ಹರಪನಹಳ್ಳಿ: ಶೋಷಿತ ಸಮುದಾಯಗಳನ್ನು ಸಾಮಾಜಿಕ.ಶೈಕ್ಷಣಿಕ ಆರ್ಥಿಕವಾಗಿ ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸಮರ್ಥ ರೀತಿಯಲ್ಲಿ ಶ್ರಮಿಸಿದ ಧೀಮಂತ ನಾಯಕ ಎಲ್.ಜಿ. ಹಾವನೂರವರು ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಹೇಳಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಎಲ್.ಜಿ.ಹಾವನೂರು ಜಯಂತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕೆ. ಉಚ್ಚೆಂಗೆಪ್ಪನವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಹಿಂದೂಳಿದ ವರ್ಗಗಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಹಾವನೂರು ವರದಿ ಹಿಂದೂಳಿದ ವರ್ಗಗಗಳ ಅಯೋಗಗಳ ವರದಿಗಳಲ್ಲಿ ಮಾತೃಸ್ಥಾನ ಪಡೆದಿದ್ದು ದೇವ ರಾಜ ಅರಸು ಅವರಿಗೆ ಸಿಕ್ಕಷ್ಟೆ ಮನ್ನಣೆ ಕಾನೂನು ಪಂಡಿತ ಎಲ್.ಜಿ. ಹಾವನೂರು ಅವರಿಗೆ ಸಿಗುವಂತಾಗಲಿ ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವು ಸಾಗಬೇಕು ಎಂದರು.
ಏಕಲವ್ಯ ಸಂಘರ್ಷ ಸಮಿತಿ ಯ ಅಧ್ಯಕ್ಷ ರಾಯದುರ್ಗದ ಪ್ರಕಾಶ ಮಾತನಾಡಿ, ಎಲ್.ಜಿ. ಹಾವನೂರವರು ರಾಣೆ ಬೆನ್ನೂರು ತಾಲ್ಲೂಕು ಅಗಡಿ ಗ್ರಾಮದಲ್ಲಿ ೧೯೨೫ ರಲ್ಲಿ ಜನಸಿ ರಾಣೆ ಬೆನ್ನೂರು ಪುರಸಭೆ ಅಧ್ಯಕ್ಷರಾಗಿ ವಕೀಲರಾಗಿ ೮ ವರ್ಷಗಳ ಕಾಲ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾನೂನು, ಸಮಾಜ ಕಲ್ಯಾಣ ಸಚೀವರಾಗಿ ದಕ್ಷಿಣ ಅಫ್ರಿಕಾ ದೇಶದ ಸಂವಿಧಾನದ ರಚನ ಸಮಿತಿಯ ಪರಣಿತ ಸದಸ್ಯರಾಗಿ ಎಲ್ಲರ ಜನಮಾನಸದಲ್ಲಿ ಜಿವಂತರಾಗಿದ್ದಾರೆ ಎಂದರು.
ಯುವ ಮುಖಂಡ ಹರಿಯಮ್ಮನಹಳ್ಳಿ ಶಿವರಾಜ್ ಮಾತನಾಡಿ, ಹಿಂದೂಳಿದ ವರ್ಗಗಗಳ ಬೈಬಲ್ ಎಂದು ಖ್ಯಾತಿ ಪಡೆದ ಎಲ್.ಜಿ. ಹಾವನೂರವರು ದೇವರಾಜ ಅರಸು ಸರ್ಕಾರದಲ್ಲಿ ಸಚೀವರಾಗಿ ಸಮರ್ಥವಾಗಿ ಕೆಲಸ ನಿರ್ವಹಿಸಿದ ಕಿರ್ತಿ ಅವರಿಗೆ ಸಲ್ಲುತ್ತದೆ. ಮೀಸಲಾತಿಯಿಂದ ಚುನಾಯಿತರಾದ ವಾಲ್ಮೀಕಿನಾಯಕ ಸಮಾಜದ ಶಾಸಕರು ಸಂಸದರು ಸಮೂದಾಯಕ್ಕೆ ಸಿಗಬೇಕಾದ ಮೀಸಲಾತಿಗಾಗಿ ರಾಜನಾಮೆ ನೀಡುತ್ತೆವೆ ಎಂದು ಸುಳ್ಳು ಅಶ್ವಾಸನೆ ನೀಡುತ್ತಿದ್ದಾರೆ ಅದರೆ ನಮ್ಮ ಪ್ರತಿ ಹೋರಟದಲ್ಲಿ ರಾಜ್ಯದ ೫೦ ಲಕ್ಷ ಜನರು ಇದ್ದು ಸರ್ಕಾರ ಶೇ.೭.೫ ಮೀಸಲಾತಿಯನ್ನು ನೀಡಲೆ ಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಏಕಲವ್ಯ ಸಂಘರ್ಷ ಸಮಿತಿಯ ಉಪಾಧ್ಯಕ್ಷ ಆಲಮರಸಿಕೇರಿ ಮಂಜುನಾಥ, ಮೈದೂರು ಪರುಶುರಾಮ, ಕಾರ್ಯದರ್ಶಿ ಟಿ ಶಿವರಾಜ, ಖಜಾಂಚಿ ಹರೀಶ, ಪದಾಧಿಕಾರಿಗಳಾದ ಬಿ. ಅಂಜಿನಪ್ಪ ಮಂಜುನಾಥ, ಅರ್ಜುನ, ಮಾರುತಿ, ಕುಮಾರ್, ಗೋವಿಂದ, ಅಭಿಷೇಕ, ಪ್ರಶಾಂತ, ಸೇರಿದಂತೆ ಇತರರು ಇದ್ದರು.