Friday, 22nd November 2024

ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ 23 ಕೋಟಿ ರು.ಗಳು ಮಂಜೂರು

ಹರಪನಹಳ್ಳಿ: ಹರಪನಹಳ್ಳಿ ತಾಲೂಕಿಗೆ ಮೂಲ ಸೌಕರ್ಯ ಒದಗಿಸಲು ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ಈ ವರ್ಷ 23 ಕೋಟಿ ರು.ಗಳು ಮಂಜೂರಾಗಿವೆ ಎಂದು ಸ್ಥಳೀಯ ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದ್ದಾರೆ.

ಅವರು ಪಟ್ಟಣದ ಪುರಸಭೆ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ದ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಮೊದಲು ೩೯ ಕೋಟಿ, ಎರಡನೆ ವರ್ಷ ೨೦ ಕೋಟಿ ರು. ನಂತರ ಈ ವರ್ಷ ೨೩ ಕೋಟಿ ರು. ಕಳೆದ ಮೂರು ವರ್ಷದಲ್ಲಿ ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ತಾಲೂಕಿಗೆ ಒಟ್ಟು ೮೨ ಕೋಟಿ ರು.ಮಂಜೂರಾಗಿದೆ ಎಂದು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಪದವಿಗೆ ಪ್ರವೇಶ ಪಡೆಯಲು ಸಾಕಷ್ಟು ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಿದ್ದು, ಆದರೆ ಸ್ಥಳಾವಕಾಶ ಕಡಿಮೆ ಇದೆ, ಆದ್ದರಿಂದ ಈ ಬಗ್ಗೆ ವಿದಾನಸಭಾ ಅಽವೇಶನದಲ್ಲಿ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆಯುವುದಾಗಿ ಅವರು ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆಗೆ ೧೦ ಐಸಿಯು ಬೆಡ್ ಗಳ ಸ್ಥಾಪನೆಗೆ ಎಲ್ಲಾ ಕ್ರಮ ಕೈಗೊಂಡಿದ್ದು, ಈಗ ಟೆಂಡರ್ ಹಂತದಲ್ಲಿದೆ ಎಂದು ಅವರು ಹೇಳಿದರು. ತಾಲೂಕಿನಲ್ಲಿ ಕೊಳೆ ರೋಗದಿಂದ ಹಾನಿಗೀಡಾದ ಈರುಳ್ಳಿ ಬೆಳೆಗೆ ಪರಿಹಾರ ಕಲ್ಪಿಸಲು ಬೆಳೆ ಹಾನಿ ಸರ್ವೆ ಮಾಡಲು ಸಂಬAಧ ಪಟ್ಟ ಅಽಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ಹಿಂದುಳಿದ ತಾಲೂಕುಗಳಿಗೆ ಹೆಚ್ಚಿನ ಅನುದಾನ ಕೊಟ್ಟರೆ ಕಲ್ಯಾಣ ಕರ್ನಾಟಕ ಎಂಬ ಹೆಸರು ಸಾರ್ಥಕವಾಗುತ್ತದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್ , ಉಪಾದ್ಯಕ್ಷೆ ಭೀಮವ್ವ, ಬಿಜೆಪಿ ತಾ.ಅಧ್ಯಕ್ಷ ಸತ್ತೂರು ಹಾಲೇಶ, ಮುಖಂಡರಾದ ರಾಘ ವೇಂದ್ರಶೆಟ್ಟಿ, ಆರ್ .ಲೋಕೇಶ,ಬಾಗಳಿ ಕೊಟ್ರೇಶಪ್ಪ, ನಿಟ್ಟೂರು ಸಣ್ಣ ಹಾಲಪ್ಪ, ಯು,ಪಿ.ನಾಗರಾಜ, ಮುಖ್ಯಾಽಕಾರಿ ಎರಗುಡಿ ಶಿವಕುಮಾರ, ಡಿವೈಎಸ್ಪಿ ವಿ.ಎಸ್ .ಹಾಲಮೂರ್ತಿರಾವ್, ಸಿಪಿಐ ನಾಗರಾಜ ಕಮ್ಮಾರ, ಪಿಎಸ್ ಐ ಸಿ.ಪ್ರಕಾಶ್ , ಎಂ.ಸAತೋಷ, ಡಾ.ಶಿವಕುಮಾರ, ಪುರಸಭಾ ಸದಸ್ಯರುಗಳು ಹಾಜ ರಿದ್ದರು.