Friday, 22nd November 2024

Jollywood: ಜಾಲಿವುಡ್ ಸ್ಟುಡಿಯೋ, ಅಡ್ವೆಂಚರ್ಸ್‌ಗೆ ಮೊದಲ ವಾರ್ಷಿಕೋತ್ಸವದ ಸಂಭ್ರಮ

jollywood

ಬೆಂಗಳೂರು: ಕಳೆದ ವರ್ಷ ಅದ್ದೂರಿಯಾಗಿ ಆರಂಭವಾದ ಜಾಲಿವುಡ್ ಸ್ಟುಡಿಯೋ ಮತ್ತು ಅಡ್ವೆಂಚರ್ಸ್ (Jollywood Studio and Adventures) ಯಶಸ್ವಿಯಾಗಿ ಒಂದು ವರ್ಷ ಪೂರೈಸಿ, ಎರಡನೇ ವರ್ಷಕ್ಕೆ ಕಾಲಿಟ್ಟಿದೆ‌. ಈ ಹಿನ್ನೆಲೆಯಲ್ಲಿ ಜಾಲಿವುಡ್‌ನಲ್ಲಿ ಮೊದಲ ವಾರ್ಷಿಕೋತ್ಸವ ಮತ್ತು ದಸರಾ ಸಂಭ್ರಮ ಅದ್ದೂರಿಯಾಗಿ ನೆರವೇರಿತು. ವೇಲ್ಸ್ ಗ್ರೂಪ್ ಆಫ್ ಕಂಪನಿ ಮಾಲೀಕತ್ವದಲ್ಲಿ ಜಾಲಿವುಡ್ ಸ್ಟುಡಿಯೋ ತಮಿಳಿನಲ್ಲಿ 15 ಸಿನಿಮಾ ನಿರ್ಮಾಣ ಮಾಡಿದೆ. ಶಿಕ್ಷಣ ಮತ್ತು ಮನರಂಜನೆಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿದೆ. ಹಲವು ಕ್ಷೇತ್ರಗಳಲ್ಲಿ ‌ಗಮನ ಹರಿಸಿದೆ‌. ಡಾ. ಐಸಿರಿ ಕೆ. ಗಣೇಶ್ ಅವರು ಜಾಲಿವುಡ್ ಸ್ಟುಡಿಯೋ ಸಾರಥ್ಯದಲ್ಲಿ ನಡೆದುಕೊಂಡು ಬರುತ್ತಿದೆ.

ಜಾಲಿವುಡ್ ಸ್ಥಳೀಯ ಮುಖ್ಯಸ್ಥ ಬಷೀರ್ ಅಹಮದ್ ಮಾತನಾಡಿ ಕಳೆದ ವರ್ಷದಿಂದ ಇಲ್ಲಿಯವರೆಗೆ ಜನರು ನೀಡುತ್ತಿರುವ ಸಹಕಾರ, ಪ್ರೋತ್ಸಾಹ ಅಪಾರ. ಇಲ್ಲಿಯವರೆಗೂ 10 ಲಕ್ಷ ಜನರು ಇಲ್ಲಿಗೆ ಭೇಟಿ ನೀಡಿದ್ದಾರೆ. ಮಾಧ್ಯಮದ ಸಹಕಾರ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಜಾಲಿವುಡ್ ಒಂದು ವರ್ಷ ಪೂರ್ಣಗೊಳಿಸಿದೆ. ಮುಂದೆಯೂ ಸಹಕಾರ ಹೀಗೆ ಇರಲಿ ಎಂದು ಹೇಳಿದರು.

ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ರಮಣ್ ಕುಮಾರ್ ಮಾತನಾಡಿ, ಬೆಂಗಳೂರು ಸುತ್ತಮುತ್ತಲ ಶಾಲೆಯ 2 ರಿಂದ 2.5 ಲಕ್ಷ ವಿದ್ಯಾರ್ಥಿಗಳು ಬಂದಿದ್ದು, ಹಾಲಿಡೇ ತಾಣವಾಗಿ ಸಂತೋಷ, ಉಲ್ಲಾಸ, ಉತ್ಸಾಹ ಪಡೆಯುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಂದ ಸಹ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.

ಜಾಲಿವುಡ್ ಸ್ಟುಡಿಯೋದ ಪ್ರಮೋಷನಲ್ ಪಾರ್ಟ್‌ನರ್ ನವರಸನ್ ಮಾತನಾಡಿ, ಜಾಲಿವುಡ್ ಯಶಸ್ವಿಯಾಗಿ ನಡೆಸುತ್ತಿದೆ. ಐಸಿರಿ ಗಣೇಶ್ ಅವರು ನಮ್ಮನ್ನು ನಂಬಿದ್ದಾರೆ. ಹೀಗಾಗಿ ಅವರ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ಕೊಡಿ ಎನ್ನುತ್ತಿದ್ದಾರೆ. ಶೇಕಡಾ 85 ರಷ್ಟು ಕನ್ನಡಿಗರು ಇಲ್ಲಿ ಕೆಲಸ ಮಾಡುತ್ತಿದ್ದಾರೆ‌. ಇದಕ್ಕೆಲ್ಲಾ ಐಸಿರಿ ಗಣೇಶ್ ಅವರ ಸಹಕಾರವೇ ಕಾರಣ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Vadderse Raghurama Shetty: ‘ವಡ್ಡರ್ಸೆ ರಘುರಾಮ ಶೆಟ್ಟಿ’ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳಿಗೆ ಆಹ್ವಾನ

ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಿತ್ತಿದ್ದೇವೆ. ಸೋಮವಾರದಿಂದ ಶನಿವಾರದವರೆಗೆ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಹಕಾರ ಹೀಗೆ ಇರಲಿ. ಚಿತ್ರೀಕರಣಕ್ಕಾಗಿ ಮೆಟ್ರೋ ರೈಲು ಸೇರಿದಂತೆ ಎರಡು ಹೊಸ ಯೋಜನೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಹೇಳಿದರು.

ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸಾಮಾನ್ಯ ‌ದಿನದಲ್ಲಿ 999 ಮತ್ತು ವಾರಾಂತ್ಯದಲ್ಲಿ 1199 ಬೆಲೆ ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ. ಜಾಲಿವುಡ್ ಸಂಸ್ಥೆ ವತಿಯಿಂದ ಪ್ರತಿ ವರ್ಷ ಪ್ರಶಸ್ತಿ ನೀಡುವ ಉದ್ದೇಶವಿದೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಲೋಪ ದೋಷ ಆಗದಂತೆ ನೋಡಿಕೊಳ್ಳಲಾಗಿದೆ. ಆವರಣದಲ್ಲಿ ವೈದ್ಯರು ಮತ್ತು ಅಂಬುಲೆನ್ಸ್ ವ್ಯವಸ್ಥೆ ಇದೆ ಎಂದು ಕೂಡ ನವರಸನ್ ತಿಳಿಸಿದರು.

ಈ ಸುದ್ದಿಯನ್ನೂ ಓದಿ |Kannada New Movie: ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯ ಸುತ್ತ ‘ವೃತ್ತ’ ಸಿನಿಮಾ ಟೀಸರ್‌ ರಿಲೀಸ್‌

ಪ್ರಚಾರ ಕರ್ತ ಪಿಆರ್‌ಓ ವೆಂಕಟೇಶ್, ಜಾಲಿವುಡ್ ಒಂದು ವರ್ಷ ಪೂರೈಸಿದೆ. ಇಡೀ ತಂಡಕ್ಕೆ ಅಭಿನಂದನೆಗಳು ಎಂದರು. ಎಕ್ಸೀಪೀರಿಯನ್ಸ್ ಮುಖ್ಯಸ್ಥ ಕಲ್ಲೋಲ್ ಪೋಲೆ ಸಹ ಪತ್ರಿಕಾಗೋಷ್ಠಿಯಲ್ಲಿದ್ದರು.