ಸಿಂಧನೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಶಾಸಕರುಗಳ ಕನ್ನಡ ದ್ರೋಹಿ ನಡುವಳಿಕೆ ವಿಷಯ ಖಂಡಿಸಿ ಕರವೇ (ನಾರಾಯಣಗೌಡ ಬಣ್ಣದ ) ಕಾರ್ಯಕರ್ತರು ತಸಿಲ್ದಾರ್ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರವಾಸಿ ಮಂದಿರದಿಂದ ಪ್ರತಿಭಟನೆ ಮೂಲಕ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಮಿನಿ ವಿಧಾನಸೌಧ ಮುತ್ತಿಗೆ ಹಾಕಿದರು ಈ ವೇಳೆ ಪೊಲೀಸರು ಬಂಧಿಸಿ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿದರು.
ಕರವೇ ನಗರ ಘಟಕದ ಅಧ್ಯಕ್ಷ ದವಲಸಬ್ ದೊಡ್ಡಮನಿ ಮಾತನಾಡಿ, ಮಸ್ಕಿ ಬೆಳಗಾವಿ ಹಾಗೂ ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಿದೆ ಸರ್ಕಾರದ ಸ್ವಾರ್ಥಕ್ಕಾಗಿ ಕನ್ನಡ ನಾಡು ಬಲಿ ಕೊಡುವುದು ಸರಿಯಲ್ಲ, ಇನ್ನು ಮುಂದೆ ಒಂದೊಂದು ಜಾತಿ ಒಂದೊಂದು ಪ್ರಾಧಿಕಾರ ರಚನೆ ಮಾಡಿದ್ದಾರೆ.
ಕನ್ನಡ ನಾಡಿಗೆ ಏನು ಹೆಸರು ಇರುತ್ತದೆ ರಾಜಕಾರಣ ಮಾಡುವುದಕ್ಕಾಗಿ ಕನ್ನಡಿಗರನ್ನು ಬಲಿ ಕೊಡುವ ಕೆಲಸ ಮಾಡಬೇಡಿ, ಕೂಡಲೇ ರಾಜಕಾರ ಗೋಷಣೆ ಹಿಂತೆಗೆದುಕೊಳ್ಳಬೇಕು ಇಲ್ಲವಾದರೆ ಮುಂದಿನ ದಿನಮಾನದಲ್ಲಿ ಉಗ್ರವಾದ ಹೋರಾಟ ಹಮ್ಮಿ ಕೊಳ್ಳಲಾಗುತ್ತಿದೆ ಎಂದರು.
ಸಿಂಧನೂರು ಬಂದ್ ಇಲ್ಲ, ಮರಾಠ ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಕನ್ನಡಪರ ಸಂಘಟನೆಗಳು ಘೋಷಣೆ ಶನಿವಾರ ಮಾಡಿದ್ದರು ಇದರ ಬಿಸಿ ಸಿಂಧನೂರಿನಲ್ಲಿ ಮಾತ್ರ ಕಂಡುಬಂದಿಲ್ಲ , ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮೂಲಕ ತಶಿಲ್ದಾರ ರಿಗೆ ಮನವಿ ಸಲ್ಲಿಸಿದರು ಬೆಳಗ್ಗೆಯಿಂದ ಸಂಜೆವರೆಗೂ ದಿನನಿತ್ಯ ಇರುವ ರೀತಿಯಲ್ಲಿ ವ್ಯವಹಾರಗಳು ಕಂಡುಬಂದವು, ಹಾಗಾಗಿ ಕರವೇ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಅಲ್ಲಲ್ಲಿ ಜನ ಮಾತನಾಡಿಕೊಂಡರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಗಂಗಣ್ಣ ಡಿಶ್,ಉಪಾಧ್ಯಕ್ಷ ದೇವೇಂದ್ರಗೌಡ, ಯುವ ಘಟಕ ಅಧ್ಯಕ್ಷ ರಾಮಕೃಷ್ಣ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಶರಣಬಸವ ಮಲ್ಲಾಪುರ, ರಾಜು ಅಡವಿಬಾವಿ, ಶರಣಪ್ಪ ಭಾಷಾ ಸಾಬ್ ಸುರೇಶ್ ಇತರರು ಇದ್ದರು