ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ (Karnataka Government Employees) ಸಂಘದ 2024-2029 ಅವಧಿಯ ಆಡಳಿತ ಮಂಡಳಿಗಾಗಿ ನಡೆಸಲು ಉದ್ದೇಶಿಸಲಾಗಿದ್ದ ಚುನಾವಣೆಗೆ (election) ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತಡೆಯಾಜ್ಞೆ (Interim Stay order) ನೀಡಿದೆ.
ಚುನಾವಣಾಧಿಕಾರಿ ನೇಮಕ ಕ್ರಮ ಅಸಿಂಧುವಾಗಿದೆ ಎಂಬ ದೂರುದಾರರ ವಾದವನ್ನು ಕೋರ್ಟ್ ಎತ್ತಿ ಹಿಡಿದಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಯಾದ ಕೃಷ್ಣಯ್ಯ ಎಂಬವರು ಈ ಕುರಿತು ನ್ಯಾಯಾಲಯದ ಕದ ತಟ್ಟಿದ್ದರು.
ಸರಕಾರಿ ನೌಕರರ ಸಂಘದ 20.02.2022ರ ಬೈಲಾದ ನಿಯಮ 48-ಎ ಪ್ರಕಾರ ಚುನಾವಣೆ ನಡೆಯಬೇಕು. ಅದರ ಪ್ರಕಾರ ಚುನಾವಣೆ ಅಧಿಕಾರಿಯು ಆಯಾ ರಾಜ್ಯ ಅಥವಾ ವಲಯದ ಎ ಅತವಾ ಬಿ ಡಿವಿಷನ್ ಅಧಿಕಾರಿ ಆಗಿರಬೇಕು. ಆದರೆ ಹನುಮರಸಯ್ಯ ಎ. ಎಂಬ ನಿವೃತ್ತ ಅಧಿಕಾರಿಯನ್ನು ರಾಜ್ಯ ಚುನಾವಣಾ ಅಧಿಕಾರಿಯಾಗಿ ನೇಮಿಸಲಾಗಿದೆ. ಇದು ಬೈಲಾ ನಿಯಮ ಉಲ್ಲಂಘನೆಯಾಗಿದೆ. ಚುನಾವಣಾಧಿಕಾರಿ ನೇಮಕವೇ ಅಸಿಂಧುವಾಗಿದ್ದು, ಮುಂದಿನ ಪ್ರಕ್ರಿಯೆಗಳು ನಡೆಯಲು ಶಕ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಅಕ್ಟೋಬರ್ 9ರಿಂದ ನೌಕರರ ಸಂಘದ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಇದನ್ನೂ ಓದಿ: Daily Wage Workers: ದಿನಗೂಲಿ ನೌಕರರಿಗೆ ಗುಡ್ ನ್ಯೂಸ್ : ಕನಿಷ್ಠ ವೇತನ ನಿಗದಿಗೊಳಿಸಿದ ರಾಜ್ಯ ಸರಕಾರ