ಹರಪನಹಳ್ಳಿ: ಸಾವಿರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಕನ್ನಡ ಬಾಷೆ ಎಲ್ಲರಲ್ಲೂ ಹೃದಯಬಾಷೆ ಯಾಗ ಬೇಕು ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ ಚಂದ್ರಶೇಖರ ಭಟ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಶ್ರೀಮತಿ ಚಿಗಟೇರಿ ಅಂಬಮ್ಮ ಮತ್ತು ಹನುಮಂತಪ್ಪ ದತ್ತಿ ಶ್ರೀ ಜಿ.ಹುಚ್ಚಪ್ಪ ಮತ್ತು ಶ್ರೀಮತಿ ಉಚ್ಚೆಂಗೆಮ್ಮ ದತ್ತಿ. ಶ್ರೀವಾಲ್ಮೀಕಿ ಬಸಪ್ಪ ಮತ್ತು ಶ್ರೀತಳ ವಾರ ದ್ಯಾಮವ್ವ ದತ್ತಿ. ಕಂಚಿಕೇರಿ ಶ್ರೀಮತಿ ಬಿದರಿ ಮೀನಾಕ್ಷಮ್ಮ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು.
ರೈತರು ಕಾರ್ಮಿಕರು ಶ್ರಮಿಕ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಜನರು ತಾವು ಕಾಯಕ ಮಾಡುವಲ್ಲಿ ಜನಪದ. ಸಾಹಿತ್ಯ ಹಾಸು ಹೊಕ್ಕಾಗಿದ್ದು ಮಹೀಳೆಯರು ಜನಪದ ಕಲಾವಿದರು ಇದ್ದಾರೆ. ಜನಪದದಲ್ಲಿ ನೈತಿಕ ಮೌಲ್ಯಗಳಿವೆ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಜನಪದ ಸಾಹಿತ್ಯ ಬಹುಮುಖ್ಯವಾಗಿದೆ ಬಿಸುವಾಗ,ಕುಟ್ಟುವಾಗ ಬೆಳೆ ಕೋಯ್ಲಿ ಮಾಡುವಾಗ ಜನಪದ ಬಾಯಿಂದ ಬಯಿಗೆ ಹಾಡುತ್ತ ಬಂದರೂ ಕೂಡ ಸಾಕಷ್ಟು ಬರಹದಲ್ಲಿ ಸಿಗದೆ ಇರವುದು ದರುಂತದ ಸಂಗತಿ ಸರ್ಕಾರ ಜನಪದ ಕಲಾವಿದರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದರೆ ಜನಪದ ಉಳಿಯುತ್ತದೆ ಎಂದರು.
ಗ್ರಾಮ ನೈರ್ಮಲ್ಯ ಕರಣ ಹಾಗೂ ಪಾಳೆಗಾರರ ಅಲಕ್ಷಿತ ಸಾಹಿತ್ಯ. ರೈತ ಅಂದು. ಇಂದು ಶ್ರಮಿಕ ವರ್ಗದ ಬದುಕು ಬರಹ ಎಂಬ ವಿಷಯದ ಬಗ್ಗೆ ನ್ಯಾಯವಾದಿ ಕಣವಿಹಳ್ಳಿ ಮಂಜುನಾಥ ಮಾತನಾಡಿ ರೈತ ಸಾಕಷ್ಟು ಬದಲಾವಣೆಯಾಗಿದ್ದು ಆರ್ಥಿಕ ಸಾಹಿತ್ಯ ಸೇರಿದಂತೆ ಮುಂದುವರೆಯುತ್ತಿದ್ದಾನೆ. ವೈಜ್ಞಾನಿಕ ವಿಧಾನಗಳನ್ನು ಬಳಸಿ ಲಾಭದಾಯಕ ಬೆಳೆಗಳನ್ನು ಬೆಳೆಯಬೇಕು.
ಜನಪದದ ಸೃಷ್ಟಿ ಹೆಣ್ಣು ಜನಪದದಲ್ಲಿ ಸಿಂಹ ಪಾಲು ಮಹೀಳೆಯರದೆ ಆಗಿದೆ. ಹರಪನಹಳ್ಳಿಯಲ್ಲಿ ರಾಜಸೋಮಶೇಖರ ನಾಯಕ ಉತ್ತಮ ಆಡಳಿತ ನೆಡೆಸಿದ್ದು ಇಲ್ಲಿ ಇನ್ನು ಕೂಡ ಕೋಟೆಯ ಕುರುಹುಗಳು ಇವೆ.ಕನ್ನಡ ಕರಳು ಬಾಷೆಯಾಗಬೇಕು. ನವಂಬರ್ ಕನ್ನಡ ವಾಗದೆ ನಂ.೧ ಕನ್ನಡವಾಗುವ ನಿಟ್ಟಿನಲ್ಲಿ ನಾವೆಲ್ಲರು ಕನ್ನಡ ಬಾಷೆಯನ್ನು ಉಳಿಸಿ ಬೆಳಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶತಮಾನ ಕಂಡ ಕನ್ನಡ ಸಾಹಿತ್ಯ ಪರಿಷತ್ ಇಂದು ಹೆಮ್ಮರವಾಗಿ ಬೆಳೆದಿದ್ದು ಕನ್ನಡವನ್ನು ಉಳಿಸುವ ಬೆಳಸುವ ಕೆಲಸವನ್ನು ಮಾಡುವತ್ತ ಎಲ್ಲರ ಸಹಕಾರ ಅಗತ್ಯವಾಗಿದೆ. ತಾಲ್ಲೂಕಿನಲ್ಲಿ ಕೂಡ ಕನ್ನಡ ಸಾಹಿತ್ಯ ಪರಿಷತ್ ಅಜೀವ ಸದಸ್ಯತ್ವ ವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವ ಗುರಿ ನಮ್ಮದಾಗಿದ್ದು ದತ್ತಿ ಕಾರ್ಯಕ್ರಮಗಳ ಮೂಲಕ ಜನಪದ .ಕಲೆ. ಸಾಹಿತ್ಯ ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದ್ದವೆ ಎಂದರು.
ಆರ್ಯವೈಶ್ಯ ಮಹಾಮಂಡಳಿ ಅದ್ಯಕ್ಷ ಬಿ. ದಯಾನಂದ ಶೆಟ್ರು, ಆರ್ಯವೈಶ್ಯ ಮಹಾಮಂಡಳಿ ಗೌರವ ಅದ್ಯಕ್ಷ ಡಾ. ಪಿ. ಅನಂತ ಶೆಟ್ರು ಮಾತನಾಡಿದರು.
ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿಗಳಾದ ಆರ್.ಪದ್ಮರಾಜ ಜೈನ್, ಜಿ.ಮಹಾದೇವಪ್ಪ, ಗೌರವ ಕೋಶಾಧಿಕಾರಿ ಕೆ.ರಾಘವೇಂದ್ರ ಶೆಟ್ಟಿ ಕಾರ್ಯಕಾರಿ ಮಂಡಳಿಯ ನಿರ್ದೆಶಕರುಗಳಾದ ಎಸ್.ಮಕಬುಲ್ ಭಾಷ, ಆರ್ಯವೈಶ್ಯ ಸಮಾಜದ ಪ್ರಧಾನ ಕಾರ್ಯದರ್ಶಿ ಎಚ್.ಸಿ.ನಟೇಶ ಉಪಾಧ್ಯಕ್ಷ ಬಿ. ಹನುಮಂತ ಶೆಟ್ರು, ಮುಖಂಡ ಮುದುಗಲ್ ಗುರುನಾಥ, ಶಿಕ್ಷಕ ವಿಠೋಬ ಎಸ್.ಎಚ್. ಉಪನ್ಯಾಸಕ ಬಿ.ಕೃಷ್ಣಮೂರ್ತಿ, ಮಂಜುನಾಥ, ಸೇರಿದಂತೆ ಇತರರು ಇದ್ದರು.