ಕೊಲ್ಹಾರ: ಕ್ರೀಡೆಗಳು ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಆರೋಗ್ಯಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡುತ್ತವೆ ಎಂದು ಕಾಂಗ್ರೆಸ ಮುಖಂಡ ಎಂ.ಆರ್ ಕಲಾದಗಿ ಹೇಳಿದರು.
ಪಟ್ಟಣದ ಅಜೀಮ್ ಬುಡನ್ ಕ್ರಿಕೆಟ್ ಅಸೋಷಿಯೇಷನ್ ಹಾಗೂ ಹುಮಾನಿಟಿ ವೆಲ್ಫರ್ ಅಸೊಷಿಯೇಷನ್ ವತಿಯಿಂದ ಹಮ್ಮಿಕೊಂಡಿರುವ ಕೊಲ್ಹಾರ ಪ್ರಿಮೀಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ ಉದ್ಘಾಟಿಸಿ ಅವರು ಮಾತನಾಡಿದರು ಜೀವನದಲ್ಲಿ ಕ್ರೀಡಾಕೂಟಗಳಿಗೆ ಪ್ರಾತಿನಿಧ್ಯತೆ ನೀಡಬೇಕು.
ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸ ಬೆಳೆಯಲು ಕ್ರೀಡಾಕೂಟಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಆರ್.ಬಿ ಪಕಾಲಿ, ಎ.ಐ.ಎಂ.ಐ.ಎಂ ಜಿಲ್ಲಾಧ್ಯಕ್ಷ ಅಲ್ಲಾಭಕ್ಷ ಬಿಜಾಪುರ, ಪ.ಪಂ ಸದಸ್ಯ ತೌಶಿಪ ಗಿರಗಾಂವಿ, ಮುಖಂಡ ಹಾಜಿಮಲಂಗ ಜಮಾದಾರ, ಇಲಾಹಿ ಗಿರಗಾಂವಿ, ಸಹಿತ ಅನೇಕರು ಇದ್ದರು.