Thursday, 12th December 2024

ಸಿಪಿಐ(ಎಂಎಲ್) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಕೆ.ನಾಗಲಿಂಗ ಸ್ವಾಮಿ ರಾಜೀನಾಮೆ

ವರದಿ: ಚಂದ್ರಶೇಖರ ಮದ್ಲಾಪೂರ

ಮಾನವಿ: ರಾಜ್ಯ ಕಾರ್ಯದರ್ಶಿಗಳು ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಸಮಿತಿ – ಕರ್ನಾಟಕ, ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆಯನ್ನು ಕೆ ನಾಗಲಿಂಗ ಸ್ವಾಮಿ ನೀಡಿದ್ದಾರೆ. ನಾನು ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ, ರಾಜ್ಯ ಸಮಿತಿ ಹಾಗೂ ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ನನ್ನ ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಸಮಿತಿ ರಾಯಚೂರು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ-ಲೆನಿನ್‌ವಾದಿ ) ಪಕ್ಷಕ್ಕೆ ಸುಮಾರು 1998 ರಲ್ಲಿ ವಿದ್ಯಾರ್ಥಿ ಸಂಘಟನೆಯಿಂದ ಪಕ್ಷಕ್ಕೆ ಸೇರಿ ಪಕ್ಷದ ತಾಲ್ಲೂಕು ಸಮಿತಿ, ಜಿಲ್ಲಾ ಸಮಿತಿ ಕಾರ್ಯದರ್ಶಿಯಾಗಿ, ಕರ್ನಾಟಕ ರೈತ ಸಂಘದ (ಕೆಆರ್‌ಎಸ್) ಜಿಲ್ಲಾಧ್ಯಕ್ಷನಾಗಿ, ವಿವಿಧ ಜವಾಬ್ದಾರಿಯನ್ನು ಹೊತ್ತು ವ್ಯ ಪಕ್ಷದ ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ನಾನು ಪಕ್ಷದಲ್ಲಿ 23 ವರ್ಷಗಳ ಕಾಲ ಕೆಲಸ ಮಾಡಿರುತ್ತೇನೆ. ನನಗೆ ಪಕ್ಷದಲ್ಲಿ ಸಹಕರಿಸಿದ ಎಲ್ಲಾ ಸಂಗಾತಿಗಳಿಗೆ ಕ್ರಾಂತಿಕಾರಿ ಧನ್ಯವಾದ ತಿಳಿಸಿ ದ್ದಾರೆ.

ಈಗ ನನ್ನ ವೈಯಕ್ತಿಕ ಕಾರಣಗಳಿಂದಾಗಿ ಪಕ್ಷದ ಕೆಲಸ ಮಾಡಲು ಆಗುತ್ತಿಲ್ಲ ಆದ್ದರಿಂದ ಪಕ್ಷದ ಎಲ್ಲಾ ಹಂತದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ‌‌.