Monday, 16th December 2024

Job Guide: ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ 39 ಮ್ಯಾನೇಜರ್, ಸೂಪರ್ ವೈಸರ್ ಹುದ್ದೆ; ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ

ಬೆಂಗಳೂರು: ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಶನ್ ಸೊಸೈಟಿ (Karnataka State Rural Livelihood Promotion Society)ಯು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (KSRLPS Recruitment 2024-2025). ಯಾದಗಿರಿ, ಹಾವೇರಿ ಜಿಲ್ಲೆಗಳಲ್ಲಿ ಈ ಹುದ್ದೆಗಳಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು (Job Guide).

ಯಾವ ಹುದ್ದೆ?

ಕ್ಲಸ್ಟರ್ ಮೇಲ್ವಿಚಾರಕರು (12), ಡಿಇಒ / ಎಂಇಎಸ್ ಸಂಯೋಜಕರು (6), ಬ್ಲ್ಯಾಕ್ ಮ್ಯಾನೇಜರ್ (12), ಜಿಲ್ಲಾ ವ್ಯವಸ್ಥಾಪಕರು (3), ಜಿಲ್ಲಾ IMS ಸಹಾಯಕರು, DEO (2), ಕಚೇರಿ ಸಹಾಯಕ (1), ಕಾರ್ಯಕ್ರಮ ಸಹಾಯಕ (1), ತಾಲೂಕು ಕಾರ್ಯಕ್ರಮ ನಿರ್ವಾಹಕರು (3) ಸೇರಿ ಒಟ್ಟು 39 ಹುದ್ದೆಗಳಿವೆ.

ವಿದ್ಯಾರ್ಹತೆ

ಕ್ಲಸ್ಟರ್ ಮೇಲ್ವಿಚಾರಕರು , ಜಿಲ್ಲಾ IMS ಸಹಾಯಕರು, DEO, ಕಚೇರಿ ಸಹಾಯಕ ಹುದ್ದೆಗೆ ಪದವಿ ವಿದ್ಯಾರ್ಹತೆ ಅಗತ್ಯ.

ಡಿಇಒ / ಎಂಇಎಸ್ ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು.

ಬ್ಲ್ಯಾಕ್ ಮ್ಯಾನೇಜರ್ ಹುದ್ದೆಗೆ ಸ್ನಾತಕೋತ್ತರ ಪದವಿ ಆಗಿರಬೇಕು.

ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ B. Sc, MSc, ಸ್ನಾತಕೋತ್ತರ ಪದವಿ ಆಗಿರಬೇಕು.

ತಾಲೂಕು ಕಾರ್ಯಕ್ರಮ ನಿರ್ವಾಹಕರು ಹುದ್ದೆಗೆ ಸ್ನಾತಕೋತ್ತರ ಪದವಿ, ಡಿಪ್ಲೊಮಾ ಆಗಿರಬೇಕು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿಗೆ ಯಾವುದೇ ನಿಗಧಿತ ಶುಲ್ಕ ಇಲ್ಲ. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇಂದೇ (ಡಿ. 16) ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸುವವರು ksrlps.karnataka.gov.in ವೆಬ್‌ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಈ ಸುದ್ದಿಯನ್ನೂ ಓದಿ: KEA Exam Result: ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಫಲಿತಾಂಶ, ಅಂತಿಮ ಅಂಕಪಟ್ಟಿ ಬಿಡುಗಡೆ