Sunday, 15th December 2024

ಅಧಿಕಾರಿಗಳು ಕಾಳಜಿಯಿಂದ ಕಾಮಗಾರಿ ನೋಡಿಕೊಳ್ಳಬೇಕು: ಕೆ.ಶಿವನಗೌಡ ನಾಯಕ

ದೇವದುರ್ಗ: ಬಹುಕಾಲ ಬಾಳಿಕೆಗೆ ಬರುವಂತಹ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕು. ಉತ್ತಮ ರಸ್ತೆ ನಿರ್ಮಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಹೀಗಾಗಿ ಅಧಿಕಾರಿಗಳು ಕಾಳಜಿಯಿಂದ ಕಾಮ ಗಾರಿ ನೋಡಿಕೊಳ್ಳಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಶಿವನಗೌಡ ನಾಯಕ ಸೂಚಿಸಿದರು.

ಸಮೀಪದ ಯರಮಸಾಳ ಗ್ರಾಮದಲ್ಲಿ ಯರಮಸಾಳ, ನಾಗರಾಳ ಮಾರ್ಗದ ರಸ್ತೆ ಡಾಂಬರೀಕರಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಈ ಮಾರ್ಗದ ಗ್ರಾಮಸ್ಥರು ಸಹಕರಿಸುವ ಮೂಲಕ ಗುತ್ತಿಗೆದಾರರಿಂದ ಉತ್ತಮ ರಸ್ತೆ ನಿರ್ಮಿಸಿಕೊಳ್ಳಬೇಕು.

2021-22ನೇ ಸಾಲಿನ KKRDBಯ 572 ಲಕ್ಷ ರೂ. ಅನುದಾನದಡಿ ಯರಮಸಾಳ—ನಾಗರಾಳ ಮಾರ್ಗದ ಬಿಟಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಮನ್ವಯತೆ ಯಿಂದ ಕಾಮಗಾರಿ ನಿರ್ವಹಿಸಿ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಪ್ರಕಾಶ ಪಾಟೀಲ್ ಜೇರಬಂಡಿ, ಲಿಂಗನಗೌಡ ಜೋಳದ ಹೆಡಗಿ, ಬಿಜೆಪಿ ಮುಖಂಡರಾದ ಬಸಯ್ಯ ತಾತ ಯರಮಸಾಳ, ಕೆಂಚಣ್ಣ ತಾತ ಕೊತ್ತದೊಡ್ಡಿ, ರವಿಗೌಡ ಮಾತ್ಪಳ್ಳಿ, ಮಲ್ಲಿಕಾರ್ಜುನ ಹಿರೇಬುದೂರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.