Saturday, 14th December 2024

ಯುವಜನತೆ ಸ್ವಾಮಿ ವಿವೇಕಾನಂದರವರ ಸಾಧನೆಗಳನ್ನು ಅಳವಡಿಸಿಕೊಳ್ಳಬೇಕು: ನ್ಯಾಯಾಧೀಶೆ ಫಕ್ಕೀರವ್ವ ಕೆಳೆಗೆರಿ

ಹರಪನಹಳ್ಳಿ: ಯುವ ಜನತೆ ಸ್ವಾಮಿ ವಿವೇಕಾನಂದ ರವರ ಅನುಯಾಯಿಗಳಾಗಿ ಅವರ ಸಾಧನೆಗಳನ್ನು ಅಳವಡಿಸಿ ಕೊಂಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಧನೆ ಮಾಡುವುದಕ್ಕೆ ಸಾಧ್ಯವಾಗುತ್ತದೆ  ಎಂದು ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳೆಗೆರಿ ಹೇಳಿದರು.

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಗುರುವಾರ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದೆಹಲಿ, ತಾಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ, ತಾಲೂಕುಗಳ ವಿವಿಧ ಇಲಾಖೆಗಳು ಹರಪನಹಳ್ಳಿ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮದ ವಿಚಾರಣೆ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ, ರಾಷ್ಟ್ರೀಯ ಯುವ ಸಪ್ತಾಹ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಸಿಗೆ ನೀರು ಏರೆಯುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು. ಸ್ವಾಮಿ ವಿವೇಕಾನಂದ ರವರು 39 ವರ್ಷ ಬದುಕಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಅವರ ಅನುಯಾಯಿಗಳಾಗಿ ಕಾರ್ಯನಿರ್ವಾಹಿದಾಗ ಮಾತ್ರ ಸಾಧನೆ ಮಾಡುವುದಕ್ಕೆ ಸಾದ್ಯವಗುತ್ತದೆ. ಯುವಕರು ವಿವೇಕಾನಂದ ಸಾಧನೆಯನ್ನು ಮನ್ನಣೆಗೆ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ವಿಶ್ಲೇಷಿಸಿದರು.

ವಿಧ್ಯಾರ್ಥಿಗಳು ಪೋಸ್ಕೋ ಕಾಯ್ದೆಗಳ ಬಗ್ಗೆ ತಿಳಿದುಕೊಂಡು ಸರಿಯಾದ ಮಾರ್ಗದಲ್ಲಿ ನಡೆದುಕೊಳ್ಳಬೇಕು, ಅನ್ಯ ಮಾರ್ಗ ದಿಂದ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ನಿಮ್ಮ ತಂದೆ ತಾಯಿಗಳ ಗುರು ಹಿರಿಯ ಮಾರ್ಗದಲ್ಲಿ ನಡೆದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುದಕ್ಕೆ ಸಾಧ್ಯವಾಗುತ್ತದೆ. ಎಂದು ವಿಧ್ಯಾರ್ಥಿ ಗಳಿಗೆ ತಿಳಿ ಹೇಳಿದರು.

ವಿಧ್ಯಾರ್ಥಿಗಳು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳದೇ ಸರಿಯಾಗಿ,ಕಾನೂನು ಬಗ್ಗೆ ಅರಿತುಕೊಳ್ಳ ಬೇಕು. ಯಾವುದೇ ರೀತಿ ವಾಮ ಮಾರ್ಗ ಹಿಡಿದು ಕೊಂಡು ನಿಮ್ಮ ಜೀವನವನ್ನು ನಿರ್ನಾಮವಾಗಿಸಿಕೊಳ್ಳ ಬೇಡಿ ಎಂದು ವಿಧ್ಯಾರ್ಥಿಗಳಿಗೆ ಕಾನೂನು ಬಗ್ಗೆ ಅರಿವು ಮೂಡಿಸಿದರು. ಯುವ ಪೀಳಿಗೆಯ ಯುವಕರು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ನಾಗರಿಕರಾಗಬೇಕು. ಗುರು ಶಿಷ್ಯರ ಸಂಬಂದ ಅನ್ಯೋನ್ಯತೆಯಿಂದ ಕೂಡಿರಬೇಕು, ಅರವ ಆದರ್ಶವನ್ನು ನೋಡಿ ಕಲಿಯಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷರಾಗಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯುವ ಸಾಧನೆಯ ಮೂಲಕ ನಿಮ್ಮ ತಂದೆ ತಾಯಿಗಳಿಗೆ ಸೃಜನಶೀಲ ವ್ಯಕ್ತಿಯಾಗಿ ನಡೆದಾಗ ಮಾತ್ರ ವಿಧ್ಯಾರ್ಥಿಗಳ ಜೀವನ ಸನ್ ಮಾರ್ಗದಲ್ಲಿ ನಡೆದದಾಗ ಮಾತ್ರ ದೇಶವನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ. ಮಹನೀಯರ ಸಾಧನೆಯನ್ನು ಗಂಭೀರ ವಾಗಿ ಚಿಂತನೆ ಮಾಡಬೇಕಾಗಿದೆ, ಯುವ ಜನತೆ ದೇಶದ ಆಸ್ತಿಯಾಗಿ ಕಾರ್ಯನಿರ್ವಹಸಬೇಕು ಎಂದು ವಿಶ್ಲೇಷಿಸಿದರು. ದೇಶದಲ್ಲಿ ಯುವಕರ ಪಾತ್ರ ಬಹಳ ‌ಮುಖ್ಯ ಧರ್ಮ ಆಧಾರದ ಮೇಲೆ ಯುವ ಜನತೆ ನಡೆದುಕೊಳ್ಳಬೇಕು ಎಂದರು.

ವಕೀಲರಾದ ಎಂ. ಮೃತಂಜಯ್ಯ ಉಪನ್ಯಾಸ ನೀಡಿದರು, ವಿದ್ಯಾರ್ಥಿಗಳು ಗುರಿಮುಟ್ಟುವತನಕ ಸಾಧನೆ ಮಾಡಬೇಕು. ದೇಶದ ಶಕ್ತಿ ಭಗವತ್ ಗೀತೆಯ ಮೇಲಿದೆ. ಯುವಕರು ಜ್ಞಾನದಿಂದ ಸಾಗಬೇಕಾಗಿದೆ. ದೇಹ ಬಲ, ಆತ್ಮ ಬಲದಿಂದ ಏನಾದರೂ ಸಾಧನೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸನ್ಮಾಮಾರ್ಗದಲ್ಲಿ ನಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲರಾದ ವಿ.ಜಿ. ಪ್ರಕಾಶ್ ಗೌಡ, ಸರಕಾರಿ ಅಭಿಯೋಜಕರಾದ, ನಿರ್ಮಲ. ವಕೀಲರ ಸಂಘದ ಉಪಾಧ್ಯಕ್ಷ ವಾಸುದೇವ, ಕಾರ್ಯದರ್ಶಿ, ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ,ಸಹ ಉಪಾನ್ಯಾಸಕರಾದ. ಡಾ.ಸುರೇಶ್, ಎನ್.ಎಂ.ನಾಗರಾಜ್, ಷಣ್ಮುಖ ನಗೌಡ, ಶಂಭು ಲಿಂಗಪ್ಪ, ಹುಚ್ಚರಾಯಪ್ಪ, ನ್ಯಾಯಾಲಯದ ರೇವಣಸಿದ್ದಪ್ಪ, ಬಸವರಾಜ, ಕೋಟ್ರೇಶ್, ಮತ್ತು ಇತರರು ಉಪಸ್ಥಿತರಿದ್ದರು.