ಚಿಂತಾಮಣಿ : ಬೆಂಗಳೂರಿನ ಕಲಾ ಗ್ರಾಮದಲ್ಲಿ ಶನಿವಾರ ಸಂಜೆ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಚಿಗುರು ಚಾರಿಟಬಲ್ ಅಂಡ್ ಕಲ್ಚರಲ್ ಟ್ರಸ್ಟ್ ನಿಂದ ಹೆಜ್ಜೆ-ಗೆಜ್ಜೆ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ನೋಡುಗರ ಮನಸೆಳೆಯಿತು.
ತಾಲೂಕಿನ ಕೈವಾರದ ನಾಟ್ಯಾಂಜಲಿ ನೃತ್ಯ ಕಲಾ ಅಕಾಡೆಮಿಯ ಗುರುಗಳಾದ ಪರಿಮಳ ಅರಳುಮಲ್ಲಿಗೆ ಅವರ ಶಿಷ್ಯ ವೃಂದ ಅಸ್ಮಿತಾ, ದೀಕ್ಷಿತಾ, ಚಿರಂತ್, ಪಾವನಿ ಕುಮಾರ್, ಉನ್ನತಿ ಕುಮಾರ್ , ಸುಮಿತ್ರಾ, ನಿಶ್ಚಿತಾ, ಅಕ್ಷಯ, ತನುಶ್ರೀ ಎಸ್.ಗೌಡ, ಲಲಿತ, ದುರ್ಗಾ, ನಂದುಶ್ರೀ, ಭವಿತ ಮತ್ತಿತರರು ವೇದಿಕೆಯಲ್ಲಿ ಭರತನಾಟ್ಯ ಪ್ರದರ್ಶನ ನೀಡಿದರು.
ಇದೇ ರೀತಿ ಬಹಳಷ್ಟು ನಾಟ್ಯಶಾಲೆಗಳ ಬಾಲ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಾಡಿನ ಶ್ರೀಮಂತ ಕಲೆಯಾದ ಭರತನಾಟ್ಯಕ್ಕೆ ಬಹಳಷ್ಟು ಸ್ಫೂರ್ತಿ ನೀಡುತ್ತಿರುವ ಚಿಗುರು ಚಾರಿಟಬಲ್ ಟ್ರಸ್ಟ್ ನ ಗೌರವಾಧ್ಯಕ್ಷರಾದ ಸಂತೋಷಿ ಮತ್ತಿತರರು ಪಾಲ್ಗೊಂಡಿದ್ದರು. ಬಾಲ ಕಲಾವಿದ ರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹದಾಯಕವಾಗಿ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಲಾಯಿತು.