Thursday, 19th September 2024

Job News: Railway Recruitment 2024: ರೈಲ್ವೆಯಲ್ಲಿ 11558 ಹುದ್ದೆಗಳಿಗೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ

railway job news

ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯ (Indian railways) ರೈಲ್ವೆ ನೇಮಕಾತಿ ಮಂಡಳಿ ಒಟ್ಟು 11,558 ಹುದ್ದೆಗಳಿಗೆ ಅರ್ಜಿ (Railway Recruitment 2024) ಕರೆದಿದೆ. ಪದವಿಪೂರ್ವ ಮತ್ತು ಪದವಿಧರ ಹಂತದ ಪೋಸ್ಟ್‌ಗಳ (Job News) ನೇಮಕಾತಿಗಾಗಿ ಅರ್ಜಿ ಕರೆಯಲಾಗಿದ್ದು, ಸೆಪ್ಟೆಂಬರ್ 14 ರಿಂದ ಪದವಿ ಹುದ್ದೆಗಳಿಗೆ (railway jobs) ಮತ್ತು ಸೆಪ್ಟೆಂಬರ್ 21 ರಿಂದ ಪದವಿಪೂರ್ವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಇದರ ಬಗ್ಗೆ ವಿವರವಾದ ಸೂಚನೆಗಳು ಅಧಿಕೃತ RRB ಮತ್ತು ರೈಲ್ವೆ ನೇಮಕಾತಿ ನಿಯಂತ್ರಣ ಮಂಡಳಿ (RRCB) ವೆಬ್‌ಸೈಟ್‌ಗಳಲ್ಲಿ (CEN 05/2024 ಮತ್ತು CEN 06/2024) ಬಿಡುಗಡೆಯಾಗಿವೆ. ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ (NTPC) ಹುದ್ದೆಗಳಿಗೆ ಬಹು ನಿರೀಕ್ಷಿತ ನೇಮಕಾತಿ ಪ್ರಕ್ರಿಯೆಯನ್ನು ಈ ಮೂಲಕ ರೈಲ್ವೇ ಮಂಡಳಿ ಆರಂಭಿಸಿದ್ದು, ಒಟ್ಟು 11,558 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅರ್ಜಿ ದಿನಾಂಕಗಳು

ಆರ್‌ಆರ್‌ಬಿ ಎನ್‌ಟಿಪಿಸಿ 2024ರ ಅರ್ಜಿ ಪ್ರಕ್ರಿಯೆಯು ಪದವಿಧರ ಮಟ್ಟದ ಹುದ್ದೆಗಳಿಗೆ ಸೆಪ್ಟೆಂಬರ್ 14 ರಂದು ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 13 ರಂದು ಮುಕ್ತಾಯವಾಗುತ್ತದೆ. ಪದವಿಪೂರ್ವ ಹಂತದ ಪೋಸ್ಟ್‌ಗಳಿಗೆ, ಅಪ್ಲಿಕೇಶನ್ ವಿಂಡೋ ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 20 ರವರೆಗೆ ತೆರೆದಿರುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಅಧಿಕೃತ ವೆಬ್‌ಸೈಟ್ rrbapply.gov.in ಮೂಲಕ ಸಲ್ಲಿಸಬಹುದು.

ಖಾಲಿ ಹುದ್ದೆಗಳು

ಒಟ್ಟು 11,558 ಹುದ್ದೆಗಳ ಪೈಕಿ 8,113 ಪದವಿ ಹಂತದ ಹುದ್ದೆಗಳಿಗೆ ಮತ್ತು 3,445 ಪದವಿಪೂರ್ವ ಹಂತದ ಹುದ್ದೆಗಳಿಗೆ ಮೀಸಲಿಡಲಾಗಿದೆ.

ಪದವೀಧರರಿಗೆ ಖಾಲಿ ಹುದ್ದೆಗಳು ಹೀಗಿವೆ:

ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು: 1,736 ಖಾಲಿ ಹುದ್ದೆಗಳು
ಸ್ಟೇಷನ್ ಮಾಸ್ಟರ್: 994 ಖಾಲಿ ಹುದ್ದೆಗಳು
ಗೂಡ್ಸ್ ಟ್ರೈನ್ ಮ್ಯಾನೇಜರ್: 3,144 ಹುದ್ದೆಗಳು
ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್: 1,507 ಖಾಲಿ ಹುದ್ದೆಗಳು
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 732 ಖಾಲಿ ಹುದ್ದೆಗಳು

ಪದವಿಪೂರ್ವ ಹಂತದ ಅಭ್ಯರ್ಥಿಗಳಿಗೆ ಈ ಕೆಳಗಿನ ಹುದ್ದೆಗಳು ಖಾಲಿಯಿವೆ

ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್: 2,022 ಖಾಲಿ ಹುದ್ದೆಗಳು
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್: 361 ಖಾಲಿ ಹುದ್ದೆಗಳು
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 990 ಖಾಲಿ ಹುದ್ದೆಗಳು
ಟ್ರೈನ್ಸ್ ಕ್ಲರ್ಕ್: 72 ಖಾಲಿ ಹುದ್ದೆಗಳು

RRB ನೇಮಕಾತಿ ಅರ್ಜಿ ಶುಲ್ಕ

ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಮಹಿಳೆ, ಪಿಡಬ್ಲ್ಯೂಬಿಡಿ, ಟ್ರಾನ್ಸ್‌ಜೆಂಡರ್, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 ರೂ. ಎಲ್ಲಾ ಇತರ ಅರ್ಜಿದಾರರಿಗೆ ಶುಲ್ಕ 500 ರೂ.

ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸಿದ ನಂತರ ಶುಲ್ಕದ ಒಂದು ಭಾಗವನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಹಾಜರಾಗುವ ಅಭ್ಯರ್ಥಿಗಳಿಗೆ ಮರುಪಾವತಿಸಲಾಗುತ್ತದೆ.

ಅರ್ಹತಾ ಮಾನದಂಡಗಳು, ಹುದ್ದೆಗೆ ಅನುಸಾರವಾಗಿ ವಯಸ್ಸಿನ ಮಿತಿಗಳು ಮತ್ತು ಇತರ ಪ್ರಮುಖ ಮಾಹಿತಿ ಸೇರಿದಂತೆ ಅಪ್‌ಡೇಟ್‌ಗಳಿಗಾಗಿ ಅಭ್ಯರ್ಥಿಗಳು RRB ಅಧಿಕೃತ ವೆಬ್‌ಸೈಟ್‌ ಪರಿಶೀಲಿಸಲು ಕೋರಲಾಗಿದೆ.

ಈ ಸುದ್ದಿ ಓದಿ: Job News: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಗುಡ್ ನ್ಯೂಸ್, 39,481 ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *