯಾಸ ಹೊಂದಿರುತ್ತವೆ. ನೋಡಲು ಕೆಲವು ಜಂಕ್ ಜ್ಯುವೆಲರಿಯಂತೆಯೂ ಕಾಣಿಸುತ್ತವೆ.
ಜ್ಯುವೆಲ್ ಡಿಸೈನರ್‌ಗಳು ಹೇಳುವುದೇನು?
ಟ್ರೆಡಿಷನಲ್ ಡಿಸೈನ್‌ಗಿಂತ ಕೊಂಚ ವಿಭಿನ್ನವಾಗಿರುವ ಇವುಗಳ ವಿನ್ಯಾಸ ಕೆಲವೊಮ್ಮೆ ಊಹೆಗೆ ನಿಲುಕುವುದಿಲ್ಲ. ಒಂದಕ್ಕಿಂತ ಮತ್ತೊಂದಕ್ಕೆ ಸಾಕಷ್ಟು ವ್ಯತ್ಯಾಸವಿರುತ್ತದೆ. ನೋಡಲು ತಕ್ಷಣಕ್ಕೆ ಜಂಕ್ ಜುವೆಲರಿ ಡಿಸೈನ್ ಎಂದೆನಿಸಿದರೂ ಇವು ಅವಲ್ಲಎನ್ನುತ್ತಾರೆ ಜುವೆಲ್ ಡಿಸೈನರ್ ರಾಶಿ.
ಅವರ ಪ್ರಕಾರ, ಬಹುತೇಕ ಅಸೆಮ್ಮಿಟ್ರಿಕಲ್ ನೆಕ್ಲೆಸ್‌ಗಳು ಹಾಗೂ ಇಯರಿಂಗ್‌ಗಳು ಲೇಯರ್ ಲುಕ್, ಮೆಸ್ಸಿ ಡಿಸೈನ್ಸ್, ಮಿಕ್ಸ್ ಮೆಟೀರಿಯಲ್, ಜಂಕ್ ಜುವೆಲ್ ಡಿಸೈನ್ಸ್ ಹಾಗೂ ಕಸ್ಟಮೈಸ್ಡ್ ವಿನ್ಯಾಸವನ್ನೊಳಗೊಂಡಿರುತ್ತವೆ ಎನ್ನುತ್ತಾರೆ.
ಸೆಲೆಬ್ರಿಟಿಗಳ ಚಾಯ್ಸ್‌ನಲ್ಲಿ ಅಸೆಮ್ಮಿಟ್ರಿಕಲ್ ಜ್ಯುವೆಲರಿ
ಸೆಲೆಬ್ರೆಟಿಗಳು ಅಸೆಮ್ಮಿಟ್ರಿಕಲ್ ಜ್ಯುವೆಲರಿ ಪ್ರಿಯರು. ತಾವು ಧರಿಸುವ ಜ್ಯುವೆಲ್ಸ್ ಯೂನಿಕ್ ಆಗಿರಬೇಕೆಂದು ಬಯಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಕೆಲವರು, ನಮ್ಮ ಬಳಿ ಇರುವ ಜ್ಯುವೆಲ್, ಇನ್ನೊಬ್ಬರ ಬಳಿ ಇರಬಾರದೆಂಬ ಮನೋಭಾವ ಹೊಂದಿರುತ್ತಾರೆ. ಅಂತಹವರು ಇಂತಹ ಜ್ಯುವೆಲರಿಗಳನ್ನು ಧರಿಸುತ್ತಾರೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.
ಇನ್ನು ಡಿಸೈನರ್ ದಿವ್ಯಾ ಹೇಳುವಂತೆ, ನೋಡಲು ಯೂನಿಕ್ ಎಂದೆನಿಸುವ ಅಸೆಮ್ಮಿಟ್ರಿಕಲ್ ಜ್ಯುವೆಲರಿಗಳು, ಮಿಕ್ಸ್ ಮ್ಯಾಚ್ ಇಲ್ಲವೇ ಚಿತ್ರ-ವಿಚಿತ್ರ ವಿನ್ಯಾಸಗಳನ್ನು ಹೊಂದಿರುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇವು ಮಾಡರ್ನ್ ಹುಡುಗಿಯರಿಗೆ ಹೇಳಿ ಮಾಡಿಸಿದ ಬೆಸ್ಟ್ ಆಕ್ಸೆಸರೀಸ್ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Lakme Fashion Week 2024: ಫೆಸ್ಟಿವ್ ಸೀಸನ್‌ನಲ್ಲಿ ಮನಸೂರೆಗೊಂಡ ಲ್ಯಾಕ್ಮೆ ಫ್ಯಾಷನ್ ವೀಕ್
ಅಸೆಮ್ಮಿಟ್ರಿಕಲ್ ಜ್ಯುವೆಲ್ ಧರಿಸುವವರಿಗೆ ಸಿಂಪಲ್ ಟಿಪ್ಸ್
ಆದಷ್ಟೂ ಲೈಟ್‌ವೇಟ್ ಪ್ರಿಫರ್ ಮಾಡಿ.
ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನವು ದೊರೆಯುತ್ತವೆ.
ಡಿಸೈನ್‌ಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ.
ಈ ನೆಕ್ಲೆಸ್‌ಗೆ ತಕ್ಕಂತೆ ಡಿಸೈನರ್‌ವೇರ್ ಧರಿಸಬೇಕಾಗಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)