Thursday, 12th December 2024

ಹರಪನಹಳ್ಳಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

ಹರಪನಹಳ್ಳಿ : ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಬಿಜೆಪಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು  ಆಚರಿಸಲಾಯಿತು.

ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿಚರಿಸಿ ಸಂಭ್ರಮಿಸಿದರು. ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ಮೆ ತಿಂಗಳ  ೧೯೯೯ ರಲ್ಲಿ ಪಾಕಿಸ್ಥಾನ ನಡೆಸಿದ ದುರಾಕ್ರಮ ವನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸಿದರು.ಅಂದು ಅಟಲ್ ಬಿಹಾರಿ ವಾಜಪೇಯಿ ಪ್ರದಾನ ಮಂತ್ರಿಗಳಾಗಿದ್ದರು, ಮೂರು ತಿಂಗಳು ನಡೆದ ಯುದ್ದಕ್ಕೆ ಸೈನಿಕರು ವಿರೋಚಿತವಾಗಿ ಹೋರಾಡಿದರು ಎಂದು ಹೇಳಿದರು.

ಪುರಸಭಾ ಅಧ್ಯಕ್ಷ ಎಚ್ .ಎಂ.ಅಶೋಕ, ವಿಷ್ಣುವರ್ದನ ರೆಡ್ಡಿ, ಲೋಕೇಶ, ಬಾಗಳಿ ಕೊಟ್ರೇಶಪ್ಪ, ಕಲ್ಲೇರ ಬಸವರಾಜ, ಮಲ್ಲೇಶ, ನಿವೃತ್ತ ಯೋಧ ರೇಖಪ್ಪ, ಆರ್ .ಮಂಜುನಾಥ,  ವಕೀಲ ಬಿ.ತಿಪ್ಪೇಶ್, ಅನಿಲ್ ಕುಮಾರ, ತಿಮ್ಮಪ್ಪ, ಸಕೆ.ಬಸವರಾಜ, ಶಾಂತಕುಮಾರ, ಇತರರು ಪಾಲ್ಗೊಂಡಿದ್ದರು.

ಚಿತ್ರ : ಹರಪನಹಳ್ಳಿಯಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಶಾಸಕ ಜಿ.ಕರುಣಾಕರರೆಡ್ಡಿ ಯವರ ಸಮ್ಮುಖದಲ್ಲಿ ಆಚರಿಸಲಾಯಿತು. ಪುರಸಭಾ ಅಧ್ಯಕ್ಷ ಅಶೋಕ ಇತರರು ಇದ್ದರು.