Sunday, 15th December 2024

ಕರವೇ ವತಿಯಿಂದ ರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

ಮಾನ್ವಿ: ಕರ್ನಾಟಕ ರಕ್ಷಣಾ ವೇದಿಕೆ ಹೆಚ್.ಶಿವರಾಮೇಗೌಡ ಬಣ ತಾ.ಘಟಕ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ.29ರಂದು ಕನ್ನಡಮ್ಮನಿಗೆ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರ ಅಂಗವಾಗಿ ನ.11 ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಬೆಳಿಗ್ಗೆ 10ರಿಂದ11ರವರೆಗೆ ಕಲ್ಮಠ ಕಾಲೇಜಿನಲ್ಲಿ ನಡೆಯಲಿದೆ.

ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆಯನ್ನು ನ.12ರಂದು ಗಾಂಧಿಸ್ಮಾರಕ ಕಾಲೇಜ್‌ನಲ್ಲಿ ಅಯೋಜಿಸಲಾಗಿದ್ದು 13 ರಂದು ತಾಲ್ಲೂಕಿನ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ ಗೀತಾಂಜಲಿ ಗಾಯನ ಸ್ಪರ್ಧೆಯನ್ನು ನೇತಾಜಿ ಪ್ರೌಢಶಾಲೆ ಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭಗೊಳ್ಳಲಿದ್ದು ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರು ಗಳನ್ನು ನ.10ರೊಳಗಾಗಿ ಅಯೋಜಕರಲ್ಲಿ ನೋಂದಾಯಿಸುವAತೆ ಕರವೇ ತಾ.ಅಧ್ಯಕ್ಷ ಆನಂದಸ್ವಾಮಿ ಕೊರಿದ್ದಾರೆ ಹೆಚ್ಚಿನ ಮಾಹಿತಿಗಾಗಿ ದೂ ಸಂಖ್ಯೆ 9980833599 ಗೆ ಸಂಪರ್ಕಿಸಬಹುದು.