Thursday, 12th December 2024

ಕನಕದಾಸರು ನಾಡಿನ ಶ್ರೇಷ್ಠ ಸಂತ: ಎ.ಸಿ ರಾಮಚಂದ್ರ ಗಡದೆ

ಇಂಡಿ: ತಾಲೂಕಾಡಳಿತ ವತಿಯಿಂದ ಪಟ್ಟಣದ ಮಿನಿವಿಧಾನಸೌಧಾ ಸಭಾಭವನದಲ್ಲಿ ಆಯೋಜಿಸಿದ ದಾಸ ಶ್ರೇಷ್ಠ ಕನಕ ದಾಸರ ಹಾಗೂ ಒನಕೆ ಓಬ್ಬವ ಜಯಂತ್ಯೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ತಹಶೀಲ್ದಾರ ನಾಗಯ್ಯಾ ಹಿರೇಮಠ ಜಂಟಿಯಾಗಿ ಭಾವಚಿತ್ರಗಳಿಗೆ ಪೂಜ್ಯ ಮತ್ತು ಪುಸ್ಪ ನಮನ ಸಲ್ಲಿಸಿದರು.

ಈ ಸಂಧರ್ಬದಲ್ಲಿ ಕಾಂಗ್ರೆಸ್ ಮುಖಂಡ ಜಟ್ಟೆಪ್ಪ ರವಳಿ ಮಾತನಾಡಿ ಕನಕದಾಸರು ನಾಡಿನ ಶ್ರೇಷ್ಠ ದಾರ್ಶನಿಕ ಯುಗ ಪುರುಷರು. ಅವರ ಅಧ್ಯಾತ್ಮಿಕ ಗುರುವಾದ ವ್ಯಾಸರಾಜ ರಿಂದ ಅವರಿಗೆ ಕನಕ ಎಂಬ ಹೆಸರು ಬಂದಿದೆ. ಉಡುಪಿ ಶ್ರೀಕೃಷ್ಣನ ದೇವಸ್ಥಾನದಲ್ಲಿ ಅರ್ಚಕರು ಇವರಿಗೆ ಪ್ರವೇಶಕ್ಕೆ ನಿರಾಕರಿಸಿದಾಗ ಶ್ರೀಕೃಷ್ಣನ್ನು ಭಕ್ತನ ಕಡೆಗೆ ತಿರುಗಿ ಹಂದರದ ಕಿಡಕಿಯ ಮೂಲಕ ದರ್ಶನ ನೀಡಿದನು, ಈ ಕಿಡಕಿಯನ್ನು ಕನಕನ ಕಿಂಡಿ ಎಂದು ಇಂದಿಗೂ ಕರೆಯುತ್ತಾರೆ. ಅವನು ಯುವಕನಾಗಿದ್ದಾಗ ಯುದ್ದದಲ್ಲಿ ಸೋಲಿಸ ಲ್ಪಟ್ಟಾಗ ಮತ್ತು ಮಾರಣಾಂತಿಕವಾಗಿ ಗಾಯಗೊಂಡನು. ಈ ಘಟನೆ ತನ್ನ ವೃತ್ತಿಯನ್ನು ತೈಜಿಸಿ ಆಧ್ಯಾತ್ಮಕಡೆ ತಿರುಗಿಸಿತು ಎಂದರು.

ಒನಕೆ ಓಬವ್ವ ೧೮ನೇಯ ಶತಮಾನದ ಚಿತ್ರದುರ್ಗ ಕೋಟೆಯಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಮದ್ದಹನುಮಪ್ಪ ಹೆಂಡತಿ ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರರಾಣಿ ಚೆನ್ನಮ್ಮ, ರಾಣಿ ಅಬ್ಬಕನ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

ಓಬ್ಬವ್ವ ಭಾರತ ಕರ್ನಾಟಕ ರಾಜ್ಯದ ವಿತ್ರದುರ್ಗ ರಾಜ್ಯದಲ್ಲಿ ವಾಸಿಸುತ್ತಿದ್ದ ವೀರ ಮಹಿಳೆ. ಅವಳು ಮಾತ್ರ ನಗರವನ್ನು ಸೈನಿಕರು ಆಕ್ರಮಿಸಲು ಪ್ರಯತ್ನಿಸುತಿದ್ದ ನೂರಾರು ಸೈನಿಕರನ್ನು ಒನಕೆ ಸಹಾಯದಿಂದ ಹತ್ಯ ಮಾಡಿ ಪ್ರಸಿದ್ದಳಾದಳು ಎಂದು ತಹಶೀಲ್ದಾರ ನಾಗಯ್ಯಾ ಹಿರೇಮಠ ಮಾತನಾಡಿದರು.

ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಉಪವಿಭಾಗಾಧಿಕಾರಿ,ತಹಶೀಲ್ದಾರ ನಾಗಯ್ಯಾ ಹಿರೇಮಠ, ಜೆಟ್ಟೆಪ್ಪ ರವಳಿ, ಭೀಮಣ್ಣ ಕೌಲಗಿ, ಪ್ರಶಾಂತ ಕಾಳೆ, ಎಸ್ ಆರ್ ರುದ್ರವಾಡಿ, ಯಲ್ಲಪ್ಪ ಹದರಿ, ಶ್ರೀಶೈಲ ಪೂಜಾರಿ, ಬುದ್ದುಗೌಡ ಪಾಟೀಲ, ಆರ್,ವಿ ಪಾಟೀಲ, ಸಚೀನ ಬೋಳೆಗಾಂವ್, ಸಂತೋಷ ಹೋಟಗಾರ, ಹರೀಶ್ಚಂದ್ರ ಪವಾರ, ಪಂಡೀತ ಕೊಡಹೊನ್ನ ಸೇರಿದಂತೆ ತಾಲೂಕಾಡಳಿತ ಅಧಿಕಾರಿಗಳು, ಸಿಬಂದ್ದಿಗಳು, ಸಮಾಜದ ಮುಖಂಡರು,ಗಣ್ಯರು ಉಪಸ್ಥಿತರಿದ್ದರು.

*
ಕನಕದಾಸರ ಬರಹಗಳು ಭಕ್ತಿ ಮಾತ್ರವಲ್ಲದೆ ಸಾಮಾಜಿಕ ಅಂಶಗಳನ್ನು ಮುಟ್ಟಿದೆ. ಅವರ ರಾಮಧ್ಯಾನ ಚರಿತೆ ಶ್ರೀಮಂತ ಬಡವರ ನಡುವಿನ ವಿಭಜನೆಯನ್ನು ಒಂದು ರೂಪಕ ಕೃತಿಯಾಗಿದೆ ಕನಕದಾಸರು. ಕನ್ನಡದಲ್ಲಿ ಸುಂದರವಾದ ಸಾಹಿತಯ ಕೃತಿಗಳನ್ನು ರಚಿಸಿದ್ದಾರೆ.
ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ ಉಪವಿಭಾಗಾಧಿಕಾರಿ