Thursday, 12th December 2024

ಕನ್ನಡ ನಾಮಫಲಕ ಅಳವಡಿಸಲು ಒತ್ತಾಯ

ಕೊಲ್ಹಾರ: ಪಟ್ಟಣದ ಅಂಗಡಿ ಮುಂಗಟ್ಟುಗಳ, ಹೊಟೇಲ್ ಹಾಗೂ ವಾಣಿಜ್ಯ ಸಂಕೀರ್ಣ, ಶಿಕ್ಷಣ ಸಂಸ್ಥೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕ ಅಧ್ಯಕ್ಷ ರಾಜು ವಡ್ಡರ್ ಒತ್ತಾಯಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60% ರಷ್ಟು ಕನ್ನಡ ಅಕ್ಷರಗಳು ಇರಬೇಕು ಎಂಬ ಆದೇಶವನ್ನು ಬಹುತೇಕರು ಪಾಲನೆ ಮಾಡುತ್ತಿಲ್ಲ ಇದರಲ್ಲಿ ಕನ್ನಡ ವಿರೋಧಿ ಧೋರಣೆ ಕಂಡುಬರುತ್ತಿದೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕನ್ನಡ ಕಡ್ಡಾಯಕ್ಕೆ ಆದೇಶ ನೀಡಬೇಕು ಇಲ್ಲದಿದ್ದರೆ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ‌.